
ಶಿರ್ವ: ಬಂಟಕಲ್ಲು ದುರ್ಗಾಪರಮೇಶ್ವರಿ ದೇವಳದ ಪ್ರತಿಷ್ಠಾ ವರ್ಧಂತ್ಯುತ್ಸವ ಏ. 7ರಂದು ನಡೆಯಲಿದೆ.
ಏ. 6ರಂದು ಸಂಜೆ 6ಕ್ಕೆ ವಾಸ್ತು ರಾಕ್ಷೋಘ್ನ ಹೋಮ. 7ರಂದು ಬೆಳಿಗ್ಗೆ ವಿವಿಧ ಧಾರ್ಮಿಕ ಅನುಷ್ಠಾನಗಳು, ಮಹಾಗಣಪತಿ ಹೋಮ, ಪ್ರಧಾನ ಹೋಮ, ನವಕ ಕಲಶಾಭಿಷೇಕ, ಪರಿವಾರ ಸಾನ್ನಿಧ್ಯಗಳ ಆರಾಧನೆ, ಮಧ್ಯಾಹ್ನ ಮಹಾಪೂಜೆ, ಪಲ್ಲಕಿ ಉತ್ಸವ, ಪಲ್ಲ ಪೂಜೆ, ಅನ್ನಸಂತರ್ಪಣೆ, ಮಧ್ಯಾಹ್ನ 3ರಿಂದ ಶ್ರೀದುರ್ಗಾ ಯಕ್ಷ ಬಳಗ ಅವರಿಂದ ‘ಕಂಸ ವಧೆ ಮತ್ತು ವೈವಸ್ವತ ವಿಜಯ’ ಯಕ್ಷಗಾನ ಬಯಲಾಟ, ಸಂಜೆ 5.30ರಿಂದ ಭಜನೆ, ರಾತ್ರಿ ರಂಗಪೂಜೆ, ಬಲಿ, ರಥೋತ್ಸವ ನಡೆಯಲಿದೆ.
8ರಂದು ಬೆಳಿಗ್ಗೆ 6ರಿಂದ ಏಕಾಹ ಭಜನೆ ಆರಂಭ. 9ರಂದು ಅವಭ್ರತ ಸ್ನಾನ, ಭಜನಾ ಮಂಗಲೋತ್ಸವ ಜರುಗಲಿದೆ ಎಂದು ದೇವಳದ ಆಡಳಿತ ಮಂಡಳಿಯ ಪ್ರಕಟಣೆ ತಿಳಿಸಿದೆ.