Join The Telegram | Join The WhatsApp |
ಹೊಸದಿಲ್ಲಿ: ಭಾರತ ತಮ್ಮ ಖಾಯಂ ನಿವಾಸವಾಗಿದ್ದು. ನಾನು ಚೀನಾಗೆ ಹಿಂತಿರುಗುವುದರಲ್ಲಿ ಯಾವುದೇ ಅರ್ಥವಿಲ್ಲ ಎಂದು ಟಿಬೆಟ್ ನ ಧರ್ಮಗುರು ದಲೈಲಾಮಾ ಹೇಳಿದ್ದಾರೆ.
ತವಾಂಗ್ ಘರ್ಷಣೆ ಕುರಿತು ಪ್ರತಿಕ್ರಿಯಿಸಿರುವ ಅವರು, ಸಾಮಾನ್ಯವಾಗಿ ಹೇಳುವುದಾದರೆ ಹಲವು ವಿಷಯಗಳು ಅಭಿವೃದ್ಧಿ ಹೊಂದುತ್ತಿವೆ. ಯುರೋಪ್ ಮತ್ತು ಆಫ್ರಿಕಾ ಕೂಡ. ಚೀನಾ ಕೂಡ ತನ್ನ ನೀತಿಯನ್ನು ಸರಳಗೊಳಿಸುತ್ತಿದೆ. ಹಾಗೆಂದ ಮಾತ್ರಕ್ಕೆ ಚೀನಾಕ್ಕೆ ಮರಳುವುದಿಲ್ಲ. ಭಾರತವೇ ನನ್ನ ಆದ್ಯತೆಯಾಗಿದೆ. ಇದು ಅತ್ಯುತ್ತಮ ಸ್ಥಳವಾಗಿದ್ದು, ಪಂಡಿತ್ ನೆಹರೂ ಆಯ್ಕೆಯಾಗಿದೆ. ಇದು ಖಾಯಂ ನಿವಾಸವಾಗಿದೆ ಎಂದಿದ್ದಾರೆ.
ಹಿಮಾಚಲ ಪ್ರದೇಶದ ಕಾಂಗ್ರಾ ನನ್ನ ‘ಶಾಶ್ವತ ನಿವಾಸ’ ಎಂದು ಒತ್ತಿ ಹೇಳಿರುವ ದಲೈಲಾಮಾ, ಚೀನಾಕ್ಕೆ ಮರಳುವುದರ ಬಗ್ಗೆ ಚಿಂತಿಸುವುದಿಲ್ಲ, ಭಾರತವೇ ನನ್ನ ಶಾಶ್ವತ ನೆಲೆ ಎಂದು ಸೋಮವಾರ ಸ್ಪಷ್ಟಪಡಿಸಿದ್ದಾರೆ.
Join The Telegram | Join The WhatsApp |