ಬೆಳಗಾವಿ : ಬೆಳಗಾವಿ ಆರ್ ಪಿ ಡಿ ಕಾಲೇಜು ಎದುರಿನ ಶ್ರೀ ಕೃಷ್ಣ ಮಠ ಹಾಗೂ ಸಭಾಭವನದಲ್ಲಿ ಶ್ರೀ ವಿಶ್ವೇಶ ತೀರ್ಥ ಶ್ರೀ ಪಾದಂಗಳವರ ಪಂಚಮ ಮಹಾ ಸಮಾರಾಧನಾ ಮಹೋತ್ಸವ ಜ.1 ಮತ್ತು 2 ರಂದು ನಡೆಯಲಿದೆ.
ಜ.1 ರಂದು ಸಂಜೆ 4 ರಿಂದ 6 ಗಂಟೆವರೆಗೆ ಭಜನಾ ಮಂಡಳಿಯವರಿಂದ ಹರಿಭಜನೆ ಕಾರ್ಯಕ್ರಮ, ಸಂಜೆ 6 ರಿಂದ 8 ರವರೆಗೆ ಬೆಂಗಳೂರಿನ ವಿದ್ವಾನ್ ಶ್ರೀ ಅನಂತಚಾರ್ಯ ಕುಲಕರ್ಣಿ ಅವರಿಂದ ಶ್ರೀ ವಿಶ್ವೇಶ ತೀರ್ಥರ ಬಹುಮುಖ ವ್ಯಕ್ತಿತ್ವ ವಿಷಯವಾಗಿ ಪ್ರವಚನ ಏರ್ಪಡಿಸಲಾಗಿದೆ.
ಜ.2 ರಂದು ಬೆಳಗ್ಗೆ 6 ಕ್ಕೆ ಧನುರ್ಮಾಸ ಪೂಜೆ, 9 ಕ್ಕೆ ವಾಯುಸ್ತುತಿ, ಪುನಶ್ಚರಣ, 10:30 ಕ್ಕೆ ವಿದ್ವಾಂಸರಿಂದ ಶ್ರಾಸ್ತ್ರನುವಾದ ಹಾಗೂ ಪ್ರವಚನ, ಮಧ್ಯಾಹ್ನ 12:30ಕ್ಕೆ ರಥೋತ್ಸವ, ನೈವೇದ್ಯ, ಮಹಾ ಮಂಗಳಾರತಿ, 1 ಕ್ಕೆ ತೀರ್ಥ ಪ್ರಸಾದ, ಸೇವಾ ಕರ್ತೃಗಳಿಗೆ ಪ್ರಸಾದ ವಿತರಣೆ, ಸಂಜೆ 4 ಗಂಟೆಗೆ ಭಜನಾ ಮಂಡಳಿಯವರಿಂದ ಹರಿಭಜನೆ, 6 ರಿಂದ 8 ಗಂಟೆವರೆಗೆ ಹರಿ ಭಜನೋಪಾಸಕರ ತಂಡದಿಂದ ದಾಸವಾಣಿ ಕಾರ್ಯಕ್ರಮ, ಗಾಯಕ ದತ್ತಕುಮಾರ ಮುತಾಲಿಕ್ ದೇಸಾಯಿ ಹಾಗೂ ತಂಡದವರಿಂದ ಕಾರ್ಯಕ್ರಮ ನಡೆಯಲಿದೆ. ಯೋಗೇಶ್ ರಾಮದಾಸ್ ಹಾರ್ಮೋನಿಯಂ, ಕೃಷ್ಣ ತಬಲ ಸೇವೆ ನೀಡುವರು. ರಾತ್ರಿ 8 ರಿಂದ ಪೂಜೆ, ಮಂತ್ರಾಕ್ಷತೆ, ಪ್ರಸಾದ ವಿತರಣೆ ನಡೆಯಲಿದೆ ಎಂದು ಶ್ರೀಕೃಷ್ಣ ಮಠದ ಪ್ರಕಟಣೆ ತಿಳಿಸಿದೆ.