Join The Telegram | Join The WhatsApp |
ಬೆಂಗಳೂರು:
ವಿಶ್ವ ಪುಟ್ಬಾಲ್ ಪಂದ್ಯ ಅಂತಿಮ ಘಟ್ಟ ತಲುಪಿರುವ ಹಿನ್ನೆಲೆಯಲ್ಲಿ ರಾಜಧಾನಿ ಬೆಂಗಳೂರಿನಲ್ಲಿ ಪಬ್ ಗಳು, ಬಾರ್ ರೆಸ್ಟೋರೆಂಟ್ ಗಳ ಸಮಯದ ಅವಧಿಯನ್ನು ಬೆಳಗ್ಗಿನ ಜಾವ 5.50ರ ತನಕ ವಿಸ್ತರಿಸಲಾಗಿದೆ.
ಡಿಸೆಂಬರ್ 15ರ ತನಕ ಹೊಸದಾಗಿ ಸೂಚಿಸಲಾದ ಸಮಯದ ತನಕ ಕಾರ್ಯಾಚರಿಸಲು ಅನುಮತಿ ನೀಡಲಾಗಿದೆ ಎಂದು ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ತಿಳಿಸಿದ್ದಾರೆ.
ಫುಟ್ಬಾಲ್ ಪಂದ್ಯ ವೀಕ್ಷಣೆಗೆ ಬಾರ್ ಮತ್ತು ಪಬ್ ಗಳಲ್ಲಿ ಹೆಚ್ಚಾಗಿ ಯುವಕರ ಗುಂಪು ಕಂಡು ಬರುತ್ತಿದೆ. ಫುಟ್ಬಾಲ್ ಪಂದ್ಯ ವೀಕ್ಷಣೆ ನೆಪದಲ್ಲಿ ರಾಜ್ಯದಲ್ಲಿ ಮದ್ಯ ಮಾರಾಟ ಹೆಚ್ಚಾಗಿದ್ದು, ಖಜಾನೆಗೆ ಹಣದ ಹೊಳೆಯೇ ಹರಿದು ಬರುತ್ತಿದೆ.
Join The Telegram | Join The WhatsApp |