
ಪುತ್ತೂರು: ಬಹುಗ್ರಾಮ ಕುಡಿಯುವ ನೀರು ಯೋಜನೆಯಡಿ ವಿಟ್ಲ ಪಟ್ಟಣಕ್ಕೂ ವಿಸ್ತರಿಸಬೇಕು, ಯಾವುದೇ ಕಾರಣಕ್ಕೂ ವಿಟ್ಲ ಪಟ್ಟಣದ ಜನತೆ ಇದರಿಂದ ವಂಚಿತರಾಗಬಾರದು ಎಂದು ಪುತ್ತೂರು ಶಾಸಕ ಅಶೋಕ್ ರೈ ಅವರು ಕರ್ನಾಟಕ ಸರಕಾರದ ಗ್ರಾಮೀ,ಕುಡಿಯುವ ನೀರುಮತ್ತು ನೈರ್ಮಲ್ಯ ಇಲಾಖೆ ಮುಖ್ಯ ಇಂಜಿನಿಯರ್ ಇಜಾಜ್ ಹುಸೇನ್ ಅವರಿಗೆ ಮನವಿ ಸಲ್ಲಿಸಿದ್ದಾರೆ.
ಶುಕ್ರವಾರ ಇಂಜಿನಿಯರ್ ಅವರನ್ನು ಭೇಟಿಯಾದ ಶಾಸಕರುಈಗಾಗಲೇ ಬಹುಗ್ರಾಮ ಕುಡಿಯುವ ನೀರು ಯೋಜನೆಯ ಕಾಮಗಾರಿ ಪ್ರಾರಂಭಗೊಂಡಿದೆ. ಪುತ್ತೂರು,ಬಂಟ್ವಾಳ ಹಾಗೂ ಸುಳ್ಯ ತಾಲೂಕಿನ ಗ್ರಾಮಗಳಿಗೆ ದಿನದ 24 ಗಂಟೆಯೂ ಶುದ್ದ ಫಿಲ್ಟರ್ ವಾಟರ್ ವ್ಯವಸ್ಥೆಯನ್ನು ಈ ಮೂಲಕ ಮಾಡಲಾಗುತ್ತದೆ. ಆದರೆ ವಿಟ್ಲ ಪಟ್ಟಣ ಪಂಚಾಯತ್ ಈ ಸೌಲಭ್ಯದಿಂದ ವಂಚಿತವಾಗಿತ್ತು.ವಿಟ್ಲ ಪಟ್ಟಣ ಪಂಚಾಯತ್ ಈ ವ್ಯವಸ್ಥೆಯಿಂದ ವಂಚಿತವಾಗಿದ್ದು ಇದನ್ನು ಈ ಯೋಜನೆಗೆ ಸೇರಿಸಬೇಕು ಎಂದು ಮನವಿ ಮಾಡಲಾಯಿತು.