ಸಮುದಾಯದ ಉತ್ತಮ ನಾಯಕನಿಂದ ಸಮಾಜದಲ್ಲಿಉನ್ನತ ಸ್ಥಾನಮಾನ ಗಳಿಸಬಹುವುದು.ಶ್ರೇಷ್ಠ ಮನಸ್ಸುಗಳು ಒಂದದಾಗ ಸಮುದಾಯದಲ್ಲಿ ಮಹತ್ವದ ಬೆಳವಣಿಗೆಗೆ ಸಾಧ್ಯವಿದೆ. ಜೀವನದಲ್ಲಿ ಸಂಘರ್ಷದ ಬದುಕು  ಕೆಡುಕನ್ನು ಮಾಡುತ್ತದೆ. ದಾನ ಧರ್ಮಾಧಿಗಳು ಶ್ರೇಷ್ಠತೆಯನ್ನು ಪಡೆಯುತ್ತವೆ. ಉತ್ತಮ ಚಿಂತೆನೆಗಳು ಸಮಾಜಕ್ಕೆ ಒಳಿತನ್ನು ನೀಡುತ್ತವೆ. ಬೆಳ್ವೆ ಪರಿಸರವು ಹಿಂದೂ-ಮುಸ್ಲಿಂ ಧರ್ಮಗಳ ನಡುವೆ ಸಮಾನತೆಯ ಸಹಬಾಳ್ವೆಗೆ ಸಾಕ್ಷಿಯಾಗಿವೆ – ಮುಸ್ತಾಕ್ ಹೆನ್ನಾಬೈಲು.ಕಾರ್ಯದರ್ಶಿ, ಕರ್ನಾಟಕ ಮುಸ್ಲಿಂ ಬಾಂಧವ್ಯ ವೇದಿಕೆ

 

 

ಬೆಳ್ವೆ: ಸಮುದಾಯ ಬಾಂಧವರು ಆಚರಿಸುವ ಹಬ್ಬದ
ಆಚರಣೆಗಳಲ್ಲಿ ಯಾವುದೇ ಭೇದ ಭಾವಗಳಿಲ್ಲದೇ
ಬಡವರು ಶ್ರೀಮಂತರು ಸಮಾನಾಂತರವಾಗಿ
ಆಚರಿಸುವಂತಾಗಬೇಕು. ಶ್ರೀಮಂತರು ಬಡವರಿಗೆ ದಾನ
ಧರ್ಮಾಧಿಗಳನ್ನು ನೀಡುವುದರೊಂದಿಗೆ ಹಬ್ಬದ
ಆಚರಣೆಗಳಲ್ಲಿ ಸಂತೋಷವನ್ನು ಹಂಚಿಕೊಂಡಾಗ
ಸಹಬಾಳ್ವೆ,ಸಮಾನತೆಯ ಸಂಕೇತವಾಗಿ ಮಹತ್ವವನ್ನು
ಪಡೆಯುತ್ತವೆ ಎಂದು ಬೆಳ್ವೆ ಟೀಮ್ ಮಲೆನಾಡು
ಹೂಮ್ಯಾನಿಟೇರಿಯನ್ ಟ್ರಸ್ಟ್ ಅಧ್ಯಕ್ಷ ಮುಸ್ತಾಕ್ ಅಹಮ್ಮದ್ ಬೆಳ್ವೆ ಹೇಳಿದರು.
ಅವರು ಬೆಳ್ವೆ ಸಂದೇಶ್ ಕಿಣಿ ಮೆಮೋರಿಯಲ್ ಸಭಾಂಗಣದಲ್ಲಿ
ಬೆಳ್ವೆ ಟೀಮ್ ಮಲೆನಾಡು ಹೂಮ್ಯಾನಿಟೇರಿಯನ್ ಟ್ರಸ್ಟ್
ವತಿಯಿಂದ ರಂಜಾನ್ ಕಿಟ್ ವಿತರಿಸಿ ಭಾನುವಾರ ಮಾತನಾಡಿದರು.
ಬೆಳ್ವೆ ಜುಮ್ಮಾ ಮಸೀದಿ ಮೌಲನ್ ಮೊಹಮ್ಮದ್ ರಫೀಕ್
ಬೆಳ್ವೆ,ಕರ್ನಾಟಕ ಮುಸ್ಲಿಂ ಬಾಂಧವ್ಯ ವೇದಿಕೆ ಕಾರ್ಯದರ್ಶಿ
ಮುಸ್ತಾಕ್ ಹೆನ್ನಾಬೈಲು,
ಹೆನ್ನಾಬೈಲು ಜುಮ್ಮಾ ಮಸೀದಿ ಅಧ್ಯಕ್ಷ
ಸಯ್ಯದ್ ರಫೀಕ್ ಹೆನ್ನಾಬೈಲ್, ಬೆಳ್ವೆ ಜುಮ್ಮಾ ಮಸೀದಿ ಅಧ್ಯಕ್ಷ ಅಹಮ್ಮದ್ ಬ್ಯಾರಿ, ಬೆಳ್ವೆ ಹಿದಾಯಿತುಲ್ ಉಲೂಮ್ ಅರಭಿ ಮದ್ರಸ್
ಉಪಾಧ್ಯಕ್ಷ ಅಬ್ದುಲ್ ಸಾಹೇಬ್,ಕೃಷಿಕ ಇಬ್ರಾಹಿಂ ಸಾಹೇಬ್ ಅಲ್ಬಾಡಿ,
ಹಾರೋನ್ ರಶೀಧ್,ಶಕೀಲ್ ಬೆಳ್ವೆ,ಶರೀಫ್ ಸಾಹೇಬ್ ಬೆಳ್ವೆ, ಬಿ.ಕೆ ಶಬ್ಬೀರ್ ಸಾಹೇಬ್ ಬೆಳ್ವೆ ಉಪಸ್ಥಿತರಿದ್ದರು.

ಮುಸ್ತಾಕ್ ಅಹಮ್ಮದ್ ಬೆಳ್ವೆ ಸ್ವಾಗತಿಸಿ, ಪ್ರಾಸ್ತಾವಿಕ

ಮಾತನಾಡಿದರು. ಮೌಲನ್ ಮೊಹಮ್ಮದ್ ರಫೀಕ್ ಕಿರಾತ್
ಪಠಿಸಿದರು, ಮೊಹಮ್ಮದ್ ರಬೀ ಕಾರ್ಯಕ್ರಮ
ನಿರೂಪಿಸಿ, ವಂದಿಸಿದರು.