Join The Telegram | Join The WhatsApp |
ನಾಸಿಕ್-
ಮಹಾರಾಷ್ಟ್ರದ ನಾಸಿಕ್‌ನಲ್ಲಿ ವರ್ಷದ ಮೊದಲ ದಿನ ಹೃದಯ ವಿದ್ರಾವಕ ಘಟನೆಯೊಂದು ನಡೆದಿದೆ. ನಾಸಿಕ್-ಮುಂಬೈ ಹೆದ್ದಾರಿಯಲ್ಲಿರುವ ಗೊಂಡೆ ಗ್ರಾಮದ ಜಿಂದಾಲ್ ಕಂಪನಿಯಲ್ಲಿ ಭಾರಿ ಸ್ಫೋಟ ಸಂಭವಿಸಿದ್ದು, 9 ಮಂದಿ ಸಜೀವ ದಹನವಾಗಿದ್ದಾರೆ ಎಂದು ತಿಳಿದು ಬಂದಿದೆ. ಬೆಳಗ್ಗೆ 11 ಗಂಟೆ ಸುಮಾರಿಗೆ ಈ ಅವಘಡ ಸಂಭವಿಸಿದೆ. ಈ ಕಂಪನಿಯ ಬಾಯ್ಲರ್ ಸ್ಪೋಟಗೊಂಡಿದೆ ಎಂದು ಹೇಳಲಾಗಿದೆ.
ಆ ಪ್ರದೇಶದಲ್ಲಿ ಭಾರೀ ಶಬ್ಧ ಉಂಟಾಗಿದೆ. ಕಂಪನಿಯಲ್ಲಿ ಸ್ಫೋಟದ ಸದ್ದು ಸುತ್ತಮುತ್ತಲಿನ 20ರಿಂದ 25 ಗ್ರಾಮಗಳಲ್ಲಿ ಕೇಳಿ ಬಂದಿದೆ. ಈ ಸ್ಫೋಟದಿಂದ ಅನೇಕರು ಬೆಚ್ಚಿಬಿದ್ದರು. ಕಂಪನಿಯಲ್ಲಿ 200ಕ್ಕೂ ಹೆಚ್ಚು ಕಾರ್ಮಿಕರು ಕಾರ್ಯ ನಿರ್ವಹಿಸುತ್ತಿದ್ದರು. ಈ ಕಂಪನಿ ಮುಚ್ಚಿದ ಪ್ರದೇಶದಲ್ಲಿರುವುದರಿಂದ ಸಂಪೂರ್ಣ ಮಾಹಿತಿ ಇನ್ನೂ ಬಹಿರಂಗವಾಗಿಲ್ಲ. ಕಾರ್ಖಾನೆಯಲ್ಲಿ ಬೆಳಗ್ಗೆ 11 ಗಂಟೆಗೆ ಭಾರಿ ಬಾಯ್ಲರ್ ಸ್ಫೋಟದ ನಂತರ ಬೆಂಕಿ ಕಾಣಿಸಿಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Join The Telegram | Join The WhatsApp |