Join The Telegram | Join The WhatsApp |
ಬೆಂಗಳೂರು-
ನಂದಿನಿ ಹಾಲಿನ ಹಾಗೂ ಮೊಸರಿನ ದರವನ್ನು ಕೆಎಂಎಫ್ ಹೆಚ್ಚಳ ಮಾಡಿದೆ. ಪ್ರತಿ ಲೀಟರ್ ಹಾಲಿಗೆ ಹಾಗೂ ಪ್ರತಿ ಲೀಟರ್ ಮೊಸರಿಗೆ ತಲಾ 2 ರೂಪಾಯಿ ಹೆಚ್ಚಳ ಮಾಡಲಾಗಿದೆ. ಈ ಬಗ್ಗೆ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಮಾಹಿತಿ ನೀಡಿದ್ದಾರೆ.
ಈ ಹಿಂದೆ ನವೆಂಬರ್ 14ರಂದು ಪ್ರತಿ ಲೀಟರ್ ಹಾಲಿಗೆ ಹಾಗೂ ಪ್ರತಿ ಲೀಟರ್ ಮೊಸರಿನ ಬೆಲೆಯಲ್ಲಿ 3 ರೂಪಾಯಿ ಏರಿಕೆ ಮಾಡಲಾಗಿತ್ತು. ಪ್ರಮುಖವಾಗಿ ಹೈನುಗಾರಿಕೆಗೆ ಹೆಚ್ಚಿನ ಒತ್ತು ನೀಡುವುದು ಹಾಗೂ ರೈತರ ಆರ್ಥಿಕ ಅಭಿವೃದ್ಧಿಗಾಗಿ ಹಾಲು ಹಾಗೂ ಮೊಸರು ದರವನ್ನು ಹೆಚ್ಚಳ ಮಾಡುವ ನಿರ್ಧಾರ ಮಾಡಲಾಗಿದೆ ಎಂದು ತಿಳಿಸಲಾಗಿತ್ತು. ಆದರೆ ನಿರ್ಧಾರ ಘೋಷಣೆ ಮಾಡಿದ ದಿನವೇ ಬೆಲೆ ಏರಿಕೆಯನ್ನು ಹಿಂಪಡೆಯಲಾಗಿತ್ತು.
ನಂದಿನಿ ಹಾಲು ಮತ್ತು ಮೊಸರಿನ ಬೆಲೆ ಏರಿಕೆ ಮಾಡುವ ಕೆಎಂಎಫ್ ನಿರ್ಧಾರಕ್ಕೆ ಸರ್ಕಾರ ತಡೆ ನೀಡಿತ್ತು. ಸದ್ಯಕ್ಕೆ ಬೆಲೆ ಏರಿಕೆ ಮಾಡದಿರಲು ಸರ್ಕಾರ ನಿರ್ಧರಿಸಿತ್ತು. ಹಾಗೆಯೇ ನವೆಂಬರ್ 20ರ ಬಳಿಕ ಅಂತಿಮ ನಿರ್ಧಾರ ಪ್ರಕಟಿಸಲಾಗುವುದು ಎಂದು ತಿಳಿಸಲಾಗಿತ್ತು. ಈಗ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಈ ಬಗ್ಗೆ ಪ್ರಕಟಿಸಿದ್ದು, ಹಾಲು, ಮೊಸರು ದರ 2 ರೂಪಾಯಿ ಹೆಚ್ಚಾಗಲಿದೆ ಎಂದು ತಿಳಿಸಿದ್ದಾರೆ.
ಪರಿಷ್ಕೃತ ದರಪಟ್ಟಿ-
ಟೋನ್ಡ್ ಹಾಲು: 39
ಹೋಮೋಜಿನೈಸ್ಡ್ ಹಾಲು: 40
ಹೋಮೋಜಿನೈಸ್ಡ್ ಹಸುವಿನ ಹಾಲು: 44
ಸ್ಪೆಷಲ್ ಹಾಲು: 45
ಶುಭಂ ಹಾಲು: 45
ಹೋಮೋಜಿನೈಸ್ಡ್ ಸ್ಟ್ಯಾಂಡಡೈಸ್ಡ್ ಹಾಲು: 46
ಸಮೃದ್ಧಿ ಹಾಲು: 50
ಸಂತೃಪ್ತಿ ಹಾಲು: 52
ಡಬಲ್ಡ್ ಟೋನ್ಡ್ ಹಾಲು: 38
ಮೊಸರು ಪ್ರತಿ ಕೆ.ಜಿಗೆ: 47
Join The Telegram | Join The WhatsApp |