ಅಯೋಧ್ಯೆ: ರಾಮ ಮಂದಿರಕ್ಕೆ ಬರುವ ಭಕ್ತರ ಅನುಕೂಲಕ್ಕಾಗಿ ಮಂದಿರದ ಟ್ರಸ್ಟ್ ದೇವಳದ ಮೊದಲನೇ ಅಂತಸ್ಥಿಗೆ 3 ಲಿಫ್ಟ್‌ಗಳನ್ನು ಅಳವಡಿಸಲಿದೆ. ದೇಗುಲ ಮೂರು ಅಂತಸ್ತಿನದ್ದಾಗಿದ್ದು, ನೆಲಮಹಡಿಯಲ್ಲಿ ರಾಮನ ಗರ್ಭಗುಡಿಯಿದೆ. 1ನೇ ಮಹಡಿಯಲ್ಲಿ ರಾಮನ ದರ್ಬಾರ್ ಹಾಲ್ ಇದ್ದು, ಪ್ರಸ್ತುತ ಜನರು ಮೆಟ್ಟಿಲು ಹತ್ತಿಕೊಂಡು ದರ್ಬಾರ್ ಹಾಲ್‌ಗೆ ಹೋಗಬೇಕಾಗಿದೆ. ಇದು ಅಂಗವಿಕಲರಿಗೆ ಕಷ್ಟವಾಗಿರುವ ಕಾರಣ ಲಿಫ್ಟ್ ಅಳವಡಿಸಲಾಗುತ್ತಿದೆ ಎಂದು ಟ್ರಸ್ಟ್‌ನ ಅಧಿಕಾರಿ ತಿಳಿಸಿದ್ದಾರೆ. ಈ ಬಗ್ಗೆ ಮಾತನಾಡಿದ ಅವರು, 2 ಲಿಫ್ಟ್‌ಗಳನ್ನು ವಿಕಲ ಚೇತನರಿಗೆ ಮತ್ತೊಂದು ಲಿಫ್ಟ್ ಅನ್ನು ವಿಐಪಿಗಳು, ಸಾಧು ಸಂತರಿಗಾಗಿ ಅಳವಡಿಸಲಾಗುತ್ತಿದೆ ಎಂದರು.