ಬೆಂಗಳೂರು:
ರಾಜ್ಯದಲ್ಲಿ ವಾಹನಗಳಿಗೆ ಎಚ್‌ಎಸ್‌ಆರ್‌ಪಿ ನೋಂದಣಿ ಫಲಕ ಅಳವಡಿಕೆ ಅಂತಿಮ ದಿನವನ್ನು ಮೇ 17ಕ್ಕೆವಿಸ್ತರಿಸಿ ರಾಜ್ಯ ಸರ್ಕಾರ ಆದೇಶಿಸಿದೆ.

ಫೆ.17, ಎಚ್ ಎಸ್‌ಆರ್‌ಪಿ ಅಳವಡಿಕೆಗೆ ಅಂತಿಮ ದಿನವಾಗಿತ್ತು. ಆದರೆ, ಈವರೆಗೆ 18.50 ಲಕ್ಷ ವಾಹನಗಳು ಮಾತ್ರ ಎಚ್‌ಎಸ್‌ ಆರ್‌ಪಿ ಅಳವಡಿಸಿಕೊಂಡಿದ್ದು, ಇನ್ನೂ 1.81 ಕೋಟಿ ವಾಹನಗಳು ಎಚ್‌ಎಸ್‌ಆರ್‌ಪಿ ಅಳವಡಿಸಿಕೊಳ್ಳಬೇಕಿದೆ. ಈ ಕಾರಣದಿಂದಾಗಿ ಅಂತಿಮ ದಿನವನ್ನು 3 ತಿಂಗಳು ವಿಸ್ತರಿಸಲಾಗಿದೆ. ಮೇ 17ರೊಳಗೆ ಎಲ್ಲ ವಾಹನಗಳು ಎಚ್‌ಎಸ್‌ಆರ್‌ಪಿ ಅಳವಡಿಸಿಕೊಳ್ಳಬೇಕು ಎಂದು ಸರ್ಕಾರ ಆದೇಶದಲ್ಲಿ ತಿಳಿಸಿದೆ.

ವಂಚಕರ ಜಾಲಕ್ಕೆ ಬೀಳದಿರಿ :

ಕೋಡ್ ಲಿಂಕ್‌ಗಳನ್ನು ಆನ್‌ಲೈನ್‌ನಲ್ಲಿ ಹಾಕಿ ಜನರಿಗೆ ಮೋಸ ಮಾಡಲು ಬಲೆ ಬೀಸಿದ್ದಾರೆ. ಹೆಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್‌ಗೆ ಅಪ್ಪೆ ಮಾಡುವ ಮುನ್ನ ಇರಲಿ ಎಚ್ಚರ. ಆನ್‌ಲೈನ್‌ನಲ್ಲಿ ನಕಲಿ ಕ್ಯೂ ಆರ್ ಕೋಡ್ ಲಿಂಕ್‌ಗಳ ಹಾವಳಿ ಹೆಚ್ಚಾಗಿದೆ. ಅಪ್ಪಿ ತಪ್ಪಿ ನಕಲಿ ಕ್ಯೂ ಆರ್ ಕೋಡ್ ಕ್ಲಿಕ್ ಮಾಡಿದ್ರೆ ನಿಮ್ಮ ಖಾತೆಯಲ್ಲಿನ ಅಷ್ಟೋ ಹಣ ಮಾಯವಾಗುತ್ತದೆ.

ಹೆಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ನೋಂದಣಿ ಹೆಸರಲ್ಲಿ ಸೈಬರ್ ಕ್ರೈಂ ನಡೆಯುತ್ತಿದೆ. ನಕಲಿ ಲಿಂಕ್ ಹರಿಬಿಟ್ಟು ಕೆಲ ಖದೀಮರು ದುಡ್ಡು ಮಾಡಲು ಹೊರಟಿದ್ದಾರೆ. ನೋಂದಣಿ ಬಳಿಕ ಸಿಗುವ ಕ್ಯೂ ಆರ್ ಕೋಡ್‌ಗಳನ್ನು ನಕಲಿ ಮಾಡುತ್ತಿದ್ದಾರೆ. ಕ್ಯೂ ಆರ್ ಕೋಡ್ ಟಚ್ ಮಾಡುತ್ತಿದ್ದಂತೆ ಅಪರಿಚಿತರ ಖಾತೆಗೆ ಲಿಂಕ್ ಹೋಗುತ್ತಿದ್ದು ಸ್ವಲ್ಪ ಯಾಮಾರಿದ್ರು ನಿಮ್ಮ ಖಾತೆಯಲ್ಲಿದ್ದ ಹಣ ಖದೀಮರ ಪಾಲಾಗುತ್ತದೆ. ಈ ಬಗ್ಗೆ ಓರ್ವ ವ್ಯಕ್ತಿ ಎಕ್ಸ್ ಆ್ಯಪ್ ಮೂಲಕ ನಗರ ಪೊಲೀಸರಿಗೆ ದೂರು ನೀಡಿದ್ದಾರೆ. ಕ್ಯೂ ಆರ್ ಕೋಡ್ ಸಮೇತ ಪೊಲೀಸರಿಗೆ ದೂರು ನೀಡಿದ್ದು ಸೈಬರ್ ವಂಚಕರ ಬಗ್ಗೆ ಎಚ್ಚರಿಕೆಯಿಂದ ಇರುವಂತೆ ಪೊಲೀಸರು ಸೂಚನೆ ನೀಡಿದ್ದಾರೆ.