ಚಿಕ್ಕೋಡಿ: ತಾಲೂಕಿನ ನಾಗರಮುನ್ನೋಳ್ಳಿ ಗ್ರಾಮ ಪಂಚಾಯತಿಗೆ ನಡೆದ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ದುರೀಣ ಸಿದ್ದಪ್ಪ ಮರ್ಯಾಯಿ.ರಾಜು ಕುಂಬಾರ ನೇತೃತ್ವದಲ್ಲಿ ಅಧ್ಯಕ್ಷರಾಗಿ ಶ್ರೀಮತಿ ರಾಜಮಾ ಮುಲ್ತಾನಿ. ಉಪಾಧ್ಯಕ್ಷರಾಗಿ ಶಾಂತಾ ಬಾನೆ ಅವಿರೋಧವಾಗಿ ಆಯ್ಕೆಯಾದರು.
ಮುಂದಿನ ಒಂದು ವರ್ಷದ ಅವಧಿಗೆ ನಡೆದ ಗುರುವಾರ ಗ್ರಾಮ ಪಂಚಾಯತಿ ಸಭಾಭವನದಲ್ಲಿ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ಒಂದೋಂದು ನಾಮಪತ್ರ ಸಲ್ಲಿಕೆಯಾಗಿದ್ದರಿಂದ ಅಧ್ಯಕ್ಷರಾಗಿ ರಾಜಮಾ ಮುಲ್ತಾನಿ ಮತ್ತು ಉಪಾಧ್ಯಕ್ಷರಾಗಿ ಶಾಂತಾ ಬಾನೆ ಅವಿರೋಧವಾಗಿ ಆಯ್ಕೆಯಾದರು.
ಚುನಾವಣಾಧಿಕಾರಿಯಾಗಿ ಸಹಕಾರಿ ಸಂಘಗಳ ಸಹಾಯಕ ನಿಭಂದಕರಾದ ಮಲ್ಲಪ್ಪ ರಾಹುತನ್ನವರ ಕಾರ್ಯನಿರ್ವಹಿಸಿದರು.
ಸಿದ್ದಪ್ಪ ಮರ್ಯಾಯಿ. ವಿನಾಯಕ ಕುಂಬಾರ. ರಾಜು ಕುಂಬಾರ.ಶಿವಪುತ್ರ ಮನಗೂಳಿ.ಶಿವಾನಂದ ಮರ್ಯಾಯಿ. ಮಾರುತಿ ಮರ್ಯಾಯಿ. ಶಂಕರ ನೇರ್ಲಿ. ಲಾಡಜಿ ಮುಲ್ತಾನಿ.ಲಕ್ದ್ಮೀಸಾಗರ ಈಟಿ. ಪ್ರವೀಣ ಮನಗೂಳಿ. ಬಸವರಾಜ ಮನಗೂಳಿ. ಅನೀಲ ಈಟಿ. ರಮೇಶ ಮಾದರ. ಲಾಲಸಾಬ ತಟಗಾರ. ಸಂಗೀತಾ ಮಾದರ. ಬಾಳಪ್ಪ ಮರ್ಯಾಯಿ.ಲಕ್ಷ್ಮೀಬಾಯಿ ಮರ್ಯಾಯಿ.ಬಸವರಾಜ ಚೌಗಲಾ. ಸಂಜು ಡೋಣವಾಡೆ. ಶಿವಕ್ಕಾ ಖಗ್ಗನ್ನವರ ಮುಂತಾದವರು ಇದ್ದರು.
ಬಳಿಕ ಮಾತನಾಡಿದ ದುರೀಣ ಸಿದ್ದಪ್ಪ ಮರ್ಯಾಯಿ ಅವರು ಗ್ರಾಮದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮೀಸಲಾಗುತ್ತದೆ. ನನ್ನ ಮತ್ತು ರಾಜು ಕುಂಬಾರ ನೇತೃತ್ವದಲ್ಲಿ ನಡೆದ ಚುನಾವಣೆಯಲ್ಲಿ ಸದಸ್ಯರ ಸಹಕಾರದಿಂದ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳು ಅವಿರೋಧವಾಗಿ ಆಯ್ಕೆ ನಡೆದಿದೆ ಎಂದರು.