18 ವರ್ಷದ ಯುವಕ ಗನ್ ಹಿಡಿದು ಗಡಿ ಕಾಯಲು ಸಮರ್ಥನಾಗಿರುತ್ತಾನೆ.‌ ದೇಶದ ಭವಿಷ್ಯ ಕಟ್ಟಲು 18 ವರ್ಷಕ್ಕೆ ಮತದಾನದ ಹಕ್ಕು ನೀಡುತ್ತೇವೆ. ಹಾಗೆ ಮೃಣಾಲ್ ಗೆ ಈಗ 30 ವರ್ಷ, ಇನ್ನೂ ಯುವಕ. ಜಗದೀಶ್ ಶೆಟ್ಟರ್ ಅವರು 32 ನೇ ವಯಸ್ಸಿಗೆ ಎಂಎಲ್ಎ ಆಗಿದ್ದವರು, ಅಂದು ಯುವಕರಿಗೆ ಜನರು ಬೆಂಬಲ ನೀಡದಿದ್ದರೆ ಜಗದೀಶ್ ಶೆಟ್ಟರ್ ಅವರು ಸಿಎಂ ಆಗುತ್ತಿರಲಿಲ್ಲ. ಹಾಗೆ ಈಗ ಬೆಳಗಾವಿ ಜಿಲ್ಲೆಯ ಜನರು ಜಿಲ್ಲೆಯ ಇಬ್ಬರು ಯುವಕರಿಗೂ ಆಶೀರ್ವಾದ ಮಾಡುತ್ತಾರೆ‌-ಲಕ್ಷ್ಮೀ ಹೆಬ್ಬಾಳ್ಕರ್

ಬೆಳಗಾವಿ: ಬೆಳಗಾವಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಮೃಣಾಲ ಹೆಬ್ಬಾಳಕರ್ ಮತ್ತು ಚಿಕ್ಕೋಡಿ ಲೋಕಸಭಾ ಅಭ್ಯರ್ಥಿ ಪ್ರಿಯಾಂಕಾ ಜಾರಕಿಹೊಳಿ ಸಿದ್ದರಾಮಯ್ಯ ಅವರ ಗ್ಯಾರಂಟಿ ಅಭ್ಯರ್ಥಿಗಳು, ಇಬ್ಬರೂ ಗೆದ್ದೆ ಗೆಲ್ಲುತ್ತಾರೆ ಎಂದು ಮಹಿಳಾ ಮತ್ತು ಮಕ್ಕಳ ಅಬಿವೃದ್ದಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದ್ದಾರೆ.

ಅರಬಾವಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಬೆಳಗಾವಿ ಹಾಗೂ ಚಿಕ್ಕೋಡಿ ಲೋಕಸಭಾ ವ್ಯಾಪ್ತಿಯಲ್ಲಿ ಜನರಿಂದ ಅಭೂತಪೂರ್ವ ಬೆಂಬಲ ಸಿಗುತ್ತಿದೆ. ಯಾವುದೇ ಊರಿಗೆ ಅಥವಾ ಒಂದು ಗಲ್ಲಿಗೆ ಹೋದರೂ ಜನ ಉತ್ಸಾಹದಿಂದ ಬೆಂಬಲ ನೀಡುತ್ತಿದ್ದಾರೆ. ಈ ಬಾರಿ ಬರಗಾಲ ಇದೆ, ಕೋವಿಡ್ ನಿಂದ ಜನ ತತ್ತರಿಸಿದ್ದಾರೆ, ಬೆಲೆ ಏರಿಕೆಯಿಂದ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ.‌ ಇಂತಹ ವಿಷಮ ಪರಿಸ್ಥಿಯಲ್ಲಿ ರಾಜ್ಯ ಸರ್ಕಾರದ ಪಂಚ ಗ್ಯಾರಂಟಿಗಳು ಜನರ ಕೈ ಹಿಡಿದಿವೆ.‌ ಕಾಂಗ್ರೆಸ್ ಸರ್ಕಾರದ ಆಡಳಿತದಿಂದ ಜನ ಸಮಾಧಾನದಿಂದ ಇದ್ದಾರೆ ಎಂದು ತಿಳಿಸಿದರು.

18 ವರ್ಷದ ಯುವಕ ಗನ್ ಹಿಡಿದು ಗಡಿ ಕಾಯಲು ಸಮರ್ಥನಾಗಿರುತ್ತಾನೆ.‌ ದೇಶದ ಭವಿಷ್ಯ ಕಟ್ಟಲು 18 ವರ್ಷಕ್ಕೆ ಮತದಾನದ ಹಕ್ಕು ನೀಡುತ್ತೇವೆ. ಹಾಗೆ ಮೃಣಾಲ್ ಗೆ ಈಗ 30 ವರ್ಷ, ಇನ್ನೂ ಯುವಕ. ಜಗದೀಶ್ ಶೆಟ್ಟರ್ ಅವರು 32 ನೇ ವಯಸ್ಸಿಗೆ ಎಂಎಲ್ಎ ಆಗಿದ್ದವರು, ಅಂದು ಯುವಕರಿಗೆ ಜನರು ಬೆಂಬಲ ನೀಡದಿದ್ದರೆ ಜಗದೀಶ್ ಶೆಟ್ಟರ್ ಅವರು ಸಿಎಂ ಆಗುತ್ತಿರಲಿಲ್ಲ. ಹಾಗೆ ಈಗ ಬೆಳಗಾವಿ ಜಿಲ್ಲೆಯ ಜನರು ಜಿಲ್ಲೆಯ ಇಬ್ಬರು ಯುವಕರಿಗೂ ಆಶಿರ್ವಾದ ಮಾಡುತ್ತಾರೆ‌ ಎಂದರು.‌

2013 ರಲ್ಲಿ ವಿಧಾನ ಸಭೆ ಚುನಾವಣೆ ಸ್ಪರ್ಧೆ ಮಾಡಿದ್ದೇನೆ.‌ 2014 ರಲ್ಲಿ ಲೋಕಸಭಾ ಚುನಾವಣೆ ಸ್ಪರ್ಧೆ ಮಾಡಿದ್ದೇನೆ.‌ ಜಿಲ್ಲೆಯ ಜನರ ಕಷ್ಟ, ಸುಖ ಕಣ್ಣಾರೆ ನೋಡಿದ್ದೇನೆ.‌ ಈ ಚುನಾವಣೆ ನನಗೆ ಹೊಸದಾಗಿ ಅನಿಸುತ್ತಿಲ್ಲ. ಕಾರ್ಯಕರ್ತರು, ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡುತ್ತಿದ್ದೇವೆ, ಐದು ಗ್ಯಾರಂಟಿಗಳು ಜನರ ಮನಕ್ಕೆ ಮುಟ್ಟುವ ಹಾಗೆ ಮಾಡಿದರೆ ನಮ್ಮ ಚುನಾವಣೆ ಮುಗಿದ ಹಾಗೆ ಎಂದು ತಿಳಿಸಿದರು.

ನಮ್ಮ ಗ್ಯಾರಂಟಿಗಳನ್ನು ಬಿಜೆಪಿಯವರು ಮೋದಿ ಗ್ಯಾರಂಟಿ ರೀತಿಯಲ್ಲಿ ಬಿಂಬಿಸುತ್ತಿದ್ದಾರೆ. ಆದರೆ ನಮ್ಮ ಐದು ಗ್ಯಾರಂಟಿಗಳು ಅನುಷ್ಠಾನಕ್ಕೆ ಬಂದಾಗಿದೆ.‌ ಮೃಣಾಲ ಮತ್ತು ಪ್ರಿಯಾಂಕ ಸಿದ್ದರಾಮಯ್ಯನವರ ಗ್ಯಾರಂಟಿ ಅಭ್ಯರ್ಥಿಗಳು ಎಂದು ಹೇಳಿದರು.