ಬೆಳಗಾವಿ: ನಗರದ ಕೆ.ಎಲ್.ಎಸ್ ಸೊಸೈಟಿಯ ರಾಜ ಲಖಮಗೌಡ ಕಾನೂನು ಮಹಾವಿದ್ಯಾಲಯ ಎಂ.ಕೆ. ನಂಬಿಯಾರ್ ಸ್ಮರಣಾರ್ಥ 14ನೇ ರಾಷ್ಟ್ರಮಟ್ಟದ ಅಣುಕು ನ್ಯಾಯಾಲಯ ಸ್ಪರ್ಧೆ ಏರ್ಪಡಿಸಲಾಗಿದೆ.
ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕೆ.ಎಲ್.ಎಸ್ ಸೊಸೈಟಿಯ ಕಾರ್ಯದರ್ಶಿ ವಿವೇಕ ಕುಲಕರ್ಣಿ ಹಾಗೂ ಎಸ್ .ವಿ. ಗಣಾಚಾರಿ ರಾಷ್ಟ್ರಮಟ್ಟದ ಅಣುಕು ನ್ಯಾಯಾಲಯ ಸ್ಪರ್ಧೆಯು ಮಾರ್ಚ್ 8 ರಂದು ಸಂಜೆ 5:30 ಗಂಟೆಗೆ ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಾಧೀಶ ಅನಿಲ ಕಟ್ಟಿ ಮುಖ್ಯ ಅತಿಥಿಗಳಾಗಿ ಮತ್ತು ವಿ. ಜಿ. ಕುಲಕರ್ಣಿ ಅವರ ಅಧ್ಯಕ್ಷತೆಯಲ್ಲಿ ಉದ್ಘಾಟನೆಗೊಳ್ಳಲಿದೆ ಎಂದು ತಿಳಿಸಿದರು.
ಗುಜರಾತ್, ಉತ್ತರ ಪ್ರದೇಶ, ಒರಿಸ್ಸಾ, ಮಧ್ಯಪ್ರದೇಶ, ಉತ್ತರಾಖಂಡ, ತಮಿಳುನಾಡು, ಗೋವಾ, ಪಂಜಾಬ್ ಹಾಗೂ ಮಹಾರಾಷ್ಟ್ರ ರಾಜ್ಯಗಳಿಂದ 35 ತಂಡಗಳು ಹಾಗೂ ದೇಶದ 5 ರಾಷ್ಟ್ರೀಯ ಕಾನೂನು ಶಾಲೆಗಳು ಒಳಗೊಂಡಂತೆ ಒಟ್ಟು 40 ತಂಡಗಳು ಸ್ಪರ್ಧಿಸಲಿವೆ ಎಂದು ಮಾಹಿತಿ ನೀಡಿದರು.
ಸ್ಪರ್ಧೆಯ ಅಂತಿಮ ಸುತ್ತು ಮಾರ್ಚ್ 10 ರಂದು ಮಧ್ಯಾಹ್ನ 12 ಗಂಟೆಗೆ ಜರುಗಲಿದ್ದು, ಕರ್ನಾಟಕದ ಉಚ್ಚ ನ್ಯಾಯಾಲಯದ ನ್ಯಾಯಾಧೀಶ ಇ. ಎಸ್ ಇಂದಿರೇಶ್ ಹಾಗೂ ಉಚ್ಚ ನ್ಯಾಯಾಲಯದ ನ್ಯಾಯವಾದಿಗಳು ತೀರ್ಪುಗಾರರಾಗಿ ಭಾಗವಹಿಸಲಿದ್ದಾರೆ.
ಸ್ಪರ್ಧೆಯ ಬಹುಮಾನ ನಗದು ಮತ್ತು ಟ್ರೋಫಿಯನ್ನು ಒಳಗೊಂಡಿದ್ದು, ಉತ್ತಮ ವಾದಮಂಡನೆ ಮಾಡುವವರು ತಲಾ 15,000/- ನಗದು ಹಾಗೂ ಟ್ರೋಫಿ ಪಡೆಯಲಿದ್ದು, ಉತ್ತಮ ಜ್ಞಾಪಕ ಪತ್ರ 15,000/- ನಗದು ಮತ್ತು ಟ್ರೋಫಿಯನ್ನು ನೀಡಲಾಗುತ್ತಿದೆ. ರನ್ನರ್ ಅಪ್ ತಂಡ 30,000/- ನಗದಿನೊಂದಿಗೆ ಟ್ರೋಫಿ ಹಾಗೂ ವಿಜೇತ ತಂಡ 50,000/- ನಗದಿನೊಂದಿಗೆ ಟ್ರೋಪಿಯನ್ನು ಗೆಲ್ಲಲಿದೆ. ಹಾಗೂ ಪ್ರಶಸ್ತಿಗಳ ಒಟ್ಟು ನಗದು 1,35,000/- ಒಳಗೊಂಡಿದೆ ಎಂದು ಕೆ ಎಲ್, ಎಸ್ ಸೊಸೈಟಿಯ ಸದಸ್ಯ ಆರ್.ಎಸ್ ಮುತಾಲಿಕ್ ಮಾಹಿತಿ ನೀಡಿದರು.
ಉಚ್ಚ ನ್ಯಾಯಾಲಯದ ನ್ಯಾಯಾಧೀಶ ಇ. ಎಸ್ ಇಂದಿರೇಶ್ ಮಾರ್ಚ್ 10 ರ ಸಂಜೆ 4:00 ಕ್ಕೆ, ಕೆ. ಕೆ. ವೇಣುಗೋಪಾಲ್ ಸಭಾಂಗಣದಲ್ಲಿ ಸಮಾರೋಪ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು. ಕೆ.ಎಲ್.ಎಸ್ ಸೊಸೈಟಿಯ ಅಧ್ಯಕ್ಷ ಅನಂತ ಮಂಡಗಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಆಡಳಿತ ಮಂಡಳಿ ಚೇರ್ಮನ್ ಪಿ.ಎಸ್ ಸಾವಕಾರ್ ಗೌರವ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಕಾಲೇಜಿನ ಆಡಳಿತ ಮಂಡಳಿ ಸದಸ್ಯ ವಿ.ಎಮ್ ದೇಶಪಾಂಡೆ, ಪ್ರಾಚಾರ್ಯ ಡಾ. ಎ.ಎಚ್ ಹವಾಲ್ದಾರ್, ಅಣಕು ನ್ಯಾಯಾಲಯ ಸ್ಪರ್ಧೆಯ ಸಂಯೋಜಕಿ ಅಶ್ವಿನಿ ಪರಬ್ ಉಪಸ್ಥಿತರಿದ್ದರು.
Belagavi: Karnatak Law Society’s Raja Lakhamgouda Law College, Tilakwadi, Belagavi is organizing the 14th M. K. Nambyar Memorial National Level Moot Court Competition, 2024, patronized by Padma Vibhushan Shri K. K. Venugopal, former Attorney General for India and our proud alumnus.
As many as 40 teams from 10 different states of India will participate in this Competition, and 5 teams are from different National Law Schools. Nearly 30 advocates and academicians will be acting as Moot Judges to judge the participants.
Prizes worth Rs 1,35,000 will be awarded to the winners in different categories, and an Award of Rs, 6,000 will be given to the Best Mooter in the name of Shri Ashok M. Potdar, Advocate, Belagavi.
The Inaugural Function of the Competition is scheduled on 08th March 2024 at 5.30 pm in K. K. Venugopal Auditorium, KLS Platinum Jubilee Building, Tilakwadi, Belagavi Hon’ble Justice shri Anil B Katti, Judge High Court of Karnataka, has consented to be the Chief Guest. Advocate Shri V. G. Kulkarni Secretary, Karnatak Law Society, Belagavi, all management members will be present in the function.
The Valedictory Function is scheduled on 10th March 2024 at 4:00 pm. Hon’ble Justice Shri E. S. Indiresh, Judge High Court of Karnataka has consented to be the Chief Guest. Shri Anant N. Mandgi, Senior Advocate & President, Karnatak Law Society, Belagavi, will preside over the function. Shri P. S. Sawkar Advocate & Chairman, Board of Management, Karnatak Law Society, Belagavi, is guest of honour and all management members will be present in the function.
Photo Caption: From left Principal Dr.A.H Hawaldar, Advocate S.V Ganachri and Advocate V.G. Kulkarni Secretaries KLS, Advocate R.S Mutalik and Advocate V.M.Deshpande Members of Governing Council, Asst.Professor Ashwini Parab Moot Court Co-ordinator.