ಬೆಳಗಾವಿ : ಅಥಣಿ ತಾಲೂಕಿನ ಅನಂತಪುರ ಗ್ರಾಮದಲ್ಲಿ ವಕ್ಫ್ ಬೋರ್ಡ್ ವಿರುದ್ಧ ಈಗ ಮುಸ್ಲಿಂ ಸಮುದಾಯ ತಿರುಗಿಬಿದ್ದಿದೆ. ಅನಂತಪುರ ದರ್ಗಾದಲ್ಲಿ ಸಭೆ ನಡೆಸಿದ ರೈತರು, ಕಾಗವಾಡ, ಅಥಣಿ ಶಾಸಕರಿಗೆ ನವೆಂಬ‌ರ್ 25ರ ಒಳಗಾಗಿ ಅನಂತಪುರ, ಬಳ್ಳಿಗೇರಿ ಗ್ರಾಮದ 60ಕ್ಕೂ ಅಧಿಕ ಜನ ರೈತರ ಜಮೀನಿನ ಪಹಣಿಯಲ್ಲಿನ ವಕ್ಸ್ ಹೆಸರು ತೆಗೆಯಬೇಕು. ಇಲ್ಲವಾದರೆ ಸರ್ಕಾರದ ವಿರುದ್ಧ ಅಹೋರಾತ್ರಿ ಧರಣಿ ನಡೆಸಿ ಹೋರಾಟ ಮಾಡುವುದಾಗಿ ತೀರ್ಮಾನ ಕೈಗೊಂಡಿದ್ದಾರೆ.