ತಿಂಗಳ ಅವಧಿಯ ವಾರ್ಷಿಕ ತೀರ್ಥಯಾತ್ರೆಯ ಋತು ಇದಾಗಿದ್ದು ಸಾಂಪ್ರದಾಯಿಕ ಕಪ್ಪು ಉಡುಪುಗಳನ್ನು ಧರಿಸಿದ ಭಕ್ತರ ದಂಡು ಮತ್ತು ತಮ್ಮ ತಲೆಯ ಮೇಲೆ ‘ಇರುಮುಡಿ’ ಹೊತ್ತುಕೊಂಡು ದೀಪಾರತಿ ಗಾಗಿ ದೇವಾಲಯದ ಸಂಕೀರ್ಣದಲ್ಲಿ ಮತ್ತು ಸುತ್ತಮುತ್ತ ಬೆಳಗ್ಗೆಯಿಂದಲೇ ಕಾಯುತ್ತಿದ್ದರು.ದೇವಸ್ವಂ ಅಧಿಕಾರಿಗಳು, ಪೊಲೀಸ್ ಸಿಬಂದಿ ಮತ್ತು ಅರ್ಚಕರು ವಿಶೇಷ ಸಿದ್ದತೆಗಳನ್ನು ಕೈಗೊಂಡಿದ್ದರು.
ಸಂಜೆ 6.30 ರ ಸುಮಾರಿಗೆ, ಅಯ್ಯಪ್ಪ ಜನಿಸಿದ ಪಂದಳಂ ಅರಮನೆಯಿಂದ ಪವಿತ್ರ ಆಭರಣಗಳನ್ನು ತರಲಾಯಿತು, ಸುಮಾರು 85 ಕಿಲೋಮೀಟರ್ ದೂರದಲ್ಲಿರುವ ಪಂದಳಂ ಅರಮನೆಯಿಂದ ಎರಡು ದಿನಗಳ ಹಿಂದೆ ವಿಧ್ಯುಕ್ತ ಮೆರವಣಿಗೆ ಆರಂಭವಾಗಿತ್ತು. ಅಯ್ಯಪ್ಪನ ವಿಗ್ರಹವನ್ನು ಪವಿತ್ರ ಆಭರಣಗಳಿಂದ ಅಲಂಕರಿಸಿದ ನಂತರ ದೀಪಾರಾಧನೆ ನಡೆಸಲಾಯಿತು.
ದೇಗುಲದ ಹೊರಗೆ ಅಪಾರ ಭಕ್ತಗಡಣವು ಸೇರಿದ್ದರಿಂದ ನೂಕುನುಗ್ಗಲು ಉಂಟಾಯಿತು, ಭಕ್ತರು ಪವಿತ್ರ ಆಭರಣಗಳಿಂದ ಅಲಂಕರಿಸಲ್ಪಟ್ಟ ಭಗವಾನ್ ಅಯ್ಯಪ್ಪನ ನೋಡಲು ಮುಗಿಬಿದ್ದರು. ದೇಗುಲದ ಹೆಬ್ಬಾಗಿಲು ತೆರೆದಾಗ ‘ಶರಣಂ ಅಯ್ಯಪ್ಪ’ ಘೋಷಣೆಗಳು ಮತ್ತು ಸ್ತೋತ್ರಗಳು ಮುಗಿಲು ಮುಗಿಲು ಮುಟ್ಟಿತು.
ದೇವಾಲಯದ ಸಂಕೀರ್ಣದಿಂದ ಎಂಟು ಕಿಲೋಮೀಟರ್ ದೂರದ ಬೆಟ್ಟದ ಮೇಲಿರುವ ಪೊನ್ನಂಬಲಮೇಡು ಮೇಲಿನ ಪೂರ್ವ ಆಗಸದಲ್ಲಿ ಕೆಲವು ನಿಮಿಷಗಳ ನಂತರ ‘ಮಕರ ಜ್ಯೋತಿ’ ಮಿನುಗಿತು. ದೈವಿಕ ಬೆಳಕು ಎಂದು ಪರಿಗಣಿಸಲ್ಪಟ್ಟ ‘ಮಕರ ಜ್ಯೋತಿ’ ಕಂಡಾಗ ಭಕ್ತರಿಂದ ಶರಣಂ ಅಯ್ಯಪ್ಪ ಘೋಷಗಳು ಮತ್ತಷ್ಟು ತೀವ್ರಗೊಂಡವು.
ಹಿನ್ನೆಲೆ ಗಾಯಕ ವೀರಮಣಿದಾಸನ್‌ಗೆ ಪ್ರಶಸ್ತಿ :
ತಮಿಳು ಹಿನ್ನೆಲೆ ಗಾಯಕ ಪಿ.ಕೆ. ವೀರಮಣಿದಾಸನ್‌ ಅವರಿಗೆ ಪ್ರಸಕ್ತ ವರ್ಷದ ಪ್ರತಿಷ್ಠಿತ ಹರಿವರಾಸನಮ್‌ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಶಬರಿಮಲೆಯ ಸನ್ನಿಧಾನಂನಲ್ಲಿ ಕೇರಳ ದೇವಸ್ವಂ ಸಚಿವ ಕೆ. ರಾಧಾಕೃಷ್ಣನ್‌ ಅವರು ಸೋಮವಾರ ವೀರಮಣಿದಾಸನ್‌ರಿಗೆ ಪ್ರಶಸ್ತಿಯನ್ನು ಪ್ರದಾನ ಮಾಡಿದ್ದಾರೆ. ಇದು ಒಂದು ಲಕ್ಷ ರೂ. ನಗದು ಮತ್ತು ಸ್ಮರಣಿಕೆಯನ್ನು ಒಳಗೊಂಡಿದೆ. ಇವರ ಕಂಠಸಿರಿಯಲ್ಲಿ ಕನ್ನಡ, ತಮಿಳು, ತೆಲುಗು ಸೇರಿದಂತೆ ವಿವಿಧ ಭಾಷೆಗಳ 6 ಸಾವಿರಕ್ಕೂ ಅಧಿಕ ಭಕ್ತಿಗೀತೆಗಳು ಹೊರಬಂದಿವೆ.

ಮಕರ ಜ್ಯೋತಿ ವೀಕ್ಷಿಸಿ ಪುಳಕಿತರಾದ ಅಯ್ಯಪ್ಪ ಭಕ್ತರು

ಪತ್ತನಂತಿಟ್ಟ (ಕೇರಳ): ಮಕರವಿಳಕ್ಕು ಆಚರಣೆಯ (ಮಕರ ಸಂಕ್ರಾಂತಿ) ದಿನದಂದು ಸೋಮವಾರ ಇಲ್ಲಿನ ಅಯ್ಯಪ್ಪನ ಬೆಟ್ಟದ ದೇಗುಲದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಮಾಲಾಧಾರಿ ಭಕ್ತರು ಹಲವಾರು ತಾಸು ಬೃಹತ್ ಸರತಿ ಸಾಲಿನಲ್ಲಿ ನಿಂತು ಅಯ್ಯಪ್ಪ ಸ್ವಾಮಿಯ ದರ್ಶನ ಪಡೆದು, ಪ್ರಾರ್ಥನೆ ಸಲ್ಲಿಸಿದರು.

ಸಾಂಪ್ರದಾಯಿಕ ಕಪ್ಪು ಬಟ್ಟೆ ಧರಿಸಿ, ತಲೆಯ ಮೇಲೆ ಇರುಮುಡಿ ಕಟ್ಟು (ಭಕ್ತರು ದೇಗುಲಕ್ಕೆ ತರುವ ಸಾಂಪ್ರದಾಯಿಕ ಹರಕೆಯ ಕಟ್ಟು) ಹೊತ್ತು ಬಂದಿದ್ದ ವ್ರತಧಾರಿ ಭಕ್ತರ ದಂಡು ದೀಪಾರಾಧನೆಗಾಗಿ ದೇವಾಲಯದ ಸಂಕೀರ್ಣದಲ್ಲಿ ಮತ್ತು ಸುತ್ತಮುತ್ತ ಬೆಳಿಗ್ಗೆಯಿಂದಲೇ ಕಾಯುತ್ತಿತ್ತು. ಸುಮಾರು 85 ಕಿಲೋಮೀಟರ್ ದೂರದಲ್ಲಿರುವ ಪಂದಳಂ ಅರಮನೆಯಿಂದ ಎರಡು ದಿನಗಳ ಹಿಂದೆ ಆರಂಭವಾದ ವಿಧ್ಯುಕ್ತ ಮೆರವಣಿಗೆಯಲ್ಲಿ ದೀಪರಾಧನೆಗೆ ಕೆಲವೇ ಕ್ಷಣಗಳ ಮೊದಲು ತಿರುವಾಭರಣ (ಪವಿತ್ರ ಆಭರಣ)ಗಳನ್ನು ಇಲ್ಲಿಗೆ ತರಲಾಯಿತು. ಸಂಜೆ 6.45ರ ಸುಮಾರಿಗೆ ಅಯ್ಯಪ್ಪ ದೇವರ ಮೂರ್ತಿಯನ್ನು ಆಭರಣಗಳಿಂದ ಅಲಂಕರಿಸಿ, ದೀಪಾರಾಧನೆ ನಂತರ (ಆರತಿ) ದೇಗುಲದ ಬಾಗಿಲನ್ನು ಭಕ್ತರ ದರ್ಶನಕ್ಕೆ ತೆರೆಯಲಾಯಿತು.

ಪುರಾಣದ ಪ್ರಕಾರ, ಅಯ್ಯಸ್ವಾಮಿ ಜನಿಸಿದ ಮತ್ತು ಬಾಲ್ಯ ಕಳೆದ ಪಂದಳಂ ಅರಮನೆಯಿಂದ ತಿರುವಾಭರಣವನ್ನು ತಂದು, ದೀಪಾರಾಧನೆಗೂ ಮುನ್ನ ಮೂರ್ತಿ ಅಲಂಕರಿಸಲಾಗುತ್ತದೆ.

ಆಭರಣ ಅಲಂಕೃತ ಅಯ್ಯಪ್ಪ ಸ್ವಾಮಿಯನ್ನು ಕಣ್ತುಂಬಿಕೊಳ್ಳುವ ಕ್ಷಣಕ್ಕಾಗಿ ದೇಗುಲದ ಹೊರಗೆ ಅಪಾರಸಂಖ್ಯೆಯಲ್ಲಿ ಭಕ್ತರು ಮೂರ್ತಿಯತ್ತ ನೋಡುತ್ತಾ ನಿಂತಿದ್ದರು. ದೇಗುಲದ ಹೆಬ್ಬಾಗಿಲು ತೆರೆದಾಗ ಭಕ್ತಗಣದಿಂದ ‘ಶರಣಂ ಅಯ್ಯಪ್ಪ’ ಘೋಷಣೆ, ಅಯ್ಯಪ್ಪನ ಕುರಿತ ಕೀರ್ತನೆಗಳು ಮುಗಿಲುಮುಟ್ಟಿದವು.

ದೀಪಾರಾಧನೆಯ ಕೆಲವು ನಿಮಿಷಗಳ ನಂತರ, ದೇವಾಲಯದ ಸಂಕೀರ್ಣದಿಂದ ಎಂಟು ಕಿಲೋಮೀಟರ್ ದೂರದ ಬೆಟ್ಟದ ಮೇಲಿರುವ ಪೊನ್ನಂಬಲಮೇಡುವಿನ ಪೂರ್ವ ದಿಗಂತದಲ್ಲಿ, ಭಕ್ತರು ದೈವಿಕ ಜ್ಯೋತಿ ಎಂದೇ ಭಾವಿಸಿರುವ ‘ಮಕರ ಜ್ಯೋತಿ’ ಮಿನುಗಿದಾಗ ‘ಶರಣಂ ಅಯ್ಯಪ್ಪ’ ಘೋಷಣೆಗಳು ಮತ್ತಷ್ಟು ಮಾರ್ದನಿಸಿದವು.

ಮಕರ ಜ್ಯೋತಿಯನ್ನು ಕಣ್ತುಂಬಿಕೊಳ್ಳಲು ಪುಲ್ಲುಮೇಡು, ಪಾಂಚಾಲಿಮೇಡು, ಪರುಂತುಂಪಾರ ಪ್ರದೇಶಗಳಲ್ಲಿ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಸೇರಿದ್ದರು.

.