Join The Telegram | Join The WhatsApp |
ಬೆಳಗಾವಿ :
ಜೀವನ ವಿದ್ಯಾ ಮಿಷನ್ ಶಾಖೆ ಬೆಳಗಾವಿ ಇವರ ವತಿಯಿಂದ ಸದ್ಗುರು ಶ್ರೀ ವಾಮನರಾವ್ ಪೈ ಇವರ ಜನ್ಮಶತಮಾನೋತ್ಸವ ನಿಮಿತ್ತ ಜ.1 ರಂದು ಬೃಹತ್ ರಕ್ತದಾನ ಶಿಬಿರದ ಆಯೋಜನೆ ಮಾಡಲಾಗಿದೆ.
ಪ್ರತಿಯೊಂದು ಕೃತಿಯೂ ರಾಷ್ಟ್ರಹಿತದ್ದು, ವಿಶ್ವಶಾಂತಿಯದು ಈ ಘೋಷವಾಕ್ಯದ ಅನುಸಾರ ರಾಷ್ಟ್ರಕ್ಕೆ ಸಮರ್ಪಿತ ಹೀಗೆ ಸಮಾಜ ಹಿತ ನೋಡಿಕೊಂಡು ವಿವಿಧ ಸ್ತರದಲ್ಲಿ ಜೀವನವಿದ್ಯಾ ಮಿಷನ್ ಕಾರ್ಯ ಮಾಡುತ್ತಿದೆ. ಆ ಪ್ರಯುಕ್ತ ಜ. 1 ರಂದು ಭಾನುವಾರ ಬೃಹತ್ ರಕ್ತದಾನ ಶಿಬಿರದ ಆಯೋಜನೆ ಮಾಡಲಾಗಿದೆ.
ರಕ್ತದಾನ ಶಿಬಿರ ಸಮಾದೇವಿ ಗಲ್ಲಿಯಲ್ಲಿರುವ ಸಮಾದೇವಿ ಕಲ್ಯಾಣ ಮಂಟಪದಲ್ಲಿ ಭಾನುವಾರ ಬೆಳಗ್ಗೆ 10:00 ರಿಂದ 1:00 ವರೆಗೆ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದ ಉದ್ಘಾಟನೆಯನ್ನು ಕೆ.ಎಲ್.ಇ. ಆಸ್ಪತ್ರೆಯ ವೈದ್ಯ ಡಾ. ಮಾಧವ ಪ್ರಭು ಹಾಗೂ ಕೆ.ಎಲ್.ಇ. ಬ್ಲಡ್ ಬ್ಯಾಂಕ್ ಉಸ್ತುವಾರಿ ಶ್ರೀಕಾಂತ ವಿರ್ಗೆಯವರ ಅಮೃತ ಹಸ್ತದಿಂದ ಶಿಬಿರ ನೆರವೆರಲಿದೆ.
ಅವಶ್ಯಕ ಇದ್ದವರಿಗೆ ಜೀವದಾನ ಮಾಡುವ ಮುಖಾಂತರ ಒಂದು ಸಮಾಜದ ಉಪಯುಕ್ತ ಕಾರ್ಯದಿಂದ ಹೊಸವರ್ಷವನ್ನು ಸ್ವಾಗತ ಮಾಡೋಣ ಎಂದು ಜೀವನವಿದ್ಯಾ ಮಿಷನ್ ವತಿಯಿಂದ ಆಹ್ವಾನಿಸಲಾಗಿದೆ. ಆಸಕ್ತರು ಈ ಶಿಬಿರದಲ್ಲಿ ಪಾಲ್ಗೊಂಡು ರಕ್ತದಾನ ಮಾಡಬೇಕೆಂದು ಜೀವನವಿದ್ಯಾ ಮಿಷನ್ ವಿನಂತಿಸಿಕೊಂಡಿದೆ.
Join The Telegram | Join The WhatsApp |