Join The Telegram | Join The WhatsApp |
ಬೆಳಗಾವಿ :
ಕೆಎಲ್ಇ ಸಂಸ್ಥೆಯ ಜಿಎ ಪದವಿಪೂರ್ವ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರ ಡಿ. 9 ರಿಂದ 15 ರವರೆಗೆ ಭೂತರಾಮನಟ್ಟಿಯಲ್ಲಿ ಜರಗಲಿದೆ ಎಂದು ಸೇವಾ ಯೋಜನೆ ಘಟಕದ ಅಧಿಕಾರಿ ಟಿ. ಪಿ. ಬಾನಕರೆ ತಿಳಿಸಿದ್ದಾರೆ.
ಈ ಒಂದು ವಾರದ ಕಾರ್ಯಕ್ರಮದಲ್ಲಿ ದೇಶಕ್ಕೆ ಯುವ ಶಕ್ತಿ ಪರಿಸರಕ್ಕೆ ವನ ಶಕ್ತಿ, ಯುವ ಜನತೆ ಮತ್ತು ಸಾಂಸ್ಕೃತಿಕ ಮೌಲ್ಯಗಳು, ವಿಶ್ವ ಪರಂಪರೆ ತಾಣಗಳು ಮತ್ತು ಐತಿಹಾಸಿಕ ಸ್ಮಾರಕಗಳ ರಕ್ಷಣೆ, ಆರೋಗ್ಯ ರಕ್ಷಣೆಯಲ್ಲಿ ಸ್ವಚ್ಛತೆ ಪಾತ್ರ, ಶರಣ ಸಂಸ್ಕೃತಿ ಹಿರಿಮೆ ಗರಿಮೆ ಕುರಿತ ಉಪನ್ಯಾಸಗಳು ಜರುಗಲಿವೆ ಎಂದು ಪ್ರಾಚಾರ್ಯ ರವಿ ಪಾಟೀಲ ತಿಳಿಸಿದ್ದಾರೆ.
Join The Telegram | Join The WhatsApp |