
ಹೆಬ್ರಿ : ಮುದ್ರಾಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ 2025-26 ನೇ ಸಾಲಿನ ಶೈಕ್ಷಣಿಕ ಶಾಲಾ ಪ್ರಾರಂಭೋತ್ಸವ ಮತ್ತು ಪಠ್ಯ ಪುಸ್ತಕ ವಿತರಣಾ ಕಾರ್ಯಕ್ರಮವು ಶಾಲಾ ಸಭಾಂಗಣದಲ್ಲಿ ಮೇ. 31 ರಂದು ನಡೆಯಿತು.
ಶಾಲಾ ಎಸ್. ಡಿ. ಎಂ. ಸಿ ಅಧ್ಯಕ್ಷ ಪ್ರಸನ್ನ ಕುಮಾರ್ ಶೆಟ್ಟಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಕಾರ್ಯಕ್ರಮವನ್ನು ಮುದ್ರಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ವಸಂತಿ ಪೂಜಾರಿಯವರು ಉದ್ಘಾಟಿಸಿ ಮಕ್ಕಳಿಗೆ ಶುಭ ಹಾರೈಸಿದರು.
ಮುದ್ರಾಡಿ ಕ್ಲಸ್ಟರ್. ಸಿ. ಆರ್. ಪಿ ರಾಘವೇಂದ್ರ ಆಚಾರ್ಯ ಮಾತನಾಡಿ, 2025 -26 ನೇ ಸಾಲಿನ ಶೈಕ್ಷಣಿಕ ಶಾಲಾ ಪ್ರಾರಂಭೋತ್ಸವವು ಹಬ್ಬದ ವಾತಾವರಣದಲ್ಲಿ ಕಂಗೊಳಿಸುತ್ತಿದೆ. ಮಕ್ಕಳೆಲ್ಲರ ಮುಖದಲ್ಲಿ ಸಂತಸ ಬೀರಿದೆ. ಜೇವನದಲ್ಲಿ ವಿದ್ಯೆಯು ಬಹಳ ಮುಖ್ಯ. ವಿದ್ಯೆ ಇದ್ದರೆ ಗೌರವ,ಯೋಗ್ಯತೆ ಬರುತ್ತದೆ. ಸರಕಾರಿ ಶಾಲೆಗೆ ದಾಖಲೆ ಮಾಡಿದ ಎಲ್ಲಾ ಪೋಷಕರಿಗೆ ಇಲಾಖೆಯ ಪರವಾಗಿ ವಂದನೆ ಗಳನ್ನು ಸಲ್ಲಿಸುತ್ತೇನೆ. ಮಕ್ಕಳು ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಿ ಸರಕಾರದಿಂದ ಸಿಗುವ ಉಚಿತ ಸವಲತ್ತುಗಳ ಸದುಪಯೋಗ ಪಡಿಸಿಕೊಳ್ಳಿ ಎಂದರು.ಶಾಲಾ ಮಕ್ಕಳಿಗೆ ಸಾಂಕೇತಿಕವಾಗಿ ಪಠ್ಯ ಪುಸ್ಕಕ ಗಳನ್ನು ವಿತರಿಸಲಾಯಿತು. ಹಾಗೂ ಸಿಹಿ ತಿಂಡಿ ಹಂಚಲಾಯಿತು.
ಶಾಲಾ ಮುಖ್ಯೋಪಾಧ್ಯಾಯ ಶ್ರೀನಿವಾಸ ಭಂಡಾರಿ ಯವರು ಪ್ರಾಸ್ತಾವಿಕವಾಗಿ ಮಾತನಾಡಿದರು.