ದೆಹಲಿ : ಎರಡು ದಶಕಗಳ ನಂತರ ಕೇಂದ್ರದಲ್ಲಿ ತಮ್ಮ ಪಕ್ಷ ಅಧಿಕಾರಕ್ಕೆ ಬರಲೇಬೇಕು ಎಂದು ಪಣತೊಟ್ಟಿರುವ ಕಾಂಗ್ರೆಸ್ ಇದೀಗ ಯುವಕರನ್ನು ಸೆಳೆಯುವ ನಿಟ್ಟಿನಲ್ಲಿ ಹಲವು ಜನಪ್ರಿಯ ಕಾರ್ಯಕ್ರಮಗಳನ್ನು ಘೋಷಣೆ ಮಾಡಲು ಮುಂದಾಗಿದೆ.

ಗಿಗ್ (ಸ್ವಿಗ್ಗಿ, ಝಮೇಟೋದಂಥ ನೌಕರರು) ನೌಕರರಿಗೆ ಸಾಮಾಜಿಕ ಭದ್ರತೆ ಒದಗಿಸಲಾಗುವುದು. ಸ್ಟಾರ್ಟಪ್ ಕಂಪನಿಗಳಿಗೆ 5000 ಕೋಟಿ ರು. ನಿಧಿ ಮೀಸಲಿಡಲಾಗುವುದು.

ಹಾಲಿ 1961ರ ಅಪ್ರೆಂಟಿಸ್‌ಶಿಪ್ ಯೋಜನೆ ಜಾರಿಯಲ್ಲಿದ್ದು, ಇದು 45 ಸಾವಿರ ಕಂಪನಿಗಳನ್ನು ಒಳಗೊಂಡಿದೆ. ಇದನ್ನು 10 ಲಕ್ಷ ಖಾಸಗಿ/ಸರ್ಕಾರಿ ಕಂಪನಿಗಳಿಗೆ ವಿಸ್ತರಿಸಲಾಗುವುದು. ಇಲ್ಲಿ 1 ವರ್ಷ ಅಪ್ರೆಂಟಿಸ್ ತರಬೇತಿಗೆ ಯುವಕರನ್ನು ನಿಯೋಜಿಸಲಾಗುವುದು. ಯುವಕರಿಗೆ ನೀಡುವ 1 ಲಕ್ಷ ರು. ಅಪ್ರೆಂಟಿಸ್‌ ವೇತನವನ್ನು ಹೆಚ್ಚಾಗಿ ಸರ್ಕಾರವೇ ಭರಿಸಲಿದೆ. ಮಿಕ್ಕದ್ದನ್ನು ಖಾಸಗಿ ಕಂಪನಿಗಳು ಭರಿಸಬೇಕಾಗುತ್ತದೆ ಎಂದು ಕಾಂಗ್ರೆಸ್ ಹೇಳಿದೆ.

ಮುಂಬರುವ ಲೋಕಸಭೆ ಚುನಾವಣೆಯಲ್ಲಿ ದೇಶದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ, ಉದ್ಯೋಗ ಹಕ್ಕು ನೀಡಲಾಗುವುದು. 30 ಲಕ್ಷ ಸರ್ಕಾರಿ ಹುದ್ದೆಗಳನ್ನು ಭರ್ತಿ ಮಾಡಲಾಗುವುದು. ಪದವೀಧರರು ಹಾಗೂ ಡಿಪ್ಲೊಮಾ ಪದವೀಧರರಿಗೆ 1 ಲಕ್ಷ ರು. ಜತೆಗೆ 1 ವರ್ಷ
ಅಪ್ರೆಂಟಿಸ್‌ಶಿಪ್
ಕೊಡಿಸಲಾಗುವುದು ಎಂದು ಪಕ್ಷದ ಅತ್ಯುಚ್ಚ ನಾಯಕ ರಾಹುಲ್ ಗಾಂಧಿ ಭರವಸೆ ನೀಡಿದ್ದಾರೆ. ಭಾರತ್ ಜೋಡೋ ನ್ಯಾಯ ಯಾತ್ರೆ ಮಧ್ಯಪ್ರದೇಶದಿಂದ ರಾಜಸ್ಥಾನದಿಂದ ಬಾಂಸ್ ವಾಡ ಪ್ರವೇಶಿಸಿದ ಸಂದರ್ಭದಲ್ಲಿ ಮಾತನಾಡಿದ ಅವರು, ನಿರುದ್ಯೋಗ ಹೋಗಲಾಡಿಸಲು ಪದವಿ ಮುಗಿಸಿದವರಿಗೆ ಕಂಪನಿಗಳಲ್ಲಿ ಅಪ್ರೆಂ ಟಿಸ್‌ ತರಬೇತಿ ಕೊಡಿಸಲಾಗುವುದು. ಈ ವೇಳೆ ಅವರಿಗೆ 1 ವರ್ಷ ಅಪ್ರೆಂಟಿಸ್‌ ವೇತನ ನೀಡಲಾ ಗುವುದು ಎಂದರು.

ಸರ್ಕಾರಿ ಉದ್ಯೋಗ ನೇಮಕಾತಿ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆ ಯಾಗುವುದನ್ನು ತಪ್ಪಿಸಲು ಕಾನೂನು ರೂಪಿಸಲಾಗುವುದು. ಕನಿಷ್ಠ ಬೆಂಬಲ ಬೆಲೆಗೆ ಕಾನೂ ನಿನಡಿ ಖಾತ್ರಿ ನೀಡಲಾಗುವುದು ಎಂದು ವಿವರಿಸಿದರು.