ಬೆಳಗಾವಿ ಮೇಯರ್ ಆಗಿ ಸವಿತಾ ಆಯ್ಕೆ

ಬೆಳಗಾವಿ :
ಇಲ್ಲಿನ ನೂತನ ಮೇಯರ್ ಆಗಿ ಸವಿತಾ ಕಾಂಬಳೆ ಮತ್ತು ಉಪಮೇಯರ್ ಆಗಿ ಆನಂದ ಚವಾಣ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಇಂದು ಮೇಯರ್ ಮತ್ತು ಉಪಮೇಯರ್ ಹುದ್ದೆಯ ಪ್ರತಿಷ್ಠಿತ ಚುನಾವಣೆ ನಡೆದಿತ್ತು.

ಸವಿತಾ ಕಾಂಬಳೆ ಕೆಲ ವರ್ಷಗಳ ಹಿಂದೆ ಇದೇ ಬೆಳಗಾವಿ ಮಹಾನಗರ ‍ಪಾಲಿಕೆಯಲ್ಲಿ ಪೌರಕಾರ್ಮಿಕರಾಗಿ ಕೆಲಸ ಮಾಡಿದ್ದಾರೆ. ನಂತರ ಹೆಲ್ಮೆಟ್ ಕಂಪನಿಯೊಂದರಲ್ಲಿ ದಿನಗೂಲಿ ಕೆಲಸ ಮಾಡುತ್ತಿದ್ದರು. ನಂತರ ಊದುಬತ್ತಿ ತಯಾರಿಕಾ ಘಟಕ ಆರಂಭಿಸಿದ್ದರು. 2021ರಲ್ಲಿ ಅವರಿಗೆ ಒಲಿದು ಬಂದ ಅವಕಾಶ ಬಳಸಿಕೊಂಡು ಬಿಜೆಪಿಯಿಂದ ಪಾಲಿಕೆ ಸದಸ್ಯರಾದರು.