ಕುಂದಾಪುರ:
ಇದೀಗ ಯಕ್ಷಗಾನ ಕಿರೀಟದಲ್ಲೂ ಶ್ರೀ ರಾಮ ಅನಾವರಣಗೊಳ್ಳುತ್ತಿದ್ದಾನೆ.
ಕರಾವಳಿಯಲ್ಲಿ ಸನ್ಮಾನ, ಅಭಿನಂದನಾ ಕಾರ್ಯಕ್ರಮಗಳಲ್ಲಿ ಸ್ಮರಣಿಕೆ, ಗೃಹಪ್ರವೇಶ ಇತ್ಯಾದಿ ಸಮಾರಂಭಗಳಲ್ಲಿ ಉಡುಗೊರೆಯಾಗಿ ಯಕ್ಷಗಾನದ ಕಿರೀಟವನ್ನು ನೀಡುವ ವಾಡಿಕೆ ಹೆಚ್ಚುತ್ತಿದೆ.
ಗಂಗೊಳ್ಳಿಯ ಖ್ಯಾತ ಸ್ಯಾಕ್ರೋಫೋನ್ ಕಲಾವಿದ, ಚಿತ್ರಕಲಾ ಶಿಕ್ಷಕ ಮಾಧವ ದೇವಾಡಿಗ ಗಂಗೊಳ್ಳಿ ಅವರು ಗೃಹಪ್ರವೇಶ ಸಮಾರಂಭದಲ್ಲಿ ಉಡುಗೊರೆ ನೀಡುವುದಕ್ಕಾಗಿ ಆಕರ್ಷಕವಾಗಿ ಯಕ್ಷಗಾನ ಕಿರೀಟದ ಕಲಾಕೃತಿ ರಚಿಸಿದ್ದರು. ಜೊತೆಗೆ ಈ ಕಲಾಕೃತಿಯ ಮುಖ ಭಾಗದಲ್ಲಿ ಅಯೋಧ್ಯೆಯ ಬಾಲ ರಾಮನ ಚಿತ್ರವನ್ನು ಅಳವಡಿಸಿ, ಕಲಾಕೃತಿಗೆ ಹೊಸ ಮೆರುಗನ್ನು ತಂದಿದ್ದು, ಜನರ ಮೆಚ್ಚುಗೆಗೆ ಪಾತ್ರವಾಗಿದೆ.