ಬೆಳಗಾವಿ :
ದಿನಾಂಕ 02-01-2024 ರಂದು ಬೆಳಗಾವಿಯ ಗಾಂಧಿ ಭವನದಲ್ಲಿ ಪಂಚಮಸಾಲಿ ಸಮಾಜದ ರಾಜ್ಯ ಪದಾಧಿಕಾರಿಗಳ ಸಭೆ ನಡೆಯಿತು.

ಪಂಚಮಸಾಲಿಗಳ ಪ್ರಥಮ ಪೀಠಾಧಿಪತಿ ಶ್ರೀ ಜಯಮೃತ್ಯುಂಜಯ ಮಹಾಸ್ವಾಮಿಗಳು ನೇತೃತ್ವ ಮತ್ತು ಸಾನ್ನಿಧ್ಯ ವಹಿಸಿದ್ದರು. ಸಭೆಯಲ್ಲಿ ಸಮಾಜದ ಮುಖಂಡರನ್ನು ಪಕ್ಷಾತೀತವಾಗಿ ಅವಹೇಳನಕಾರಿ ಮಾಡುವುದನ್ನು ಖಂಡಿಸಲಾಯಿತು. ಅದೇ ತೆರನಾಗಿ ಸ್ವಾಮೀಜಿಗಳ ವಿರುದ್ಧ ಯಾರಾದರು ಮಾತನಾಡಿದರೆ ಅವರಿಗೆ ತಕ್ಕ ಪಾಠ ಕಲಿಸುವುದಾಗಿ ಎಚ್ಚರಿಕೆ ನೀಡಲಾಯಿತು. ಸಂಘಟನೆ ಬಗ್ಗೆ ಸುದೀರ್ಘವಾಗಿ ಚರ್ಚೆ ಮಾಡಲಾಯಿತು. ಕಾಡಾ ಮಾಜಿ ಅಧ್ಯಕ್ಷ ಅಡಿವೇಶ ಇಟಗಿ ಅವರನ್ನು ಪಂಚಮಸಾಲಿಗಳ ರಾಜ್ಯ ರೈತ ಘಟಕದ ಕಾರ್ಯಧ್ಯಕ್ಷರನ್ನಾಗಿ ನೇಮಿಸಿ, ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ ಘೋಷಣೆ ಮಾಡಿದರು. ಮಾಜಿ ಶಾಸಕ ಹಾಗೂ ರಾಷ್ಟೀಯ ಮಹಾ ಪ್ರಧಾನ ಕಾರ್ಯದರ್ಶಿ H.S. ಶಿವಶಂಕರಣ್ಣ,ರಾಷ್ಟ್ರೀಯ ಕಾನೂನು ಸಲಹೆಗಾರ ದಿನೇಶ ಪಾಟೀಲ,ಹಿರಿಯ ಮುಖಂಡರಾದ ರುದ್ರಗೌಡ ಪಾಟೀಲ, ದಾವಣಗೆರೆ ಜಿಲ್ಲಾಧ್ಯಕ್ಷರು ಅಶೋಕ ಗೋಪನಾಳ, ಬೆಳಗಾವಿ ಜಿಲ್ಲಾಧ್ಯಕ್ಷ R. K.ಪಾಟೀಲ, ನಿಂಗಪ್ಪಣ್ಣ ಫಿರೋಜಿ, ಬೆಳಗಾವಿ ಜಿಲ್ಲಾ ಯುವಘಟಕ ಅಧ್ಯಕ್ಷ ಗುಂಡು ಪಾಟೀಲ,ರಾಷ್ಟಿಯ ಪಂಚಸೇನಾ ಅಧ್ಯಕ್ಷ Dr.ಬಸನಗೌಡ ಪಾಟೀಲ ನಾಗರಾಳಹುಲಿ,ರಾಜ್ಯ ಪಂಚಸೇನಾ ಅಧ್ಯಕ್ಷ ರುದ್ರಗೌಡ ಪಾಟೀಲ, ಶಿವಮೊಗ್ಗ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಅಕ್ಕರೆ, ಮೈಸೂರು ಜಿಲ್ಲಾಧ್ಯಕ್ಷ ಶಂಭು ಪಟೇಲ್‌, ಕೊಡಗು ಜಿಲ್ಲಾಧ್ಯಕ್ಷ ಮೋಹನ, ಕಿತ್ತೂರು ಅಧ್ಯಕ್ಷ ರುದ್ರಗೌಡ ಪಾಟೀಲ, ಪ್ರಮುಖರಾದ ರಾಮನಗೌಡ ಪಾಟೀಲ, ರಾಜು ಮಗದುಮ್, ಸುರೇಶ ಹೊಸಪೇಟೆ,ಶಿವು, ತಾಲೂಕ ಘಟಕದ ಅಧ್ಯಕ್ಷರು, ಪದಾಧಿಕಾರಿಗಳು ಉಪಸ್ಥಿತರಿದ್ದರು.