ಬೆಳಗಾವಿ: ಕಣಬರ್ಗಿ ಕೆರೆಯಲ್ಲಿ ಭಾನುವಾರ ಎರಡು ತಿಂಗಳ ಗಂಡು ಮಗು ಎಸೆದು ಕೊಲ್ಲಲು ಯತ್ನಿಸಿದ ತಾಯಿಯನ್ನು ಮಾಳಮಾರುತಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಶಾಂತಾ ರಾಬರ್ಟ್ ಕರವಿನಕುಪ್ಪಿ(35) ಬಂಧಿತೆ. ಸ್ಥಳೀಯರು ಮಗುವನ್ನು ರಕ್ಷಿಸಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಮಗುವಿಗೆ ಪಿಟ್ಸ್ ಬರುತ್ತಿತ್ತು. ಎಷ್ಟೇ ಚಿಕಿತ್ಸೆ ಕೊಡಿಸಿದರೂ ಗುಣಮುಖವಾಗಿರಲಿಲ್ಲ. ಹಾಗಾಗಿ ಮನೆಯಲ್ಲಿ ಯಾರೂ ಇಲ್ಲದಿರುವಾಗ ತಂದು ಕೆರೆಗೆ ಎಸೆದಿದ್ದೇನೆ ಎಂದು ಮಹಿಳೆ ಪ್ರಾಥಮಿಕ ತನಿಖೆ ವೇಳೆ ತಿಳಿಸಿದ್ದಾರೆ. ತನಿಖೆ ಮುಂದುವರಿದಿದೆ ಎಂದು ನಗರ ಪೊಲೀಸ್ ಉಪ ಆಯುಕ್ತ(ಕಾನೂನು ಮತ್ತು ಸುವ್ಯವಸ್ಥೆ) ರೋಹನ್ ಜಗದೀಶ ತಿಳಿಸಿದ್ದಾರೆ. ಮಾಳಮಾರುತಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.