ಬೆಳಗಾವಿ : ಕೇಂದ್ರದ ರೈಲ್ವೆ ಖಾತೆ ರಾಜ್ಯ ಸಚಿವರಾಗಿ ಕಾರ್ಯನಿರ್ವಹಿಸುತ್ತಿದ್ದಾಗ ಮಾರಕ ಕೊರೋನಾಕ್ಕೆ ಬಲಿಯಾದ ಸುರೇಶ ಅಂಗಡಿ ಅವರ ಸಾವಿಗೆ ಇದೀಗ ಭರ್ತಿ ನಾಲ್ಕು ವರ್ಷ ಆಗಿದೆ.

ನಾಲ್ಕು ವರ್ಷಗಳ ಹಿಂದೆ ಅಂದರೆ 2020 ರ ಸೆ.23 ರಂದು ಇದೇ ದಿನ ಸುರೇಶ ಅಂಗಡಿ ಅವರು ಮಾರಕ ಕೊರೋನಾ ರೋಗಕ್ಕೆ ತುತ್ತಾಗಿ ಮೃತಪಟ್ಟಿದ್ದರು. ನಾಲ್ಕು ಬಾರಿ ಬೆಳಗಾವಿ ಸಂಸದರಾಗಿ ಕಾರ್ಯ ನಿರ್ವಹಿಸಿದ್ದ ಸುರೇಶ ಅಂಗಡಿ ಅವರು, ಜನರ ಜೊತೆ ಬೆರೆತು ಅವರ ಕಷ್ಟ ಸುಖಗಳಲ್ಲಿ ನೇರವಾಗಿ ಭಾಗಿಯಾಗುತ್ತಿದ್ದರು. ರೈಲ್ವೆ ಖಾತೆ ರಾಜ್ಯ ಸಚಿವರಾಗಿ ಕಾರ್ಯನಿರ್ವಹಿಸುವಾಗ ಬೆಳಗಾವಿ-ಕಿತ್ತೂರು-ಧಾರವಾಡ ನೇರ ರೈಲ್ವೆ ಸೇರಿದಂತೆ ಬೆಳಗಾವಿ ಹಾಗೂ ಕರ್ನಾಟಕದ ರೈಲ್ವೆ ಕೆಲಸಗಳಿಗೆ ಅತ್ಯಂತ ವೇಗ ನೀಡಿ ಜನಪ್ರಿಯತೆ ಗಳಿಸಿದ್ದರು. ಕೊರೋನಾಕ್ಕೆ ಬಲಿಯಾದ ಅವರ ಸಾವು ಇಡೀ ದೇಶಾದ್ಯಂತ ಸುದ್ದಿಯಾಗಿತ್ತು.