Join The Telegram | Join The WhatsApp |
ಬೆಳಗಾವಿ :
ಬೆಂಗಳೂರು ಮತ್ತು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳನ್ನು ಹೊರತುಪಡಿಸಿದರೆ ಬೆಳಗಾವಿ ವಿಮಾನ ನಿಲ್ದಾಣ ಕ್ಷಿಪ್ರಗತಿಯಲ್ಲಿ ಬೆಳೆಯುತ್ತಿದೆ. ಸ್ವತಂತ್ರ ಪೂರ್ವದಲ್ಲೇ ಬೆಳಗಾವಿ ವಿಮಾನ ನಿಲ್ದಾಣ ಸ್ಥಾಪನೆಗೊಂಡಿದೆ. ಆದರೆ, ಇದೀಗ ಅಂತಾರಾಷ್ಟ್ರೀಯ ಮಟ್ಟದ ಸೇವೆ ಒದಗಿಸಬೇಕಿದ್ದ ಈ ಪ್ರತಿಷ್ಠಿತ ವಿಮಾನ ನಿಲ್ದಾಣದಿಂದ ಪ್ರಮುಖ ವಿಮಾನ ಸೇವೆಗಳು ಬಂದ್ ಆಗಿವೆ.
ವಿಧಾನ ಮಂಡಲದ ಉಭಯ ಸದನಗಳ ಅಧಿವೇಶನ ಬೆಳಗಾವಿಯಲ್ಲಿ ನಡೆಯುವುದರಿಂದ ಇದೀಗ ಕುಂದಾನಗರಿ ರಾಜ್ಯದ ಎರಡನೇ ರಾಜಧಾನಿ ಎಂದೇ ಖ್ಯಾತಿ ಪಡೆದಿದೆ. ಬೆಳಗಾವಿ ವಿಮಾನ ನಿಲ್ದಾಣದಿಂದ ರಾಜಧಾನಿ ಬೆಂಗಳೂರು, ವಾಣಿಜ್ಯ ನಗರಿ ಮುಂಬೈ, ಪುಣೆ, ಗೋವಾಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿನ ಜನ ಪ್ರತಿದಿನ ತೆರಳುತ್ತಾರೆ. ಆದರೆ ಏಕಾಏಕಿ ಇಷ್ಟೊಂದು ಸಂಖ್ಯೆಯಲ್ಲಿ ಬೆಳಗಾವಿಯಿಂದ ಇಷ್ಟೊಂದು ಸಂಖ್ಯೆಯಲ್ಲಿ ವಿಮಾನಸೇವೆ ನಿಲುಗಡೆಯಾಗಿರುವುದರ ಹಿಂದಿನ ಕೈಗಳು ಯಾವುವು ಎನ್ನುವುದು ಬೆಳಗಾವಿ ಜನತೆಯನ್ನು ಕಾಡುತ್ತಿರುವ ಪ್ರಶ್ನೆಯಾಗಿದೆ.
ಉದ್ಯಮಿಗಳ ಆಕ್ರೋಶ :
ಪ್ರಮುಖ ವಿಮಾನಯಾನ ಕಂಪನಿಗಳು ಬೆಳಗಾವಿ ಮಹಾನಗರದಿಂದ 12 ಪ್ರಮುಖ ವಿಮಾನ ಸೇವೆ ಬಂದ್ ಆಗಿರುವುದರಿಂದ ಉದ್ಯಮಿಗಳು ತೊಂದರೆ ಅನುಭವಿಸುವಂತಾಗಿದೆ ಎಂದು ಉದ್ಯಮಿಗಳು ಬೇಸರ ವ್ಯಕ್ತಪಡಿಸಿದ್ದಾರೆ.
ಬೆಳಗಾವಿ ಚೇಂಬರ್ ಆಫ್ ಕಾಮರ್ಸ್ ನಲ್ಲಿ ಸಭೆ ನಡೆಸಿದ ಉದ್ಯಮಿಗಳು ಬೆಳಗಾವಿಗೆ ಸಾಕಷ್ಟು ಸಲ ಅನ್ಯಾಯವಾಗಿದೆ. ಇದೀಗ 12 ವಿಮಾನ ಸೇವೆ ನಿಂತುಹೋಗಿದೆ. ಇದರಿಂದ ಬೆಳಗಾವಿ ವ್ಯಾಪಾರೋದ್ಯಮ ಕ್ಷೇತ್ರಕ್ಕೆ ಭಾರಿ ನಷ್ಟವಾಗಿದೆ. ದೆಹಲಿ, ಚೆನ್ನೈ, ಮುಂಬೈ, ಬೆಂಗಳೂರು ಮಾರ್ಗದಲ್ಲಿ ಇನ್ನಷ್ಟು ಸೇವೆ ಹೆಚ್ಚಾಗಬೇಕಾಗಿತ್ತು. ಬೆಳಗಾವಿಗೆ ಉದ್ಯಮಿಗಳು ಹೂಡಿಕೆಗೆ ಆಗಮಿಸುತ್ತಾರೆ. ಆದರೆ, ಸರಿಯಾದ ವಿಮಾನ ಸೇವೆ ದೊರೆಯುತ್ತಿಲ್ಲ. ಬೆಳಗಾವಿ ವೇಗವಾಗಿ ಬೆಳೆಯುತ್ತಿದೆ. ವಿಮಾನ ಸೇವೆ ಬಂದ್ ಮಾಡುವುದರಿಂದ ಉದ್ಯಮ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ನಷ್ಟವಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
Join The Telegram | Join The WhatsApp |