ಬೆಳಗಾವಿ: ತಾನೊಬ್ಬ ಜನಪ್ರತಿನಿಧಿ ಎಂದು ಸುಳ್ಳು ಹೇಳಿ ಬೇರೆ ಬೇರೆ ಮೊಬೈಲ್ ಸಂಖ್ಯೆಗಳಿಂದ ಪೊಲೀಸ್‌ ಅಧಿಕಾರಿಗಳಿಗೆ ಕರೆ ಮಾಡಿ ಬೆದರಿಕೆ ಹಾಕುತ್ತಿದ್ದ ಆರೋಪಿಯನ್ನು ಗೋಕಾಕ ನಗರ ಶಹರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಮೂಡಲಗಿ ತಾಲೂಕಿನ ಅರಭಾವಿಮಠ ಗ್ರಾಮದ ಸುನೀಲ ವಿಠಲ ದಾಸರ (37) ಬಂಧಿತ. ತಾನು ಗೋಕಾಕ ಶಾಸಕ ರಮೇಶ ಜಾರಕಿಹೊಳಿ, ಬೆಳಗಾವಿ ಸಂಸದ ಜಗದೀಶ ಶೆಟ್ಟ‌ರ್ ಎಂದು ಹೇಳಿ ಪೊಲೀಸ್‌ ಅಧಿಕಾರಿಗಳಿಗೆ ಕರೆ ಮಾಡಿ, ತಾನು ಹೇಳಿದಂತೆ ಕೇಳಬೇಕೆಂದು ಪೀಡಿಸುತ್ತಿದ್ದ. ಇಲ್ಲದಿದ್ದರೆ ವರ್ಗಾವಣೆ ಮಾಡಿಸುವುದಾಗಿ ಬೆದರಿಸುತ್ತಿದ್ದ ಎಂದು ಗೋಕಾಕ ಸಿಪಿಐ ಗೋಪಾಲ ರಾಥೋಡ ತಿಳಿಸಿದರು.