ಬೆಳಗಾವಿ: ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ 2022ರ ಡಿಸೆಂಬರ್ 30ರಂದು ಹಾರೂಗೇರಿ ಮೂಲದ ಸದ್ಯ ಬೆಳಗಾವಿ ರಾಮತೀರ್ಥನಗರದ ಮೀನಾಕ್ಷಿ ಗೋಪಾಲ ಕುಶಪ್ಪನವರ್ ಅವರ ಬ್ಯಾಗಿನಲ್ಲಿದ್ದ ನೂರು ಗ್ರಾಂ ಬಂಗಾರದ ಆಭರಣ ಕಳ್ಳತನ ಮಾಡಿದ ಪ್ರಕರಣವನ್ನು ಭೇದಿಸಿರುವ ಬೆಳಗಾವಿ ಪೊಲೀಸರು ಕೊನೆಗೂ ಈ ಸಂಬಂಧ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ವಿತರಣೆ ವೇಳೆ ಅವರು ಬೇರೆ ಪ್ರಕರಣದಲ್ಲೂ ಭಾಗಿಯಾಗಿರುವ ಸಂಗತಿ ಬೆಳಕಿಗೆ ಬಂದಿದೆ.

ಎಪಿಎಂಸಿ ಪೊಲೀಸ್ ಠಾಣೆ ಬಳಿಯ ಬಾಕ್ಸೈಟ್ ರಸ್ತೆ ವಿದ್ಯಾನಗರ ರಿಚ್ಚಾನಾ ಸಿರಾಜ್ ಪಟ್ಟಣ (40), ಗೋಕಾಕ ಕರೆಮ್ಮ ಗುಡಿ ಬಳಿಯ ಎಪಿಎಂಸಿ ಮಾವರ್ಕರ್ ನಗರದ ಮಲ್ಲಿಕ್ ಜಾನ್ ದಸ್ತಾಗೀರ ಸಾಬ ಶೇಖ್ 26 ಮತ್ತು ಚವಾಟಗಲ್ಲಿಯ ಸದ್ಯ ಹಳೆಗಾಂಧಿನಗರದ ಬ್ರಹ್ಮಲಿಂಗನಗರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿರುವ ವಿನಾಯಕ ಅರುಣ ಹಿಂಡಲಗೇಕರ(32) ಅವರನ್ನು
ಇವರಿಗೆ ಬಂಧನಕ್ಕೆ ಒಳಪಡಿಸಿ ಸದರಿಯವರಿಂದ 1] ಬಂಗಾರದ ಚೈನ್1,. ತೂಕ=20 ಗ್ರಾಂ. 2] ಬಂಗಾರದ ಬಳೆಗಳು 2, ತೂಕ=40, ಗ್ರಾಂ, 3] ಬಂಗಾರದ ಮಂಗಳ ಸೂತ್ರ-1 ತೂಕ=40, ಹೀಗೆ ತೂಕ=100 ಗ್ರಾಂ ತೂಕದ ಬಂಗಾರದ ಆಭರಣ ಆಕಿ=7,00,000/- ರೂ. ಕಿಮ್ಮತ್ತಿನ ಮಾಲನ್ನು ಜಪ್ತ ಮಾಡಲಾಗಿದೆ.