
ಉಡುಪಿ: ಉಡುಪಿ ಮತ್ತೊಬ್ಬ ನಕ್ಸಲ್ ಕಾರ್ಯಕರ್ತೆ ಲಕ್ಷ್ಮಿ ತೊಂಬಟ್ಟು ಇಂದು ಉಡುಪಿ ಮತ್ತೊಬ್ಬನ ಮುಂದೆ ಶರಣಾಗಲಿದ್ದಾರೆ.
ಉಡುಪಿ ಎಸ್‌ಪಿ ಕಚೇರಿಯಲ್ಲಿ ಬೆಳಗ್ಗೆ 10.30 ಕ್ಕೆ ಶರಣಾಗತಿ ಪ್ರಕ್ರಿಯೆ ನಡೆಯಲಿದೆ ಎಂದು ತಿಳಿದುಬಂದಿದೆ. ನಕ್ಸಲ್ ಶರಣಾಗತಿ ಸಮಿತಿ ಅಧ್ಯಕ್ಷ ಶ್ರೀಪಾಲ್ ನೇತೃತ್ವದ ತಂಡದಿAದ ಶರಣಾಗತಿ ಪ್ರಕ್ರಿಯೆ ನಡೆಯಲಿದೆ.
ಲಕ್ಷ್ಮಿ ತೊಂಬಟ್ಟು ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಅಮಾಸೆ ಬೈಲು ಸಮೀಪದ ತೊಂಬಟ್ಟು ಗ್ರಾಮದ ನಿವಾಸಿ. ಆಕೆಯ ಮೇಲೆ ಕರ್ನಾಟಕದಲ್ಲಿ ಮೂರು ಪ್ರಕರಣ ದಾಖಲಾಗಿವೆ. ಅಮವಾಸ್ಯೆ ಬೈಲು ಪೊಲೀಸ್ ಠಾಣೆಯಲ್ಲಿಯೇ ಈ ಎಲ್ಲ ಪ್ರಕರಣಗಳು ದಾಖಲಾಗಿವೆ.
ನಕ್ಸಲ್ ಚಟುವಟಿಕೆ ಬಗ್ಗೆ ಆಸಕ್ತಿ ಬೆಳೆಸಿಕೊಂಡಿದ್ದ ಲಕ್ಷ್ಮಿ ಶಿವು ಎಂಬಾತನ ಜತೆಗೆ ಪ್ರೀತಿಯಲ್ಲಿ ಬಿದ್ದಿದ್ದರು. ಆತನ ಮನವೊಲಿಕೆಯಿಂದಾಗಿ ನಕ್ಸಲ್ ಗುಂಪು ಸೇರಿ ಮನೆ ಬಿಟ್ಟು ಪರಾರಿಯಾಗಿದ್ದರು. ಅನಂತರ ಶಿವು ಮತ್ತು ಲಕ್ಷ್ಮಿ ಇಬ್ಬರು ಆಂಧ್ರ ಪೊಲೀಸರ ಮುಂದೆ ಶರಣಾಗಿದ್ದರು.