Join The Telegram | Join The WhatsApp |
ಬೆಳಗಾವಿ-
ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡುವ ಕುರಿತು ನಿರ್ಧಾರ ತೆಗೆದುಕೊಳ್ಳಲು ಸಮುದಾಯ ನೀಡಿರುವ ಡೆಡ್‌ಲೈನ್ ಇಂದು ಮುಕ್ತಾಯಗೊಳ್ಳುತ್ತಿದ್ದು, ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಏನು ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂಬತ್ತ ಕುತೂಹಲ ಮೂಡಿದೆ. ಇಂದು ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ಬಳಿಕ ಮೀಸಲಾತಿ ಬಗ್ಗೆ ಸಿಎಂ ತೀರ್ಮಾನ ಪ್ರಕಟಿಸುವ ಸಾಧ್ಯತೆ ಇದೆ. ಬೆಳಗಾವಿಯ ಸುವರ್ಣಸೌಧದಲ್ಲಿ ಸಂಜೆ ಐದಕ್ಕೆ ಸಚಿವ ಸಂಪುಟ ಸಭೆ ನಿಗದಿಯಾಗಿದೆ. ಡಿಸೆಂಬರ್ 29ಕ್ಕೆ 2ಎ ಮೀಸಲಾತಿ ಘೋಷಿಸುವ ಭರವಸೆಯನ್ನು ಸಿಎಂ ನೀಡಿದ್ದರು.
ಡಿ.22ರಂದು ಪಂಚಮಸಾಲಿ ಸಮಾಜದಿಂದ ಪಂಚಲಕ್ಷ ವಿರಾಟ್ ಸಮಾವೇಶ ನಡೆದಿತ್ತು. ಸಮಾವೇಶದಲ್ಲಿ 2 ಲಕ್ಷಕ್ಕಿಂತ ಅಧಿಕ ಪಂಚಮಸಾಲಿ ಸಮುದಾಯದವರು ಪಾಲ್ಗೊಂಡಿದ್ದರು. ಅಂದು ಪಂಚಮಸಾಲಿ ಶಾಸಕರ ನಿಯೋಗಕ್ಕೆ ಸಿಎಂ ಭರವಸೆ ನೀಡಿದ್ದ ಹಿನ್ನೆಲೆಯಲ್ಲಿ ಸುವರ್ಣಸೌಧ ಮುತ್ತಿಗೆ ನಿರ್ಧಾರದಿಂದ ಸಮುದಾಯ ಹಿಂದೆ ಸರಿದಿತ್ತು.
Join The Telegram | Join The WhatsApp |