ಮೋದಿ 3.0 ಸರ್ಕಾರದಲ್ಲಿ ಎಚ್ ಡಿ ಕುಮಾರಸ್ವಾಮಿಯವರ ಪ್ರವೇಶದ ನಂತರ ಹೊಸ ಪಕ್ಷವನ್ನು ರಚಿಸಲು ಜೆಡಿಎಸ್ ಕೇರಳ ಘಟಕವು ಮುಂದಾಗಿದೆ. ಇದರಿಂದ ಅನರ್ಹತೆಯನ್ನು ತಪ್ಪಿಸಲು ಸಾಧ್ಯವಾಗಲಿದೆ. ಕೇರಳದ ಜೆಡಿಎಸ್ ಇಬ್ಬರು ಶಾಸಕರು, ಸಚಿವರು ಸೇರಿದಂತೆ ಹೊಸ ಪಕ್ಷದಲ್ಲಿ ಸದಸ್ಯತ್ವವನ್ನು ತೆಗೆದುಕೊಳ್ಳುವುದಿಲ್ಲ.

ತಿರುವನಂತಪುರಂ: ರಾಷ್ಟ್ರೀಯ ಮಟ್ಟದಲ್ಲಿ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ನೇತೃತ್ವದ ಜೆಡಿಎಸ್ ಅಧಿಕೃತ ಪಕ್ಷದಿಂದ ಔಪಚಾರಿಕವಾಗಿ ಹೊರಗುಳಿಯಲು ಜನತಾ ದಳ (ಜಾತ್ಯತೀತ) ಕೇರಳ ಘಟಕ ತೀರ್ಮಾನಿಸಿದೆ. ಮಂಗಳವಾರ ರಾಜ್ಯದಲ್ಲಿ ಹೊಸ ಪಕ್ಷವನ್ನು ರಚಿಸಲು ನಿರ್ಧರಿಸಿದೆ.

ಆದರೆ, ಅನರ್ಹತೆಯನ್ನು ತಪ್ಪಿಸಲು ಕೇರಳದ ಇಬ್ಬರು ಶಾಸಕರು, ಸಚಿವರು ಸೇರಿದಂತೆ ಹೊಸ ಪಕ್ಷದಲ್ಲಿ ಸದಸ್ಯತ್ವವನ್ನು ತೆಗೆದುಕೊಳ್ಳುವುದಿಲ್ಲ.

ಜೆಡಿ(ಎಸ್) ರಾಷ್ಟ್ರೀಯ ನಾಯಕತ್ವವು ಎನ್‌ಡಿಎಗೆ ಸೇರಲು ನಿರ್ಧರಿಸಿದಾಗಿನಿಂದ, ಸಿಪಿಎಂ ನೇತೃತ್ವದ ಎಡ ಪ್ರಜಾಸತ್ತಾತ್ಮಕ ರಂಗದಲ್ಲಿ ಸಮ್ಮಿಶ್ರ ಪಾಲುದಾರರಾಗಿರುವ ಕೇರಳ ಘಟಕವು ಪಕ್ಷದೊಂದಿಗಿನ ಸಂಬಂಧವನ್ನು ಕಡಿದುಕೊಳ್ಳುವ ಒತ್ತಡದಲ್ಲಿದೆ. ನರೇಂದ್ರ ಮೋದಿ ನೇತೃತ್ವದ ಮೂರನೇ ಎನ್‌ಡಿಎ ಸರ್ಕಾರದಲ್ಲಿ ಜೆಡಿ (ಎಸ್) ನಾಯಕ ಎಚ್ ಡಿ ಕುಮಾರಸ್ವಾಮಿ ಸಚಿವರಾಗಿ ಸೇರ್ಪಡೆಗೊಂಡಾಗ, ಜೆಡಿ (ಎಸ್) ಕೇರಳ ಘಟಕದ ಮೇಲೆ ಒತ್ತಡ ಹೆಚ್ಚಾಯಿತು.

ಮಂಗಳವಾರ ನಡೆದ ಪಕ್ಷದ ಕೇರಳ ನಾಯಕತ್ವದ ಸಭೆಯು ಹೊಸ ಪಕ್ಷವನ್ನು ರಚಿಸಲು ನಿರ್ಧರಿಸಿದೆ. ಕೇರಳದ ಸಚಿವರು ಸೇರಿದಂತೆ ಪಕ್ಷದ ಇಬ್ಬರು ಶಾಸಕರು ಜೆಡಿಎಸ್‌ನಿಂದ ಅನರ್ಹತೆಯನ್ನು ಎದುರಿಸುವುದಿಲ್ಲ ಎಂದು ಖಚಿತಪಡಿಸಿಕೊಳ್ಳಲು ಅವರು ಹೊಸ ಪಕ್ಷದಲ್ಲಿ ಯಾವುದೇ ಅಧಿಕೃತ ಸ್ಥಾನವನ್ನು ತೆಗೆದುಕೊಳ್ಳುವುದಿಲ್ಲ ಮತ್ತು ತಾಂತ್ರಿಕವಾಗಿ ಜೆಡಿ (ಎಸ್) ಭಾಗವಾಗಿ ಉಳಿಯುತ್ತಾರೆ.
ಇಂತಹ ನಿಲುವು ವಿರೋಧ ಪಕ್ಷಗಳಿಗೆ ಟೀಕೆ ಮಾಡಲು ಸಾಕಷ್ಟು ಅವಕಾಶ ನೀಡಬಹುದು ಎಂಬ ಆತಂಕ ಎಡರಂಗದಲ್ಲಿದೆ.

ವಿದ್ಯುತ್ ಸಚಿವ ಕೆ ಕೃಷ್ಣನ್ ಕುಟ್ಟಿ ಮತ್ತು ಪಕ್ಷದ ರಾಜ್ಯಾಧ್ಯಕ್ಷ ಮತ್ತು ಮಾಜಿ ಸಚಿವ ಮ್ಯಾಥ್ಯೂ ಟಿ ಥಾಮಸ್ ಈಗ ಕೇರಳದಲ್ಲಿ ಜೆಡಿ (ಎಸ್) ನ ಇಬ್ಬರು ಶಾಸಕರು.