ಮಂಗಳೂರು: ನಾನು ಕೃಷಿಕನ ಮಗ. ನನ್ನಂಥವರಿಗೆ ಟಿಕೆಟ್ ನೀಡಿ ಒಂದು ತಂಡವಾಗಿ ಗೆಲ್ಲಿಸಿಕೊಂಡು ಬರುವಲ್ಲಿ ಬಿಜೆಪಿ ಸಂಸದರು, ಶಾಸಕರು ಹಾಗೂ ಕಾರ್ಯಕರ್ತರು ಒಂದು ತಂಡವಾಗಿ ದುಡಿದಿದ್ದಾರೆ. ಇದು ಬಿಜೆಪಿಯಲ್ಲಿ ಮಾತ್ರ ಕಂಡುಬರಲು ಸಾಧ್ಯ ಎಂದು ಹೇಳಿದವರು ವಿಧಾನಪರಿಷತ್ತಿಗೆ ನೂತನವಾಗಿ ಆಯ್ಕೆಯಾಗಿರುವ ಕಿಶೋರ್ ಕುಮಾರ್ ಪುತ್ತೂರು.

ವಿಧಾನ ಪರಿಷತ್ ಚುನಾವಣೆಯಲ್ಲಿ ಗೆಲುವು ಸಾಧಿಸಿದ ನಂತರ ಚೊಚ್ಚಲ ಪ್ರತಿಕ್ರಿಯೆ ನೀಡಿದ ಕಿಶೋರ್ ಕುಮಾರ್ ಅವರು, ಪಂಚಾಯತ್ ರಾಜ್ ವ್ಯವಸ್ಥೆ ಬಗ್ಗೆ ಈ ಹಿಂದೆ ಕೋಟ ಶ್ರೀನಿವಾಸ ಪೂಜಾರಿ ಅವರು ಅತ್ಯಂತ ಸಮರ್ಥವಾಗಿ ಧ್ವನಿ ಎತ್ತಿದ್ದಾರೆ. ಆ ನಿಟ್ಟಿನಲ್ಲಿ ನಾನು ಸಹ ಮುಂದಿನ ದಿನಗಳಲ್ಲಿ ಪಂಚಾಯತ್ ರಾಜ್ ವ್ಯವಸ್ಥೆ ಬಲಪಡಿಸಲು ಶ್ರಮಿಸುತ್ತೇನೆ. ನನ್ನ ಗೆಲುವಿಗೆ ಕಾರಣೀಭೂತರಾಗಿರುವ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಸಮಸ್ತರನ್ನು ಅಭಿನಂದಿಸುವುದಾಗಿ ಅವರು ಪ್ರತಿಕ್ರಿಯಿಸಿದರು.

ಕಿಶೋರ ಕುಮಾರ್ ಪರಿಚಯ :
ದಕ್ಷಿಣ ಕನ್ನಡ ಸ್ಥಳೀಯ ಸಂಸ್ಥೆಗಳಿಂದ ನಡೆದ ವಿಧಾನ ಪರಿಷತ್‌ ಚುನಾವಣೆಗೆ ಟಿಕೆಟ್ ಪಡೆದು ಗೆಲುವು ಕಂಡಿರುವ ಕಿಶೋರ್ ಕುಮಾರ್ (45) ಕಟ್ಟಾ ಆರ್ ಎಸ್ ಎಸ್ ಕಾರ್ಯಕರ್ತರಾಗಿದ್ದಾರೆ.

ಈ ಸಲ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಬಲವಾಗಿರುವ ಬಂಟ ಮತ್ತು ಬಿಲ್ಲವ ಸಮುದಾಯದ ನಾಯಕರಿಗೆ ಟಿಕೆಟ್ ಸಿಗಬಹುದು ಎಂಬ ನಿರೀಕ್ಷೆ ಇತ್ತು, ಆದರೆ ಹಿಂದುಳಿದ ಸವಿತಾ ಸಮಾಜದ (ಓಬಿಸಿ) ಅಭ್ಯರ್ಥಿಗೆ ಟಿಕೆಟ್ ನೀಡಿ ಗೆಲ್ಲಿಸಿಕೊಂಡು ಬರಲಾಗಿದೆ. ಆರ್ ಎಸ್ ಎಸ್ ಕಾರ್ಯಕರ್ತರಾಗಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಬಜರಂಗದಳದ ಮಂಗಳೂರು ವಿಭಾಗ ಸಹ ಸಂಚಾಲಕರಾಗಿ, ಬಿಜೆಪಿ ಯುವ ಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷರಾಗಿ ಮತ್ತು ರಾಜ್ಯ ಘಟಕದ ಉಪಾಧ್ಯಕ್ಷರಾಗಿ ಕಾರ್ಯ ನಿರ್ವಹಿಸಿರುವ ಅವರು ಸದ್ಯ ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ.
2.5.1979 ರಲ್ಲಿ
ಬೊಟ್ಯಾಡಿಯಲ್ಲಿ ಜನಿಸಿದ ಕಿಶೋರ್ ಕುಮಾ‌ರ್ ರಾಜ್ಯ ಶಾಸ್ತ್ರದಲ್ಲಿ M A ಪದವೀಧರರಾಗಿದ್ದಾರೆ. ಕಾಲೇಜು ದಿನಗಳಲ್ಲೇ ಸಂಘದ ನೆರಳಲ್ಲಿ ನಾಯಕತ್ವ ಗುಣಗಳನ್ನು ಅಳವಡಿಸಿ ಬೆಳೆದವರು. ಪುತ್ತೂರು ವಿಧಾನಸಭಾ ಮತಕ್ಷೇತ್ರದಿಂದ ಕಣಕ್ಕಿಳಿಯಲು ಬಯಸಿದ್ದ ಅವರು ಎರಡು ಬಾರಿ ಟಿಕೆಟ್ ವಂಚಿತರಾಗಿದ್ದರು. ಆದರೂ ಟಿಕೆಟ್ ಸಿಗದೇ ಇದ್ದಾಗ ಧೃತಿಗೆಡದೆ ಕ್ಷೇತ್ರದಲ್ಲಿ ಅಭ್ಯರ್ಥಿಯ ಗೆಲುವಿಗೆ ಮುಂಚೂಣಿಯಲ್ಲಿ ನಿಂತು ಶ್ರಮಿಸಿರುವುದು ಗಮನಾರ್ಹ. ವಿದ್ಯಾರ್ಥಿ ಜೀವನದಲ್ಲಿ ಆರ್ ಎಸ್ ಎಸ್ ಮತ್ತು ಎಬಿವಿಪಿ ಕಡೆ ಒಲವು ಹೊಂದಿದ್ದ ಕಿಶೋರ್ ಕುಮಾರ್ ಅವರು ಅನೇಕ ಹೋರಾಟಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದರು. 2008 ರಲ್ಲಿ ಯುವ ಸಂಘಟನೆಯ ಜವಾಬ್ದಾರಿ ಹೊತ್ತು ನಳಿನ್ ಕುಮಾರ್ ಕಟೀಲು ಅವರು ಲೋಕಸಭೆಗೆ ಆಯ್ಕೆಯಾಗುವಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು.

* ಸಂಘದ ಕಲ್ಪನೆ ಶಾಖೆಯ ಮುಖ್ಯ ತರಬೇತುದಾರರಾಗಿ ಕಾರ್ಯ ನಿರ್ವಹಿಸಿದರು.

• 1994 ರಿಂದ 1998 ರವರೆಗೆ ಪುತ್ತೂರಿನ ನರಿಮೊಗರು ಪ್ರದೇಶದ RSS ಮಂಡಲ ಪ್ರವಾಸಿಯಾಗಿ ಸೇವೆ ಸಲ್ಲಿಸಿದರು.

*ವಿವಿಧ ಸ್ಥಾನಗಳಲ್ಲಿ (ತಾಲೂಕು ಪ್ರಮುಖ) ABVP ಯ ಅಡಿಯಲ್ಲಿ 2000 ರಿಂದ 2004 ರವರೆಗೆ ವಿದ್ಯಾರ್ಥಿ ಚಳವಳಿಗಳನ್ನು ನೇತೃತ್ವ ವಹಿಸಿದರು.

• ಬಜರಂಗ ದಳದ ಮಂಗಳೂರು ವಿಭಾಗ ಸಹ-ಸಂಚಾಲಕರಾಗಿ ಶ್ರಮಿಸಿದರು (ಉಡುಪಿ, ಮಂಗಳೂರು, ಕೊಡಗು ಮತ್ತು ಕಾಸರಗೋಡು)

• 2008 ರಿಂದ 2013 ರವರೆಗೆ ಭಾರತೀಯ ಜನತಾ ಯುವ ಮೋರ್ಚಾದ ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದರು 2014 ರಿಂದ 2016 ರವರೆಗೆ ಭಾರತೀಯ ಜನತಾ ಯುವ ಮೋರ್ಚಾದ ಕರ್ನಾಟಕ ರಾಜ್ಯ ಉಪಾಧ್ಯಕ್ಷರಾಗಿ ಕೆಲಸ ಮಾಡಿದರು.

*ದಕ್ಷಿಣ ಕನ್ನಡ RTI ಸಕ್ರಿಯವಾದಿಗಳ ಗುಂಪಿನ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದರು.

• ಪುತ್ತೂರು ಸಾಹಿತ್ಯ ಸಂಗಮದ ಗೌರವಾಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದರು.

*ದಕ್ಷಿಣ ಕನ್ನಡ ಜಿಲ್ಲಾ ಕಟ್ಟಡ ಸಾಮಗ್ರಿ ಪೂರೈಕೆದಾರರ ಒಕ್ಕೂಟದ (ಮಾಲೀಕರು ಮತ್ತು ಚಾಲಕರು) ಗೌರವಾಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದರು • 2021 ರಿಂದ 2023 ರವರೆಗೆ MESCOM ನ ನಾಮನಿರ್ದೇಶಿತ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದರು.

*ಬಿಜೆಪಿ ದ.ಕ. ಜಿಲ್ಲೆಯ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಕಾರ್ಯ ನಿರ್ವಹಿಸಿದರು.

*ಪ್ರಸ್ತುತ ಬಿಜೆಪಿ, ದ.ಕ. ಜಿಲ್ಲೆಯ ಪ್ರಧಾನ
ಕಾರ್ಯದರ್ಶಿ

ಇತರ ಅಂಶಗಳು :

• 2009 ರಿಂದ 2011 ರವರೆಗೆ ಆಳ್ವಾಸ್
ಶಿಕ್ಷಣ ಸಂಸ್ಥೆ, ಮೂಡುಬಿದ್ರಿಯಲ್ಲಿ ವಿದ್ಯಾರ್ಥಿ
ಕಲ್ಯಾಣಾಧಿಕಾರಿಯಾಗಿ ಕೆಲಸ ಮಾಡಿದ್ದಾರೆ.

ಮಂಗಳೂರು ವಿಶ್ವವಿದ್ಯಾಲಯಕ್ಕಾಗಿ ಸ್ವಾಮಿ

ವಿವೇಕಾನಂದ ಕಾಲೇಜಿನ ಸೆನೆಟ್ ಪ್ರತಿನಿಧಿ

*ಇಂಟರ್ ವಿಶ್ವವಿದ್ಯಾಲಯ ಕಬಡ್ಡಿ ಪಂದ್ಯಕ್ಕೆ
ಮಂಗಳೂರು ವಿಶ್ವವಿದ್ಯಾಲಯದ ಪ್ರತಿನಿಧಿ

• SDM ಕಾಲೇಜು, ಉಜಿರೆ ಕಾರ್ಯನಿರ್ವಹಿಸಿದ

ಯೋಗ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ.

ಹಿಂದಿನ ಚುನಾವಣೆ ಹಿನ್ನೋಟ : ಕಳೆದ (2021ರ ಡಿಸೆಂಬರ್ 10 ರಂದು) ಚುನಾವಣೆಯಲ್ಲಿ 6,012 ಮತ ಚಲಾವಣೆಯಾಗಿದ್ದು, 5,955 ಮತಗಳು ಸಿಂಧುವಾಗಿದ್ದವು. ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ, 3672, ಮಂಜುನಾಥ ಭಂಡಾರಿ 2079, ಎಸ್ಪಿಪಿಐ ಅಭ್ಯರ್ಥಿ 204 ಮತ ಪಡೆದಿದ್ದರು. ಕೋಟ ಶ್ರೀನಿವಾಸ ಪೂಜಾರಿ 1593 ಮತಗಳ ಅಂತರದಿಂದ ಗೆದ್ದಿದ್ದರು.