ಕೋಟ(ಬ್ರಹ್ಮಾವರ): ಕೋಟದ ಹಲವು ಮಕ್ಕಳ ತಾಯಿ ಅಮೃತೇಶ್ವರಿ ದೇವಸ್ಥಾನದ ವಾರ್ಷಿಕ ಜಾತ್ರೋತ್ಸವದ ಪ್ರಯುಕ್ತ ಶನಿವಾರ ಢಕ್ಕೆ ಬಲಿ, ದರ್ಶನ ಸೇವೆ, ತುಲಾಭಾರ ಸೇವಾ ಕಾರ್ಯಕ್ರಮ ನಡೆಯಿತು.
ದೇವಸ್ಥಾನದ ದೇವಿ ದರ್ಶನ ಪಾತ್ರಿ ಸುರೇಶ ಜೋಗಿ, ಮಾರಿಕಾಂಬೆ ಪಾತ್ರಿ ಉದಯ ಜೋಗಿ ದೇವಸ್ಥಾನದ ಮೂಲಕ ರಾಷ್ಟ್ರೀಯ ಹೆದ್ದಾರಿ ಅಮೃತೇಶ್ವರಿ ಸರ್ಕಲ್ ಬಳಿ ಬಂದು, ಧಾರ್ಮಿಕ ದರ್ಶನ ಸೇವೆ ನೆರವೇರಿಸಿ ಪ್ರಸಾದ ವಿತರಿಸಿದರು.
ವೇ.ಮೂ ಮಧುಸೂದನ್ ಬಾಯರಿ, ಸುಬ್ರಹ್ಮಣ್ಯ ಅಡಿಗ ದೇವಸ್ಥಾನದ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿದರು.
ಸುಮಾರು 300 ಕ್ಕೂ ಅಧಿಕ ಮಂದಿ ತುಲಾಭಾರ ಸೇವೆಯ ಹರಕೆ ಸಮರ್ಪಿಸಿದ್ದು ವಿಶೇಷವಾಗಿತ್ತು. ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಆನಂದ ಸಿ ಕುಂದರ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ ಕುಮಾರ್ ಶೆಟ್ಟಿ, ಸದಸ್ಯರಾದ ಸುಭಾಷ ಶೆಟ್ಟಿ, ಗಣೇಶ ನೆಲ್ಲಿಬೆಟ್ಟು, ಸುಧಾ ಎ ಪೂಜಾರಿ, ಜ್ಯೋತಿ ದೇವದಾಸ ಕಾಂಚನ್, ರತನ್ ಐತಾಳ, ಶಿವ ಪೂಜಾರಿ, ಚಂದ್ರ ಆಚಾರ್, ಸುಬ್ರಾಯ ಜೋಗಿ, ಅರ್ಚಕ ದಿಕ್ಷೀತ್ ಜೋಗಿ ಇದ್ದರು.