ಬಂಟ್ವಾಳ: ಪುಂಜಾಲಕಟ್ಟೆ ರಾಷ್ಟ್ರೀಯ ಹೆದ್ದಾರಿ ತಿರುವು ರಸ್ತೆಯಲ್ಲಿ ಶುಕ್ರವಾರ ಶಾಮಿಯಾನ ಸಾಗಿಸುತ್ತಿದ್ದ ಲಾರಿ ಉರುಳಿ ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟಿದ್ದು, ಮೂವರು ಗಾಯಗೊಂಡಿದ್ದಾರೆ. ಪರಂಗಿಪೇಟೆಯ ಕಾರ್ತಿಕ್ ಮೃತಪಟ್ಟವರು. ಗಾಯಗೊಂಡವರನ್ನು ಪುಂಜಾಲಕಟ್ಟೆ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ನೀಡಿ ನಂತರ ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ವಗ್ಗ ಎಂಬಲ್ಲಿಂದ ಶಾಮಿಯಾನ ಮುಂತಾದ ಸಾಮಗ್ರಿ ತೆಗೆದುಕೊಂಡು ಪುಂಜಾಲಕಟ್ಟೆ ಕಡೆ ಹೋಗುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ.