Join The Telegram | Join The WhatsApp |
ಜನ ಸಾಮಾನ್ಯರಿಗೆ ಕಾನೂನು ಬಗ್ಗೆ ಜಾಗೃತಿ ಮೂಡಿಸಿ : ಮುರಳಿ ಮೋಹನ ರೆಡ್ಡಿ ಸಲಹೆ
ಬೆಳಗಾವಿ :
ಜನ ಸಾಮಾನ್ಯರು ತಮ್ಮ ಹಕ್ಕುಗಳ ರಕ್ಷಣೆ ಮಾಡಿಕೊಳ್ಳುವ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಅವರಲ್ಲಿ ಜಾಗೃತಿ ಮೂಡಿಸಬೇಕು ಎಂದು ಬೆಳಗಾವಿಯ ದಿವಾನಿ ನ್ಯಾಯಾಧೀಶರು, ಹಿರಿಯ ಶ್ರೇಣಿ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮುರಳಿ ಮೋಹನ ರೆಡ್ಡಿ ತಿಳಿಸಿದರು.
ಶನಿವಾರ ನಗರದ ಬಿ.ವಿ.ಬೆಲ್ಲದ ಕಾನೂನು ಮಹಾವಿದ್ಯಾಲಯದಲ್ಲಿ ಬೆಲ್ಲದ ಕಾನೂನು ಮಹಾವಿದ್ಯಾಲಯದ ಕಾನೂನು ನೆರವು ಘಟಕ, ಎನ್ ಎಸ್ ಎಸ್ , ಅತಿಥಿ ಉಪನ್ಯಾಸ ಘಟಕ ಹಾಗೂ ಕಾನೂನು ಸೇವಾ ಪ್ರಾಧಿಕಾರಗಳ ವತಿಯಿಂದ ನಡೆದ ಸಂವಿಧಾನ ದಿನಾಚರಣೆಯಲ್ಲಿ ಮಾತನಾಡಿದರು.
ವಿದ್ಯಾರ್ಥಿಗಳು ಸಂವಿಧಾನದ ಮೂಲಭೂತ ಹಕ್ಕುಗಳು ಹಾಗೂ ಕರ್ತವ್ಯಗಳನ್ನು ತಿಳಿದು ಜನ ಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದರು.
ಐಕ್ಯೂಎಸ್ ಸಿ ಸಮನ್ವಯಾಧಿಕಾರಿ ಡಾ. ಜ್ಯೋತಿ ಹಿರೇಮಠ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮಹಾವಿದ್ಯಾಲಯದ ಕಾನೂನು ನೆರವು ಘಟಕದ ಸಂಚಾಲಕ ಪ್ರೊ.ಎಂ.ಎಸ್.ಅಲ್ಲಪ್ಪನವರ ಉಪಸ್ಥಿತರಿದ್ದರು.
ಎನ್ ಎಸ್ ಎಸ್ ಘಟಕದ ಪ್ರೊ.ಶ್ರೀನಿವಾಸ ಪಾಲಕೊಂಡ ಸ್ವಾಗತಿಸಿದರು. ಡಾ.ಸುಪ್ರಿಯಾ ಸ್ವಾಮಿ ವಂದಿಸಿದರು.
Join The Telegram | Join The WhatsApp |