
ಬೆಳಗಾವಿ : ನಗರದ ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಘಟಕ ಮಹಾವಿದ್ಯಾಲಯದ ಸ್ನಾತಕ ವಾಣಿಜ್ಯ ವಿಭಾಗದಿಂದ ಏಪ್ರಿಲ್ 5, 2025 ರಂದು ಇ-ವಾಣಿಜ್ಞದ ಭವಿಷ್ಯದ ಚಲನೆ, ಪ್ರವೃತ್ತಿ ನಾವಿನ್ಯತೆ ಮತ್ತು ಅವಕಾಶಗಳು” ಎಂಬ ವಿಷಯದ ಕುರಿತು ಒಂದು ದಿನದ ರಾಷ್ಟೀಯ ವಿಚಾರ ಸಂಕಿರಣವನ್ನು ಮಹಾವಿದ್ಯಾಲಯದ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ. ವಿಚಾರ ಸಂಕಿರಣವನ್ನು ಬೆಳಗ್ಗೆ 10.00 ಗಂಟೆಗೆ ಅಂಗಡಿ ತಂತ್ರಜ್ಞಾನ ಮತ್ತು ನಿರ್ವಹಣಾ ಸಂಸ್ಥೆಯ ಶೈಕ್ಷಣಿಕ ಸಲಹೆಗಾರ ಡಾ. ಡಿ. ಎಚ್. ರಾವ ಅವರು ಉದ್ಘಾಟಿಸಲಿದ್ದಾರೆ. ಧಾರವಾಡದ ಎಸ್. ಡಿ. ಎಂ. ತಾಂತ್ರಿಕ ವಿಶ್ವ ವಿದ್ಯಾಲಯದ ವ್ಯವಹಾರ ಅಧ್ಯಯನ ನಿರ್ದೇಶಕ ಪ್ರಕಾಶ ಎಚ್. ಎಸ್. ಆಶಯ ಭಾಷಣ ಮಾಡಲಿದ್ದಾರೆ. ಇ- ಕಾಮರ್ಸ್ ಉದ್ಯಮದಲ್ಲಿ ಮಹಿಳಾ ನಾಯಕತ್ವದ ಕುರಿತು ಉದ್ಯಮಿ ದೀಪಾಲಿ ಗೊಟಡ್ಕೆ ಮಾತನಾಡಲಿದ್ದಾರೆ. ವಿ.ಟಿ.ಯು ಸಹ ಪ್ರಾಧ್ಯಾಪಕ ಡಾ. ಬಸವರಾಜ ಕುಡಚಿಮಠ ಅವರು ಸ್ಥಳೀಯ ವ್ಯಾಪಾರಿಗಳ ಮೇಲೆ ಈ ಕಾಮರ್ಸ್ ನ ಪ್ರಭಾವದ ಕುರಿತು ಉಪನ್ಯಾಸ ನೀಡಲಿದ್ದಾರೆ. ಇವುಗಳ ಜೊತೆಗೆ ಎರಡು ಗೋಷ್ಠಿಗಳು ಇರಲಿವೆ. 200ಕ್ಕೂ ಹೆಚ್ಚು ಅಭ್ಯರ್ಥಿಗಳು ನೋಂದಾಯಿಸಿಕೊಂಡಿದ್ದು, ಪ್ರಬಂಧ ಮಂಡನೆ ಸಹ ಮಾಡಲಿದ್ದಾರೆ. ಸಾಯಂಕಾಲ 4.00 ಕ್ಕೆ ಸಮಾರೋಪ ಸಮಾರಂಭವಿರುತ್ತದೆ ಎಂದು ಪ್ರಾಚಾರ್ಯ ಪ್ರೊ. ಎಂ. ಜಿ ಹೆಗಡೆಯವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.