
ಬೆಳಗಾವಿ: ನಗರದ ಕೆಎಲ್ಇ ಸಂಸ್ಥೆಯ ರಾಜಾ ಲಖಮಗೌಡ ವಿಜ್ಞಾನ (ಸ್ವಾಯತ್ತ) ಮಹಾವಿದ್ಯಾಲಯದಲ್ಲಿ -2025 ರ ಪಾಲಕರ ಸಮಾವೇಶವನ್ನು ದಿನಾಂಕ
:09-04-2025 ರಂದು ಸರ್ ಸಿ ವಿ ರಾಮನ್ ಸಭಾಂಗಣದಲ್ಲಿ ಮಧ್ಯಾಹ್ನ :03:00 ಗಂಟೆಗೆ ಆಯೋಜಿಸಲಾಯಿತು.
ಪ್ರಾಂಶುಪಾಲೆ ಡಾ ಜ್ಯೋತಿ ಎಸ್ ಕವಳೇಕರ
ಮಾತನಾಡಿ, ಸಂಸ್ಥೆ ಮತ್ತು ಕಾಲೇಜಿನ ಕಿರು ಸಾಕ್ಷ್ಯಚಿತ್ರ ಸಾದರಪಡಿಸಿ, ವಿವಿಧ ಚಟುವಟಿಕೆಗಳ ಬಗ್ಗೆ ವಿವರಿಸಿದರು. ನಮ್ಮ ಮಹಾವಿದ್ಯಾಲಯವು ಕೌಶಲ್ಯ ಆಧಾರಿತ ಶಿಕ್ಷಣ ನೀಡುತ್ತಿದ್ದೇವೆ. ಹಾಜರಾತಿ ಮತ್ತು ಕಿರು ಪರೀಕ್ಷೆ ,ವಾರ್ಷಿಕ ಪರೀಕ್ಷೆಯ ವಿಧಾನ ಗಳ ಕುರಿತು ತಿಳಿಹೇಳಿದರು. ವಿವಿಧ ಸ್ನಾತಕೋತ್ತರ ವಿಭಾಗಗಳಾದ ರಸಾಯನಶಾಸ್ತ್ರ, ಭೌತಶಾಸ್ತ್ರ, ಗಣಿತಶಾಸ್ತ್ರ ಹಾಗೂ ಬಿಸಿಎ ವಿಭಾಗದ ಕುರಿತು ಸವಿಸ್ತಾರವಾಗಿ ಹೇಳಿದರು.
ಎನ್ ಸಿ ಸಿ ಭೂದಳ ,ವಾಯುದಳ ಮತ್ತು ಎನ್ ಎಸ್, ಎಸ್ ,ರೆಡ್ ಕ್ರಾಸ್ ಹಾಗೂ ಕಾಲೇಜಿನ ವಿವಿಧ ಘಟಕಗಳ ಬಗ್ಗೆ ಹೇಳಿದರು . ಕಾಲೇಜಿನಲ್ಲಿ ಜರುಗುವ ಸಾಂಸ್ಕೃತಿಕ ಕಾರ್ಯಕ್ರಮಗಳ ಕುರಿತು ಸಾದರಪಡಿಸಿದರು. ಮುಂಬರುವ ದಿನಗಳಲ್ಲಿ ಜನಪದ ಜಾತ್ರೆ ಉತ್ಸವ ಆಚರಿಸಲಾಗುವದೆಂದು ಹೇಳಿದರು. ನಮ್ಮ ಮಹಾವಿದ್ಯಾಲಯದ ಕ್ರೀಡಾಪಟುಗಳು ರಾಜ್ಯ ಮತ್ತು ರಾಷ್ಟ್ರಮಟ್ಟದ ಕ್ರೀಡೆಯಲ್ಲಿ ಭಾಗವಹಿಸಿ ಅನೇಕ ಪಾರಿತೋಷಕ ಬಹುಮಾನ , ಪ್ರಮಾಣಪತ್ರ ಪಡೆದುಕೊಂಡು ಸಂಸ್ಥೆಗೆ ಕೀರ್ತಿ ತಂದಿದ್ದಾರೆಂದು ಹೇಳಿದರು. ಅನೇಕ
ಪಾಲಕರು ತಮ್ಮ ಅನಿಸಿಕೆ ವ್ಯಕ್ತ ಪಡಿಸಿದರು.ಸೋನಾಲಿ ಪ್ರಾರ್ಥಿಸಿದರು. ಪ್ರೊ ಎಸ್.ಡಿ. ಗೋರಿನಾಯಕ ಸ್ವಾಗತಿಸಿದರು. ಎಂ.ಎಸ್. ಬಾಗಿ ವಂದಿಸಿದರು. ಪ್ರೊ. ಅಲ್ಪಜಾ ಬಾಗವಾನ ಮತ್ತು ಪ್ರೊ.ಪೂಜಾ ಮೆಳವಂಕಿ ನಿರೂಪಿಸಿದರು.
ಕಾರ್ಯಕ್ರಮದಲ್ಲಿ 100 ಕ್ಕೂ ಹೆಚ್ಚು ಪಾಲಕರು ಉಪಸ್ಥಿತರಿದ್ದರು. ಕಾಲೇಜಿನ ಸಿಬ್ಬಂದಿ ವರ್ಗದವರು ಹಾಜರಿದ್ದರು.