ಬೆಳಗಾವಿ : ಕೆ.ಆರ್.ಸಿ.ಇ.ಎಸ್.ಎಚ್.ವಿ.ಕೌಜಲಗಿ ಕಾನೂನು ಮಹಾವಿದ್ಯಾಲಯದ ಪ್ರಸಕ್ತ ಸಾಲಿನ ವಾರ್ಷಿಕ ಸ್ನೇಹ ಸಮ್ಮೇಳನ ಸಮಾರಂಭವನ್ನು ಶನಿವಾರ ಕೌಜಲಗಿ ಕಾನೂನು ಮಹಾವಿದ್ಯಾಲಯದ ಸಭಾಮಂದಿರದಲ್ಲಿ ಹಮ್ಮಿಕೊಳ್ಳಲಾಗಿತ್ತು.

ಹಿರಿಯ ನ್ಯಾಯವಾದಿ ಝಡ್.ಎ.ಗೋಕಾಕ ಮಾತನಾಡಿ, ಕಾನೂನು ಮತ್ತು ನೈತಿಕತೆ ಬಗ್ಗೆ ಸರಿಯಾಗಿ ಅರ್ಥೈಸಿಕೊಂಡು ಪ್ರಾಮಾಣಿಕವಾಗಿ ನ್ಯಾಯ ಕೊಡಿಸಲು ಪ್ರಯತ್ನಿಸಬೇಕೆಂದರು. ಕಾನೂನಿನ ಪ್ರಾಥಮಿಕ ಶಿಕ್ಷಣದಲ್ಲಿ ಕಾನೂನು ಜ್ಞಾನವನ್ನು ಕಾನೂನು ಪದ ಕೋಶ, ಸಂವಿಧಾನ ಬಗ್ಗೆ ತಿಳಿದುಕೊಳ್ಳಬೇಕು. ಸಂವಿಧಾನ ಕಾನೂನು ಪ್ರಜಾಪ್ರಭುತ್ವದ ಆತ್ಮವಾಗಿದೆ ಎಂದು ಹೇಳಿದರು.

ಅಪಕೃತ್ಯ ಕಾನೂನು, ಅಪರಾಧಿಕ ಕಾನೂನು, ಸಾಕ್ಷ್ಯ ಅಧಿ ನಿಯಮ, ಹಿಂದೂ ಕಾನೂನು ಬಗ್ಗೆ ಸರಿಯಾಗಿ ತಿಳಿದುಕೊಳ್ಳುವುದು ಬಹಳ ಅವಶ್ಯಕವಾಗಿದೆ. ಭಾರತೀಯ ಕಾನೂನು ಹಾಗೂ ವಿದೇಶಿ ಕಾನೂನು ನಡುವೆ ಇರುವ ಅಂತರವನ್ನು ಅಪಕೃತ್ಯ ಕಾನೂನು ಮೂಲಕ ಹಾನಿ ಮತ್ತು ಪರಿಹಾರ ಕುರಿತು ನಿರ್ದೇಶನಗಳೊಂದಿಗೆ ವಿದ್ಯಾರ್ಥಿಗಳಿಗೆ ಮನದಟ್ಟಾಗುವಂತೆ ತಿಳಿಸಿದರು.

ಕಾನೂನು ಶಿಕ್ಷಣ ಅಧ್ಯಯನ ಪಡೆದ ನಂತರದಲ್ಲಿ ತಾವೆಲ್ಲರೂ ಮುಂದೆ ನ್ಯಾಯಾಲಯದಲ್ಲಿ ಪಕ್ಷಗಾರರಿಗೆ ನ್ಯಾಯ ಕೊಡಿಸುವ ಸಂದರ್ಭದಲ್ಲಿ ನಿಷ್ಪಕ್ಷಪಾತದಿಂದ ಕಾರ್ಯನಿರ್ವಹಣೆ ಮಾಡಬೇಕು. ವಕೀಲರಾಗುವ ತಾವೆಲ್ಲರೂ ಮುಂದೆ ನ್ಯಾಯವಾದಿ ವೃತ್ತಿ ಎಂಬುದನ್ನು ಸಾರ್ವಜನಿಕವಾಗಿ ಜಾಹೀರಾತು ಮೂಲಕ ಪ್ರದರ್ಶನ ಮಾಡಿಕೊಳ್ಳುವಂತಿಲ್ಲ. ಇದು ಕಾನೂನಲ್ಲಿ ನಿರ್ಬಂದಿಸಲ್ಪಟ್ಟಿದೆ. ಹಾಗೆನಾದರೂ ತಾವು ಮಾಡಿದಲ್ಲಿ ವಕೀಲರ ದುರ್ನಡತೆಗೆ ಶಿಕ್ಷೆಯನ್ನು ಎದುರಿಬೇಕಾಗುತ್ತದೆ, ಸಾಮಾನ್ಯರಿಗೂ ನ್ಯಾಯ ದೊರೆಕಿಸಲು ನಿರಂತರ ಅಧ್ಯಯನದಲ್ಲಿ ತೊಡಗಿಕೊಳ್ಳಬೇಕು, ನಿಮ್ಮದೆ ರೀತಿಯಲ್ಲಿ ಪ್ರಕರಣದ ಅರ್ಜಿಯನ್ನು ರೂಪಿಸಲು ರೂಢಿಸಿಕೊಳ್ಳಬೇಕು. ನ್ಯಾಯಾಲಯಗಳು, ಹಿರಿಯ ನ್ಯಾಯವಾದಿಗಳ ಬಗ್ಗೆ ಗೌರವ,ಆತ್ಮವಿಶ್ವಾಸವನ್ನು ಇರಿಸಿಕೊಂಡು ನಿಮ್ಮ ವೃತ್ತಿಯಲ್ಲಿ ಪದೋನ್ನತಿಯನ್ನು ಪಡೆಯಬೇಕೆಂದು ವಿಶೇಷ ಮಾರ್ಗದರ್ಶನವನ್ನು ನೀಡಿದರು.

ಝಿ ಟಿವಿ ಹಾಸ್ಯ ಕಲಾವಿದ ಸಂಜು ಬಸಯ್ಯ ದಂಪತಿಗಳು ಮಾತನಾಡಿ, ಇವತ್ತು ಕಾನೂನು ಶಿಕ್ಷಣ ಅಧ್ಯಯನವನ್ನು ಗ್ರಾಮೀಣ ವಿದ್ಯಾರ್ಥಿಗಳು ಪಡೆಯುತ್ತಿರುವುದು ನಿಜಕ್ಕೂ ತಾವೇ ಭಾಗ್ಯವಂತರು.ಏಕೆಂದರೆ ನಾನು ಶಿಕ್ಷಣಕ್ಕಿಂತ ಕಲೆಗೆ ಹೆಚ್ಚು ಆಸಕ್ತಿಯನ್ನು ಹೊಂದಿದ್ದರಿಂದ ಇವತ್ತು ಹಾಸ್ಯ ಕಲಾವಿದನಾಗಿದ್ದೇನೆ. ಈ ಕಲೆಗೆ ಸಮಾಜ ನೀಡಿದ ಪ್ರೋತ್ಸಾಹವೇ ಇವತ್ತು ತಮ್ಮ ಮುಂದೆ ಹಾಸ್ಯ ಕಲಾವಿದನ ಸ್ಥಾನಮಾನದಲ್ಲಿ ಗುರುತಿಸಿಕೊಂಡಿದ್ದೇನೆ,ಹಾಗಾಗಿ ತಾವು ಕಾನೂನು ಶಿಕ್ಷಣವನ್ನು ಆಸಕ್ತಿಯಿಂದ ಪಡೆದುಕೊಂಡು ಸಮಾಜದಲ್ಲಿ ಗುರುತಿಸಿಕೊಳ್ಳಬೇಕೆಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಸ್ಥೆ ಚೇರಮನ್ ಶಿರೀಶ. ಕೆ. ತುಡವೇಕರ ಮಾತನಾಡಿ, ವಕೀಲ ವೃತ್ತಿಯನ್ನು ಪ್ರವೇಶಿಸುವ ತಾವೆಲ್ಲರೂ ಸಮಾಜದಲ್ಲಿ ನ್ಯಾಯಯುತವಾಗಿ,ಪ್ರಾಮಾಣಿಕವಾಗಿ ನಿಮ್ಮ ಕರ್ತವ್ಯದಲ್ಲಿ ತೊಡಗಿಕೊಂಡು ಉತ್ತಮ ವ್ಯಕ್ತಿತ್ವವನ್ನು ಬೆಳೆಸಿಕೊಂಡು ಉತ್ತಮವಾದ ಜೀವನ ಸಾಗಲಿ ಎಂದು ಆಶಯ ವ್ಯಕ್ತಪಡಿಸಿದರು.

ಅಂತಿಮ ವರ್ಷದ ವಿದ್ಯಾರ್ಥಿಗಳಿಂದ ಸಂಸ್ಥೆಗೆ ಕಾಣಿಕೆ ಹಾಗೂ ಎಲ್ಲಾ ಗುರುಗಳಿಗೆ
ಸನ್ಮಾನಗಳನ್ನು ನೀಡುವ ಮೂಲಕ ಗುರುವಂದನೆ ಸಲ್ಲಿಸಲಾಯಿತು.

ಪ್ರಾಚಾರ್ಯ ಪಿ.ಎನ್.ಪಾಟೀಲ ಹಾಗೂ ಎಲ್ಲಾ ಸಿಬ್ಬಂದಿಗಳು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ವಾರ್ಷಿಕ ವರದಿಯನ್ನು ಡಿ.ಬಿ.ನರಗುಂದ ವಾಚಿಸಿದರು.
ಡಾ.ದಿವ್ಯಾ.ಸಿ.ಕಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಪ್ರಸಕ್ತ ವರ್ಷದ ವಾರ್ಷಿಕ ಕ್ರೀಡಾ ಚಟುವಟಿಕೆಗಳಲ್ಲಿ ಉತ್ತಮ ಸಾಧನೆ ಮಾಡಿದ ಎಲ್ಲಾ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಅತಿಥಿಗಳ ಸಮ್ಮುಖದಲ್ಲಿ ನೇರವೇರಿಸಿಕೊಟ್ಟರು,

ಅಂತಿಮ ವರ್ಷದವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸತ್ಕಾರವನ್ನು ಸಹ ನಡೆಸಲಾಯಿತು.

ಡಾ.ಡಿ.ಸಿ.ಕಟ್ಟಿ, ಜೋಸೆಫ್ ಅಂಬೋಜೆ, ಎಂ.ಎಸ್.ಪಟ್ಟಣಶೆಟ್ಟಿ, ಎಸ್.ವಿ.ಬಳಿಗಾರ, ಎಂ.ಎಸ್.ದೂಳ್ಳಪನವರ, ವಿದ್ಯಾರ್ಥಿ ಸಂಘದ ಪ್ರಧಾನ ಕಾರ್ಯದರ್ಶಿ ವಿರೇಶ್ ಸಂಗನಗೌಡರ್ ಉಪಸ್ಥಿತರಿದ್ದರು. ಸಂತೋಷ ಹಡಪದ ಕಾರ್ಯಕ್ರಮದ ಉಸ್ತುವಾರಿ ವಹಿಸಿದ್ದರು.

ಪಕ್ಕೀರಪ್ಪ, ಹಲಗತ್ತಿ ಪ್ರಾರ್ಥಿಸಿದರು. ಸಂದೀಪ ಸ್ವಾಗತ ಗೀತೆ ಹಾಡಿದರು. ಈಶ್ವರಯ್ಯ ಹೊಸಮಠ
ಸ್ವಾಗತಿಸಿದರು. ಇಮ್ರಾನ್, ಶಿರಸಂಗಿ ಪರಿಚಯಿಸಿದರು.
ಚೈತ್ರಾ ವಂದಿಸಿದರು. ಸಾವಿತ್ರಿ ಬಳಿಗಾರ ನಿರೂಪಿಸಿದರು.