ಬೆಳಗಾವಿ : ನಂದಗಡ ಗ್ರಾಮದ ಗ್ರಾಮದೇವಿ ಜಾತ್ರೆ 2025 ರ ಫೆಬ್ರವರಿಯಲ್ಲಿ ಆಯೋಜಿಸಲು ತೀರ್ಮಾನಿಸಲಾಗಿದೆ. ಈಗಾಗಲೇ ಜಾತ್ರಾ ಸಮಿತಿ ರಚನೆಯಾಗಿದೆ. ಜಾತ್ರೆಯ ಪೂರ್ವ ಸಿದ್ಧತೆಗಳು ಪ್ರಾರಂಭಗೊಂಡಿವೆ ಎಂದು ಗ್ರಾಮದ ಹಿರಿಯ ಅಡಿವೆಪ್ಪ ಕೋಟಿ ಹೇಳಿದರು.

ನಂದಗಡ ಗ್ರಾಮದೇವಿ ಜಾತ್ರೆ 1999 ರಲ್ಲಿ ನಡೆದಿತ್ತು. ಈಗ 25 ವರ್ಷಗಳ ನಂತರ ನಡೆಯಲಿದೆ. ಜಾತ್ರೆಯನ್ನು ಅದ್ದೂರಿಯಾಗಿ ಆಚರಿಸಲು ತೀರ್ಮಾನಿಸಲಾಗಿದೆ ಎಂದು ವಿವರಿಸಿದರು.

ಸಭೆಯಲ್ಲಿ ಭಾಗವಹಿಸಿದ್ದ ನಂದಗಡ ಜಾತ್ರಾ ಸಮಿತಿಯ ಪದಾಧಿಕಾರಿಗಳು ಮತ್ತು ಗ್ರಾಮದ ಹಿರಿಯರು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.

ಬಳಿಕ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ನೇಮಕಗೊಂಡ ನಂದಗಡ ಗ್ರಾಮಸ್ಥ ಮಹಾಂತೇಶ ರಾಹೂತ ಅವರನ್ನು ಜಾತ್ರಾ ಸಮಿತಿ ವತಿಯಿಂದ ಗೌರವಿಸಲಾಯಿತು.