ಲಕ್ನೋ : ವ್ಯಕ್ತಿಯೊಬ್ಬ ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರಕ್ಕೆ ಎಸಗುವ ಸಾಧ್ಯತೆ ಇತ್ತು. ಆದರೆ ಕೋತಿಗಳು ಬೆದರಿಸಿ ಅಮಾನವೀಯ ಕೃತ್ಯ ತಪ್ಪಿಸಿವೆ. ಉತ್ತರ ಪ್ರದೇಶದ ಭಾಗಪತ್ ನಲ್ಲಿ ಘಟನೆ ನಡೆದಿದೆ. ಸೆಪ್ಟೆಂಬರ್ 20ರಂದು ದೌಲ ಗ್ರಾಮದಲ್ಲಿ ಮನೆ ಮುಂದೆ ಆಡುತ್ತಿದ್ದ ಬಾಲಕಿಯನ್ನು ವ್ಯಕ್ತಿಯೊಬ್ಬ ಪಾಳುಬಿದ್ದ ಕಟ್ಟಡಕ್ಕೆ ಕರೆದುಕೊಂಡು ಹೋಗಿದ್ದ. ಆಗ ಕೋತಿಗಳನ್ನು ಕಂಡು ಆರೋಪಿ ಬೆದರಿ ಪರಾರಿಯಾಗಿದ್ದಾನೆ.