This is the title of the web page
This is the title of the web page

Live Stream

March 2023
S M T W T F S
 1234
567891011
12131415161718
19202122232425
262728293031  

| Latest Version 9.4.1 |

State News

ಸುಂದರ ನಿಸರ್ಗವನ್ನು ಹೊಂದಿರುವ ಶ್ರೀಮತಿ ಭೀಮವ್ವಾ ಲಕ್ಷ್ಮಣರಾವ ಜಾರಕಿಹೊಳಿ ಸರ್ಕಾರಿ ಪ್ರೌಢ ಶಾಲೆ : ಶಾಸಕ ಬಾಲಚಂದ್ರ ಜಾರಕಿಹೊಳಿ ಶ್ಲಾಘನೆ

Join The Telegram Join The WhatsApp

 

ಮನ್ನಿಕೇರಿಯಲ್ಲಿ 1.40 ಕೋಟಿ ರೂ. ಮೊತ್ತದ ಸರ್ಕಾರಿ ಪ್ರೌಢ ಶಾಲೆಯ ನೂತನ ಕೊಠಡಿಗಳ ಉದ್ಘಾಟನೆ

ಗೋಕಾಕ : 

ಸುಂದರವಾದ ಪರಿಸರ ಮತ್ತು ಉತ್ತಮವಾದ ನಿಸರ್ಗವನ್ನು ಹೊಂದಿರುವ ಮನ್ನಿಕೇರಿ ಸರ್ಕಾರಿ ಪ್ರೌಢ ಶಾಲೆಯು ಜಿಲ್ಲೆಯಲ್ಲಿಯೇ ನೋಡುಗರನ್ನು ಆಕರ್ಷಿಸುತ್ತಿದೆ. ಅಷ್ಟೊಂದು ಅತ್ಯುತ್ತಮವಾದ ಶಾಲೆಯನ್ನು ಹೊಂದಿರುವುದು ಈ ಭಾಗದ ವಿದ್ಯಾರ್ಥಿಗಳ ಸೌಭಾಗ್ಯವೆಂದು ಕೆಎಂಎಫ್ ಅಧ್ಯಕ್ಷ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.

ಇತ್ತೀಚೆಗೆ ತಾಲೂಕಿನ ಮನ್ನಿಕೇರಿ ಗ್ರಾಮದ ಹೊರವಲಯದಲ್ಲಿರುವ ಶ್ರೀಮತಿ ಭೀಮವ್ವಾ ಲಕ್ಷ್ಮಣರಾವ್ ಜಾರಕಿಹೊಳಿ ಸರ್ಕಾರಿ ಪ್ರೌಢ ಶಾಲೆಯ 1.40 ಕೋಟಿ ರೂ. ವೆಚ್ಚದ ನೂತನ ಕೊಠಡಿಗಳನ್ನು ಉದ್ಘಾಟಿಸಿ ಮಾತನಾಡಿದ ಅವರು, ಈ ಶಾಲೆಯಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣವನ್ನು ವಿದ್ಯಾರ್ಥಿಗಳು ಪಡೆಯುತ್ತಿದ್ದಾರೆ ಎಂದು ಹೇಳಿದರು.

ಮೂಡಲಗಿ ಶೈಕ್ಷಣಿಕ ವಲಯವು ಜಿಲ್ಲೆ ಮತ್ತು ರಾಜ್ಯದಲ್ಲಿಯೇ ಹೆಸರುವಾಸಿಯಾದ ಹಾಗೂ ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ಕಲ್ಪಿಸುತ್ತಿರುವ ಕ್ಷೇತ್ರವಾಗಿದೆ. ಕಳೆದ 30- 40 ವರ್ಷಗಳ ಹಿಂದೆ ಯಾವುದೇ ಒಬ್ಬ ವಿದ್ಯಾರ್ಥಿ ಶೇ 70 ರಷ್ಟು ಅಂಕಗಳನ್ನು ಗಳಿಸಿದರೆ ಅದುವೇ ಶ್ರೇಷ್ಠ ಸಾಧನೆಯಾಗುತ್ತಿತ್ತು. ಆಗಿನ ದಿನಗಳಲ್ಲಿ ವಿದ್ಯಾರ್ಥಿ ಸಾಧನೆ ಇಡೀ ಜಿಲ್ಲೆಯಾದ್ಯಂತ ಸುದ್ಧಿಯಾಗುತ್ತಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿ ಕನಿಷ್ಠ ಶೇ 90 ಕ್ಕೂ ಅಧಿಕ ಫಲಿತಾಂಶ ಮಾಡುತ್ತಿದ್ದಾನೆ ಎಂದರೆ ಅದಕ್ಕೆ ನಾವುಗಳು ನೀಡುತ್ತಿರುವ ಗುಣಮಟ್ಟದ ಶಿಕ್ಷಣವೇ ಕಾರಣ. ಇದಕ್ಕಾಗಿ ವಲಯದಲ್ಲಿರುವ ಎಲ್ಲ ಶಿಕ್ಷಕರ ಸತತ ಪರಿಶ್ರಮದಿಂದ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ದೊರೆಯುತ್ತಿರುವುದು ಸಂತಸದ ಸಂಗತಿಯಾಗಿದೆ ಎಂದು ಅವರು ಹೇಳಿದರು.

ಮನ್ನಿಕೇರಿ ಸರ್ಕಾರಿ ಪ್ರೌಢ ಶಾಲೆಯು ಗ್ರಾಮದ ಹೊರವಲಯದಲ್ಲಿ ಬೆಟ್ಟ ಗುಡ್ಡಗಳ ಮಧ್ಯೆ 4 ಎಕರೆ ಜಮೀನಿನಲ್ಲಿ ನಿರ್ಮಾಣವಾಗಿದೆ. ಹಚ್ಚು ಹಸಿರಾಗಿ ಕಂಗೊಳಿಸುತ್ತಿರುವ ಈ ಶಾಲೆಯ ನಿಸರ್ಗವನ್ನು ನೋಡಲು ನಮಗೆ ಎರಡು ಕಣ್ಣುಗಳು ಸಾಲದು. ವಿದ್ಯಾರ್ಥಿಗಳಿಗೆ ಮೂಲ ಸೌಕರ್ಯಗಳನ್ನು ನೀಡುವುದರ ಜೊತೆಗೆ ಉತ್ತಮ ಶಿಕ್ಷಣವನ್ನು ಸಹ ನೀಡಲಾಗುತ್ತಿದ್ದು, ಇಂತಹ ಸುಂದರಮಯ ಶಾಲೆಯಲ್ಲಿ ಮುಂದಿನ ದಿನಗಳಲ್ಲಿ ಸಿನಿಮಾ ಶೂಟಿಂಗ್ ನಡೆದರೂ ಯಾವುದೇ ಅಚ್ಚರಿ ಇಲ್ಲ ಎಂದು ಶಾಲೆಯ ಪರಿಸರವನ್ನು ಅವರು ಪ್ರಶಂಸಿಸಿದರು.

ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಆರ್‌ಎಂಎಸ್‌ಎ ಯೋಜನೆಯಡಿ 1.40 ಕೋಟಿ ರೂ. ವೆಚ್ಚದ ನೂತನ ಶಾಲಾ ಕೊಠಡಿಗಳನ್ನು ಉದ್ಘಾಟಿಸಿದರು.

ಕಳ್ಳಿಗುದ್ದಿ ಗ್ರಾಪಂ ಅಧ್ಯಕ್ಷ ಬಾಳಪ್ಪ ಗೌಡರ, ವೇದಮೂರ್ತಿ ಮಹಾಂತಯ್ಯ ಹಿರೇಮಠ, ಪ್ರಭಾಶುಗರ ಉಪಾಧ್ಯಕ್ಷ ರಾಮಣ್ಣಾ ಮಹಾರಡ್ಡಿ, ನಿರ್ದೇಶಕ ಎಂ.ಆರ್. ಭೋವಿ, ಜಿಪಂ ಮಾಜಿ ಸದಸ್ಯ ಡಾ.ರಾಜೇಂದ್ರ ಸಣ್ಣಕ್ಕಿ, ಎಪಿಎಂಸಿ ಮಾಜಿ ಅಧ್ಯಕ್ಷ ಎ.ಟಿ. ಗಿರಡ್ಡಿ, ರವೀಂದ್ರ ಪರುಶೆಟ್ಟಿ, ಸುಭಾಸ ಕೌಜಲಗಿ, ಅಡಿವೆಪ್ಪ ಅಳಗೋಡಿ, ಮುದಕಪ್ಪ ಗೋಡಿ, ಸತೀಶ ಗಡಾದ, ಮಹಾಂತೇಶ ಮೆಟ್ಟಿನ, ಪುಂಡಲೀಕ ದಳವಾಯಿ, ಲಕ್ಷ್ಮಣ ಗಡಾದ, ಶ್ರೀಶೈಲ ಗಡಾದ, ರಾಮಣ್ಣಾ ನಾಡಗೌಡ, ಮಾರುತಿ ಮುರಗಜ್ಜಗೋಳ, ಬಿಸಿಯೂಟ ಸಹಾಯಕ ನಿರ್ದೇಶಕ ಎ.ಬಿ. ಮಲಬನ್ನವರ, ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯನಿ ಲತಾ ಭಜಂತ್ರಿ, ಮನ್ನಿಕೇರಿ ಗ್ರಾಪಂ ಸದಸ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಮೂಡಲಗಿ ಕ್ಷೇತ್ರ ಶಿಕ್ಷಣಾಧಿಕಾರಿ ಅಜೀತ ಮನ್ನಿಕೇರಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಮೂಡಲಗಿ ವಲಯದ ಶೈಕ್ಷಣಿಕ ಸಾಧನೆಗಳನ್ನು ವಿವರಿಸಿದರು.


Join The Telegram Join The WhatsApp
Admin
the authorAdmin

Leave a Reply