ದಿನಾಂಕ 29 ಆಗಸ್ಟ್ 2024ರಂದು ಕ್ರೀಡಾ ಭಾರತಿ ಉಡುಪಿ ಜಿಲ್ಲಾ ವತಿಯಿಂದ ರಾಷ್ಟ್ರೀಯ ಕ್ರೀಡಾ ದಿನಾಚರಣೆಯನ್ನು ವಿಶಿಷ್ಟ ರೀತಿಯಲ್ಲಿ ಆಚರಿಸಲಾಯಿತು. ಜಿಲ್ಲೆಯ ಎಲ್ಲಾ ತಾಲೂಕಿನ ನಿವೃತ್ತ ಹಿರಿಯ ದೈಹಿಕ ಶಿಕ್ಷಣ ಶಿಕ್ಷಕರನ್ನು ಗುರುತಿಸಿ ಅವರ ಮನೆಗೆ ತೆರಳಿ ಸನ್ಮಾನಿಸಿ ಗೌರವಿಸಲಾಯಿತು. ಕಾರ್ಕಳ ತಾಲೂಕಿನ ಎಂವಿ ಉಪಾಧ್ಯ, ಕಾಪು ತಾಲೂಕು ಗೋವಿಂದ ಚಿಪ್ಲೂನ್ಕರ್, ಮುಂಡ್ಕೂರಿನ ರಘುಪತಿ ರಾವ್, ಹೆಬ್ರಿಯ ಮುತ್ತಯ್ಯ ಶೆಟ್ಟಿ, ಬ್ರಹ್ಮಾವರ ಶ್ರೀನಿವಾಸ ಹೆಗ್ಡೆ, ಉಡುಪಿಯ ಮೋಹನ್ ದಾಸ ಶೆಟ್ಟಿ, ಕುಂದಾಪುರ ಗಣಪಯ್ಯ ಶೆಟ್ಟಿ ಹಾಗೂ ಬೈಂದೂರು ತಾಲೂಕಿನ ಜಯರಾಮ ಶೆಟ್ಟಿ, ಇವರನ್ನು ಅವರ ಸ್ವಗೃಹದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಈ ಒಂದು ಸಂತೋಷದ ಮತ್ತು ಅವಿಸ್ಮರಣೀಯ ಕಾರ್ಯಕ್ರಮದಲ್ಲಿ ಕ್ರೀಡಾ ಭಾರತಿ ಮಂಗಳೂರು ವಿಭಾಗ ಸಂಯೋಜಕ ಪ್ರಸನ್ನ ಶೆಣೈ, ಉಡುಪಿ ಜಿಲ್ಲಾ ಗೌರವಾಧ್ಯಕ್ಷ ಕೋಟ ವಸಂತ ಶೆಟ್ಟಿ, ಉಡುಪಿ ಜಿಲ್ಲಾ ಅಧ್ಯಕ್ಷ ಬೈಲೂರು ಮಂಜುನಾಥ ಶೆಟ್ಟಿ, ಹೆಬ್ರಿ ತಾಲೂಕು ಘಟಕದ ಅಧ್ಯಕ್ಷ ಸೀತಾನದಿ ವಿಠಲಶೆಟ್ಟಿ, ಹೆಬ್ರಿ ತಾಲೂಕು ಘಟಕದ ಕಾರ್ಯದರ್ಶಿ ವಿಜಯಕುಮಾರ್ ಶೆಟ್ಟಿ ಹೆಬ್ರಿ, ಕುಂದಾಪುರ ತಾಲೂಕು ಕಾರ್ಯದರ್ಶಿ ಸುಕೇಶ್ ಶೆಟ್ಟಿ ಕೊಲ್ಲೂರು, ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಗಣಪಯ್ಯ ಕಾರ್ಕಳ ಹಾಗೂ ಕೊಕ್ಕರ್ಣೆಯ ನಿವೃತ್ತ ದೈಹಿಕ ಶಿಕ್ಷಣ ಉಪನ್ಯಾಸಕ ಶ್ರೀಧರ ಶೆಟ್ಟಿ ಉಪಸ್ಥಿತರಿದ್ದರು.