ಬೆಳಗಾವಿ : ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಅವರು ವಿಶ್ವನಾಯಕ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ಶುಕ್ರವಾರ ಡಿ-20 ರಂದು ನವದೆಹಲಿಯಲ್ಲಿ ಭೇಟಿಯಾದರು ಈ ಸಂದರ್ಭದಲ್ಲಿ ತಂದೆ ಭೀಮಶೇಪ್ಪ, ತಾಯಿ ದುಂಡವ್ವ, ಸಹೋದರರಾದ ಶಿವಪ್ಪ, ಬಸವರಾಜ ಸೇರಿದಂತೆ ಕುಟುಂಬದ ಸದಸ್ಯರು ಹಾಜರಿದ್ದರು. ಈರಣ್ಣ ಕಡಾಡಿ ಅವರ ಸಹೋದರರ ಸುಪುತ್ರ ಅವರ ವಿವಾಹ ಸಮಾರಂಭದ ಆಮಂತ್ರಣವನ್ನು ಪ್ರಧಾನಿ ನರೇಂದ್ರ ಮೋದಿಯವರಿಗೆ ವಿನಯಪೂರ್ವಕವಾಗಿ ನೀಡಿದರು. ಪ್ರಧಾನಿಯವರು ಕೆಲ ಹೊತ್ತು ಈರಣ್ಣ ಕಡಾಡಿ ಅವರ ಕುಟುಂಬ ವರ್ಗದವರ ಜೊತೆ ಆತ್ಮೀಯವಾಗಿ ಮಾತುಕತೆ ನಡೆಸಿ ಎಲ್ಲರ ಮನ ಗೆದ್ದರು. ಅದರಲ್ಲೂ ಕಡಾಡಿ ಕುಟುಂಬದ ಹಿರಿಯರ ಜೊತೆ ಉಭಯ ಕುಶಲೋಪರಿ ಮಾತುಕತೆ ನಡೆಸಿ ಉತ್ತಮ ಆಯುರಾರೋಗ್ಯ ಭಾಗ್ಯ ಲಭಿಸಲಿ ಎಂದು ಹಾರೈಸಿದರು.
ಈರಣ್ಣ ಕಡಾಡಿ ಅವರು ಬಿಜೆಪಿ ರಾಜ್ಯ ರೈತ ಮೋರ್ಚಾ ಅಧ್ಯಕ್ಷರಾಗಿ ಪಕ್ಷವನ್ನು ಸಂಘಟಿಸಿರುವುದು ಪ್ರತಿಯೊಬ್ಬರಿಗೂ ಮಾದರಿಯಾಗಿದೆ. ಕಳೆದ ಮೂರು ದಶಕಗಳಿಂದ ಬಿಜೆಪಿಯನ್ನು ಕರ್ನಾಟಕದಲ್ಲಿ ಕಟ್ಟಿ ಬೆಳೆಸುವಲ್ಲಿ ಕಡಾಡಿ ಅವರು ವಹಿಸಿರುವ ಪಾತ್ರ ಉಲ್ಲೇಖನೀಯ. ಪಕ್ಷದ ಸಂಘಟನೆಗಾಗಿ ಅವರು ಸದಾ ದುಡಿಯುತ್ತಿರುವುದನ್ನು ನಾನು ಅತ್ಯಂತ ಹತ್ತಿರದಿಂದ ಗಮನಿಸಿದ್ದೇನೆ. ಜನನಾಯಕರ ಪಾಲಿಗೆ ರೈತ ಕುಟುಂಬದಿಂದ ಬಂದಿರುವ ಈರಣ್ಣ ಕಡಾಡಿ ಅವರು ಸ್ಪೂರ್ತಿಯ ಸೆಲೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಕೊಂಡಾಡಿದರು.