ಬೆಂಗಳೂರು: ರಾಜ್ಯದ ಮುಜರಾಯಿ ದೇವಸ್ಥಾನಗಳಲ್ಲಿ ಸೇವಾಚೀಟಿಗಾಗಿ ಡಿಜಿಟಲ್ ಕಿಯೋಸ್ಕ್ ಅಳವಡಿಕೆಯತ್ತ ಸರ್ಕಾರ ಚಿಂತನೆ ನಡೆಸಿದ್ದು ಪ್ರಾಯೋಗಿಕವಾಗಿ ಬೆಂಗಳೂರಿನ ಬನಶಂಕರಿ ದೇವಾಲಯದಲ್ಲಿ ಅಳವಡಿಕೆ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿರುವ ಅವರು ಭಕ್ತಾದಿಗಳು ದೇವರ ಸೇವೆ, ಪ್ರಸಾದ ಮುಂತಾದ ಧಾರ್ಮಿಕ ಆಚರಣೆಗಳ ರಸೀದಿ ಪಡೆಯುವ ಸಲುವಾಗಿ ಸರತಿ ಸಾಲಿನಲ್ಲಿ ನಿಲ್ಲುವುದನ್ನು ತಪ್ಪಿಸುವ ಉದ್ದೇಶದಿಂದ ಮುಜರಾಯಿ ಇಲಾಖೆಗೊಳಪಟ್ಟ ದೇವಾಲಯಗಳಲ್ಲಿ ಡಿಜಿಟಲ್ ಕಿಯೋಸ್ಕ್‌ಗಳ ಅಳವಡಿಕೆಗೆ ಸರ್ಕಾರ ಚಿಂತನೆ ನಡೆಸಿದೆ. ಈ ಸೇವೆಯಡಿ ಯಾತ್ರಾರ್ಥಿಗಳು ತಮಗೆ ಬೇಕಾದ ಸೇವಾಚೀಟಿ, ಪ್ರಸಾದ ಮುಂತಾದವುಗಳನ್ನು ತಾವೇ ನಮೂದಿಸಿ, ಯುಪಿ‌ಐ ಸೌಲಭ್ಯದಡಿ ಹಣ ಸಂದಾಯ ಮಾಡಿ ಕ್ಷಣಮಾತ್ರದಲ್ಲಿ ರಸೀದಿ ಪಡೆಯಬಹುದು ಎಂದಿದ್ದಾರೆ.

ಬಳಕೆ ಹೇಗೆ?:
ಪರದೆ ಮೇಲೆ ಅಗತ್ಯ ಸೇವೆ ಕ್ಲಿಕ್ ಮಾಡಿ
ಹೆಸರು, ಮೊಬೈಲ್ ನಂಬರ್ (ಇ-ಮೇಲ್) ನಮೂದಿಸಿ ಯುಪಿಐ ಸ್ಕ್ಯಾನ್ ಮಾಡಿ, ದರ ಪಾವತಿಸಿ ಚೀಟಿಯೊಂದಿಗೆ ತೆರಳಿ ಸೇವೆ ಸಲ್ಲಿಸಿ ಯಾತ್ರಾರ್ಥಿಗಳಿಗೆ ಸಂತಸದ ಸುದ್ದಿ ದೇಗುಲಗಳಲ್ಲಿ ಡಿಜಿಟಲ್ ಕಿಯೋಸ್ಕ್‌ಗಳ ಅಳವಡಿಕೆಯಿಂದ ಸೇವಾರ್ಥದ ಟಿಕೆಟ್‌ಗಾಗಿ ಸರದಿ ಸಾಲು ನಿಲ್ಲಬೇಕೆಂದಿಲ್ಲ ಮೈಸೂರಿನ ಚಾಮುಂಡೇಶ್ವರಿ, ಬೆಂಗಳೂರಿನ ಬನಶಂಕರಿ, ಕೊಲ್ಲೂರು ಮೂಕಾಂಬಿಕೆ ಸೇರಿದಂತೆ ರಾಜ್ಯದ ನಾನಾ ಮುಜರಾಯಿ ದೇವಸ್ಥಾನಗಳಲ್ಲಿ ಶೀಘ್ರದಲ್ಲೇ ನೂತನ ಸೇವೆ ಆರಂಭವಾಗಿದೆ.

ಬನಶಂಕರಿ ದೇಗುಲದಲ್ಲಿ ಪ್ರಾಯೋಗಿಕವಾಗಿ 2 ಕಿಯೋಸ್‌,ಗಳ ಅಳವಡಿಕೆ ಪ್ರಾಯೋಗಿಕವಾಗಿ ಇದನ್ನು ಬನಶಂಕರಿ ದೇವಾಲಯದಲ್ಲಿ ಅಳವಡಿಸಲಾಗುತ್ತಿದ್ದು, ಭಕ್ತರ ಸ್ಪಂದನೆಯ ಆಧಾರದ ಮೇಲೆ ಇತರೆ ಎಲ್ಲಾ ದೇವಾಲಯಗಳಿಗೂ ವಿಸ್ತರಣೆ ಮಾಡಲಾಗುವುದು ಎಂದಿದೆ.