ನವದೆಹಲಿ: ಇತ್ತೀಚಿನ ರಾಜ್ಯಸಭೆ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಬಲ ವರ್ಧನೆ ಆಗಿದೆ. ಬಹುಮತದಿಂದ ಎನ್‌ಡಿಎ ಕೇವಲ 3 ಸ್ಥಾನ ದೂರವಿದೆ. 56 ಸ್ಥಾನಗಳಿಗೆ ನಡೆದ ಚುನಾವಣೆಯ ಬಳಿಕ 30 ಸ್ಥಾನಗಳಲ್ಲಿ ಜಯಗಳಿಸಿದ ಬಿಜೆಪಿ ಬಲ ಒಟ್ಟು 97ಕ್ಕೆ ಹಿಗ್ಗಿದೆ. ಜತೆಗೆ ಎನ್‌ಡಿಎ ಬಲ 118 ತಲುಪಿದೆ. ರಾಜ್ಯಸಭೆಯಲ್ಲಿ ಸದ್ಯ ಬಹುಮತಕ್ಕೆ 121 ಸ್ಥಾನಗಳ ಅವಶ್ಯಕತೆ ಇದೆ.

ಮುಂದಿನ ಏಪ್ರಿಲ್, ಮೇ ತಿಂಗಳುಗಳಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೇರಿ ಅತಿ ಹೆಚ್ಚು ಸ್ಥಾನ ಪಡೆದರೆ ರಾಜ್ಯಸಭೆಯಲ್ಲಿ ಇನ್ನಷ್ಟು ಪ್ರಾಬಲ್ಯ ಸಾಧಿಸಬಹುದು. ಇತ್ತೀಚಿಗೆ ನಡೆದ ರಾಜ್ಯಸಭೆಯ ಚುನಾವಣೆಯಲ್ಲಿ ಉತ್ತರ ಪ್ರದೇಶ ಮತ್ತು ಹಿಮಾಚಲ ಪ್ರದೇಶದಲ್ಲಿ ಬಿಜೆಪಿ ಹೆಚ್ಚುವರಿ ಸ್ಥಾನ ಗಿಟ್ಟಿಸಿಕೊಂಡಿತ್ತು.