ಬೆಳಗಾವಿ: ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) (ಬಿಎಸ್‌ಇ: 532540, ಎನ್‌ಎಸ್‌ಇ: ಟಿಸಿಎಸ್) ಮತ್ತು ಕರ್ನಾಟಕ ಸರ್ಕಾರದ ಉತ್ತೇಜಿತ ಸ್ವಾಯತ್ತ ಸಂಸ್ಥೆಯಾದ ಐಟಿ ಶಿಕ್ಷಣ ಮಾನದಂಡಗಳ ಮಂಡಳಿ (ಬೋರ್ಡ್ ಫಾರ್ ಐಟಿ ಎಜುಕೇಷನ್ ಸ್ಟಾಂಡರ್ಡ್ಸ್- ಬೈಟ್ಸ್) 15ನೇ ಆವೃತ್ತಿಯ ಟಿಸಿಎಸ್ ಟೆಕ್‌ಬೈಟ್ಸ್‌ ವಿಜೇತರನ್ನು ಘೋಷಿಸಿದೆ.

ಪ್ರಥಮ ಬಹುಮಾನ: ಧೀರಜ್ ಅಂಗಡಿ – ಕೆಎಲ್‌ಎಸ್ ಎಂಎಸ್ ಶೇಷಗಿರಿ ಕಾಲೇಜ್ ಆಫ್ ಇಂಜಿನಿಯರಿಂಗ್ & ಟೆಕ್ನಾಲಜಿ, ಬೆಳಗಾವಿ

ದ್ವಿತೀಯ ಬಹುಮಾನ: ಕೌಶಿಕ್ ಎಸ್.ನಂದನ್–ಎನ್ಐಟಿ, ಸುರತ್ಕಲ್

ಟಿಸಿಎಸ್ ಕಂಪನಿಯು ಪ್ರಥಮ ಬಹುಮಾನ ಮತ್ತು ದ್ವಿತೀಯ ಬಹುಮಾನ ಪಡೆದ ವಿದ್ಯಾರ್ಥಿಗಳಿಗೆ ಕ್ರಮವಾಗಿ ರೂ 85,000 ಮತ್ತು ರೂ 50,000 ಶಿಕ್ಷಣ ವಿದ್ಯಾರ್ಥಿ ವೇತನವನ್ನು ನೀಡಿತು. ಜೊತೆಗೆ ಅಂತಿಮ ಹಂತದಲ್ಲಿ ಭಾಗವಹಿಸಿದ ಎಲ್ಲಾ ಸ್ಪರ್ಧಿಗಳಿಗೂ ಶಿಕ್ಷಣ ವಿದ್ಯಾರ್ಥಿ ವೇತನವನ್ನು ನೀಡಿತು. ಟಿಸಿಎಸ್ ಬೆಂಗಳೂರಿನ ಪ್ರಾದೇಶಿಕ ಮುಖ್ಯಸ್ಥ ಸುನಿಲ್ ದೇಶಪಾಂಡೆ, ಏರೋಸ್ಪೇಸ್ ಇಂಜಿನಿಯರಿಂಗ್ ಐಐಎಸ್‌ಸಿಯ ಪ್ರೊ.ಸುರೇಶ್ ಸುಂದರಂ, ಬೈಟ್ಸ್‌ ನ ಸಹ ಅಧ್ಯಕ್ಷ ಡಾ.ಸೆಲ್ವನ್ ಡಿ ಮತ್ತು ಎಸ್‌ಜೆಬಿಐಟಿ ಪ್ರಾಂಶುಪಾಲ ಡಾ ಕೆ ವಿ ಮಹೇಂದ್ರ ಪ್ರಶಾಂತ್ ಪ್ರಶಸ್ತಿ ಪ್ರದಾನ ಮಾಡಿದರು.

ಈ ಸಂದರ್ಭದಲ್ಲಿ ಟಿಸಿಎಸ್ ಬೆಂಗಳೂರು ಪ್ರಾದೇಶಿಕ ಮುಖ್ಯಸ್ಥ ಸುನಿಲ್ ದೇಶಪಾಂಡೆ ಮಾತನಾಡಿ, “ಟಿಸಿಎಸ್ ಟೆಕ್ ಬೈಟ್ಸ್ ಬೆಳವಣಿಗೆ ಹೊಂದುತ್ತಿರುವ ತಂತ್ರಜ್ಞಾನ ಟ್ರೆಂಡ್ ಗಳ ಜೊತೆ ಜೊತೆಗೆ ಸಾಗಲು ವಿದ್ಯಾರ್ಥಿಗಳಿಗೆ ಇರುವ ಉತ್ತಮ ಅವಕಾಶವಾಗಿದೆ. ನಿರಂತರ ಕಲಿಕೆಯೆಡೆಗಿನ ಉತ್ಸಾಹವನ್ನು ಪ್ರದರ್ಶಿಸಿದ ಎಲ್ಲಾ ಅಂತಿಮ ಹಂತದ ಸ್ಪರ್ಧಿಗಳ ಪ್ರತಿಭಾ ಪ್ರದರ್ಶನದಿಂದ ನಾವು ಸಂತೋಷ ಹೊಂದಿದ್ದೇವೆ” ಎಂದು ಹೇಳಿದರು.

ಬೈಟ್ಸ್ (BITES)ನ ಅಧ್ಯಕ್ಷ ಪ್ರೊ. ಎಸ್. ಸಡಗೋಪನ್ ಮಾತನಾಡಿ, “ಟಿಸಿಎಸ್ ಟೆಕ್ ಬೈಟ್ಸ್ ಉತ್ಕೃಷ್ಟತೆಯ ಸಂಸ್ಕೃತಿಯನ್ನು ಹುಟ್ಟು ಹಾಕಿದೆ. ಅದು ಇಂದಿನ ಸ್ಪರ್ಧಾತ್ಮಕ ವಾತಾವರಣದಲ್ಲಿ ಬಹಳ ಮುಖ್ಯವಾಗಿದೆ ಕೂಡ. ಈ ಮಹತ್ವದ ಉಪಕ್ರಮದಲ್ಲಿ ಟಿಸಿಎಸ್ ಜೊತೆಗೆ ಸಹಯೋಗ ಹೊಂದಲು ನಾವು ಹೆಮ್ಮೆಪಡುತ್ತೇವೆ. ಏಕೆಂದರೆ ಈ ಉಪಕ್ರಮವು ಕರ್ನಾಟಕದಾದ್ಯಂತ ಇರುವ ವಿದ್ಯಾರ್ಥಿಗಳು ತಮ್ಮ ತಾಂತ್ರಿಕ
ಕೌಶಲ ಹೊಂದಿದ್ದಾರೆ.

ಜ್ಞಾನವನ್ನು ವಿಸ್ತರಿಸಲು ಬೇಕಾದ ವೇದಿಕೆಯನ್ನು ಒದಗಿಸುತ್ತದೆ” ಎಂದು ಹೇಳಿದರು.

ಈ ವರ್ಷ ಕರ್ನಾಟಕದಾದ್ಯಂತ 115 ಎಂಜಿನಿಯರಿಂಗ್ ಕಾಲೇಜುಗಳ ವಿದ್ಯಾರ್ಥಿಗಳು ಈ ರಸಪ್ರಶ್ನೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಹುಬ್ಬಳ್ಳಿ, ಮಂಗಳೂರು, ಮೈಸೂರು, ಬೆಂಗಳೂರು, ತುಮಕೂರು
ಮತ್ತು ಕಲಬುರಗಿಯಲ್ಲಿ ಆರು ಪ್ರಾದೇಶಿಕ ಸುತ್ತುಗಳನ್ನು ಆಯೋಜಿಸಲಾಗಿತ್ತು.