ಪುತ್ತೂರು: ಅಂಗನವಾಡಿ ಕೇಂದ್ರಗಳು ಪುಟ್ಟ ಮಕ್ಕಳಿಗೆ ಎರಡನೇ ಮನೆ ಇದ್ದಂತೆ ,ಕಾರ್ಯಕರ್ತೆ ತಾಯಿ ಇದ್ದಂತೆ ಎಂದು ಶಾಸಕ ಅಶೋಕ್ ರೈ ಹೇಳಿದರು.

ಅವರು ನೆಕ್ಕಿಲಾಡಿ ಗ್ರಾಪಂ ವ್ಯಾಪ್ತಿಯ ಬೀತಲಪ್ಪು ನ ನೂತನ ಅಂಗನವಾಡಿ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದರು.
ತಳಮಟ್ಟದ ಶಿಕ್ಷಣ ವು ಮಕ್ಕಳ ಬೆಳವಣಿಗೆಗೆ ಪೂರಕವಾಗುತ್ತದೆ. ಸುಮಾರು 11 ಲಕ್ಷ ರೂ‌ವೆಚ್ಚದ ನೂತನ ಕಟ್ಟಡವನ್ನು ಇಲ್ಲಿಗೆ ಸರಕಾರ ಮಂಜೂರು ಮಾಡಿದೆ. ಈ ಕೇಂದ್ರದ ಉಳಿವು ನಮ್ಮ ಕೈಯ್ಯಲ್ಲಿದೆ ಎಂದು ಹೇಳಿದರು.

ನೆಕ್ಕಿಲಾಡಿ ಕೈಗಾರಿಕಾ ಕೇಂದ್ರವಾಗಿಸುವ ನಿಟ್ಟಿನಲ್ಲಿ ಪ್ರಯತ್ನಗಳು ನಡೆಯುತ್ತಿದೆ. ಈಗಾಗಲೇ ಕೆಎಂಎಫ್ ಇಲ್ಲಿಗೆ ಮಂಜೂರಾಗಿದೆ,ಮುಂದೆ ದೊಡ್ಡ ಕೈಗಾರಿಕೆಗಳು ಆರಂಭವಾಗುವ ಅಗತ್ಯವಿದೆ ಎಂದು ಹೇಳಿದರು. ಕೈಗಾರಿಕೆಗಳು ಬಂದಲ್ಲಿ ಗ್ರಾಮ ಅಭಿವೃದ್ದಿಯಾಗುತ್ತದೆ ಎಂದು ಶಾಸಕರು ಹೇಳಿದರು.
ರಾಜ್ಯ ಸರಕಾರದ ಪಂಚ ಗ್ಯಾರಂಟಿ ಯೋಜನೆಯಿಂದ ಜನ ಸ್ವಾವಲಂಬಿಗಳಾಗುವಂತಾಗಿದೆ. ಸರಕಾರದಿಂದ ಸಂಬಳ ರೂಪದಲ್ಲಿ ತಿಂಗಳಿಗೆ ಎರಡು ಸಾವಿರ ಪ್ರತೀ ಮಹಿಳೆಯ ಖಾತೆಗೆ ಜಮೆಯಾಗುತ್ತದೆ ಇದು ದೇಶದ ಹಾಗೂ ಬಡವರ ಅಭಿವೃದ್ದಿಗೆ ಪೂರಕ ಎಂದು ಹೇಳಿದರು.
ತಾಪಂ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ ಯವರು ಮಾತನಾಡಿ ಹೊಸ ಅಂಗನವಾಡಿ ಕಟ್ಟಡ ಕಾಮಗಾರಿ ಉತ್ತಮವಾಗಿ ನಡೆದಿದೆ, ಅಂಗನವಾಡಿಯಲ್ಲಿ‌ಮಕ್ಕಳಿಗೆ ಮನೆಯ ವಾತಾವರಣ ದೊರೆಯುವಂತಾಗಬೇಕು ಎಂದು ಹೇಳಿದರು. ಶಿಕ್ಷಣ ಮತ್ತು ಆರೋಗ್ಯ ಮಕ್ಕಳ ಅಭಿವೃದ್ದಿಗೆ ಪೂರಕವಾಗುತ್ತದೆ ಎಂದು ಹೇಳಿದರು.
ಗ್ರಾಪಂ ಅಧ್ಯಕ್ಷೆ ಸುಜಾತಾ ರವರು ಮಾತನಾಡಿ ಅಂಗನವಾಡಿ ಕೇಂದ್ರದ ಬೆಳವಣಿಗೆಗೆ ಎಲ್ಲರೂ ಸಹಕಾರ ನೀಡಬೇಕು ಎಂದು ಹೇಳಿದರು.

ತಾಪಂ ಕಾರ್ಯನಿರ್ವಹಣಾಧಿಜಾರಿ ನವೀನ್ ಭಂಡಾರಿ, ನೆಕ್ಕಿಲಾಡಿ ಗ್ರಾಪಂ ಅಧ್ಯಕ್ಷೆ ಸಜಾತಾ ರೈ, ಸಿಡಿಪಿಒ ಮಂಗಳಾ, ಗ್ರಾಪಂ ಉಪಾಧ್ಯಕ್ಷ ಹರೀಶ್ ,ಬಾಲವಿಕಾಸ‌ಸಮಿತಿ ಅಧ್ಯಕ್ಷೆ ಪ್ರೇಮಾ, ಗ್ರಾಪಂ ಅಭಿವೃದ್ದಿ ಅಧಿಕಾರಿ ದೇವಪ್ಪ ಉಪಸ್ಥಿತರಿದ್ದರು.‌