ಮಂಡ್ಯ : ಕರ್ನಾಟಕದ ಬೈಕ್ ಮೆಕಾನಿಕ್ ರಾತ್ರಿ ಬೆಳಗಾಗುವುದರ ಒಳಗೆ ಕೋಟ್ಯಾಧಿಪತಿಯಾಗಿದ್ದಾರೆ. ಅವರು ಲಾಟರಿಯಲ್ಲಿ 25 ಕೋಟಿ ರೂ.ಜಾಕ್ಪಾಟ್
ಗೆದ್ದುಕೊಂಡಿದ್ದಾರೆ.
ಮಂಡ್ಯ ಜಿಲ್ಲೆಯ ಪಾಂಡವಪುರ ಪಟ್ಟಣದ ಅಲ್ತಾಫ್ ಪಾಷಾ ಅವರು ಕೇರಳದ ಲಾಟರಿಯಲ್ಲಿ 25 ಕೋಟಿ ರೂ.ಬಹುಮಾನ ಗೆದ್ದಿದ್ದಾರೆ.
ಕೇರಳ ಲಾಟರಿಯ ತಿರುವೋಣಂ ಬಂಪರ್ ಬಹುಮಾನ ವಿಜೇತ ವಯನಾಡಿನಿಂದ ಟಿಕೆಟ್ ಖರೀದಿಸಿದ್ದಾರೆ. ಅವರು ವಯನಾಡಿನಲ್ಲಿರುವ ಸಂಬಂಧಿಕರ ಮನೆಗೆ ಬಂದಾಗ ಓಣಂ ಬಂಪರ್ ಟಿಕೆಟ್ ಖರೀದಿಸಿದರು. ಅವರು ಕಳೆದ 15 ವರ್ಷಗಳಿಂದ ನಿರಂತರವಾಗಿ ಕೇರಳ ಲಾಟರಿ ಟಿಕೆಟ್‌ಗಳನ್ನು ಖರೀದಿಸುತ್ತಿದ್ದಾರೆ. ಅವರು ವಯನಾಡಿನಲ್ಲಿ 500 ರೂ. ಕೊಟ್ಟು ಲಾಟರಿ ಖರೀದಿ ಮಾಡಿದ್ದರು. ಇದೀಗ 25 ಕೋಟಿ ರೂ. ಬಹುಮಾನ ಗೆದ್ದಿದ್ದಾರೆ.ಹಿಂದಿನ ಬಂಪರ್ ಬಹುಮಾನವನ್ನು ತಮಿಳುನಾಡಿನ ನಾಲ್ವರ ತಂಡ ಗೆದ್ದಿತ್ತು. ವಯನಾಡಿನ ಬತ್ತೇರಿಯಲ್ಲಿ ಎನ್‌ಜಿಎನ್‌ಆರ್ ಲಾಟರಿ ನಡೆಸುತ್ತಿರುವ ನಾಗರಾಜ ಅವರು ಟಿಕೆಟ್ ಮಾರಾಟ ಮಾಡಿದ್ದಾರೆ. ಅವರು ಒಂದು ತಿಂಗಳ ಹಿಂದೆ ಟಿಕೆಟ್ ಮಾರಾಟ ಮಾಡಿದ್ದರು. ಆದರೆ ಅದನ್ನು ಖರೀದಿಸಿದವರು ಯಾರು ಎಂದು ನೆನಪಿಲ್ಲ. ಬುಧವಾರ (ಅ.9) ಈ ವರ್ಷದ ತಿರುವೋಣಂ ಬಂಪರ್ ಡ್ರಾ ನಡೆಯಿತು. 71 ಲಕ್ಷ ಟಿಕೆಟ್‌ಗಳು ಮಾರಾಟವಾದ ಓಣಂ ಬಂಪರ್‌ನಲ್ಲಿ 25 ಕೋಟಿ ರೂ. ಮೊದಲ ಬಹುಮಾನ ಗೆದ್ದ ಅದೃಷ್ಟವಂತರು ಯಾರೆಂದು ಹುಡುಕುತ್ತಿದ್ದರು.ಕರ್ನಾಟಕ ಮಂಡ್ಯ ಜಿಲ್ಲೆಯ ಪಾಂಡವಪುರ ಮೂಲದ ಅಲ್ತಾಫ್ ಎಂಬುದು ಗೊತ್ತಾಗಿದೆ.
ನಾಗರಾಜ ಅವರು ಮಾರಾಟ ಮಾಡಿದ ಟಿಕೆಟ್‌ಗೆ ಬಹುಮಾನ ಬಂದಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು. ಅವರು ಪನಮರಮ್‌ನಲ್ಲಿರುವ ಎಸ್‌ಜೆ ಲಕ್ಕಿ ಸೆಂಟರ್‌ನಿಂದ ಟಿಕೆಟ್ ಖರೀದಿಸಿದ್ದಾರೆ. ನಾಗರಾಜ ಅವರು ಸಂಸ್ಥೆಯಿಂದ 2.5 ಕೋಟಿ ರೂಪಾಯಿ ಕಮಿಷನ್ ಪಡೆಯಲಿದ್ದಾರೆ.