ಬೆಳಗಾವಿ :
ಬೆಳಗಾವಿ ಅಂಚೆ ವಿಭಾಗದ ಪಿಂಚಣಿದಾರರಿಗಾಗಿ ಡಿಸೆಂಬರ್ 13, 2023 ರಂದು ನಗರದ ಅಂಚೆ ಅಧೀಕ್ಷಕರ ಕಾರ್ಯಾಲಯದಲ್ಲಿ ಪಿಂಚಣಿ ಅದಾಲತ್ಅನ್ನು ನಡೆಸಲಾಗುವುದು.
ಸೇವೆಯಿಂದ ನಿವೃತ್ತರಾದ ನೌಕರರ ಪಿಂಚಣಿ ಮತ್ತು ಇತರೆ ನಿವೃತ್ತಿ ಸೌಲಭ್ಯಗಳ ಹಾಗೂ ಕುಟುಂಬ ಪಿಂಚಣಿದಾರರ ಅಹವಾಲುಗಳೆನಾದರೂ ಇದ್ದಲ್ಲಿ ಅವುಗಳನ್ನು ಅದಾಲತ್ ನಲ್ಲಿ ಆಲಿಸಲಾಗುವುದು. ನಿವೃತ್ತಿ ಹೊಂದಿದ ಗ್ರಾಮೀಣ ಅಂಚೆ ಸೇವಕರು ಮತ್ತಿತರರಿಗೆ ಈ ಅದಾಲತಿನಲ್ಲಿ ಪಾಲ್ಗೊಳ್ಳಲು ಅವಕಾಶವಿಲ್ಲ.
ಪಿಂಚಣಿ ಅದಾಲತಿನಲ್ಲಿ ಹಾಜರಾಗುವವರಿಗೆ ಯಾವುದೇ ತರಹದ ಭತ್ಯೆ ನೀಡಲಾಗುವುದಿಲ್ಲ.
ಅದಾಲತ್ ಅಲ್ಲಿ ಚರ್ಚಿಸುವ ಅಹವಾಲುಗಳಿದ್ದಲ್ಲಿ, ಅಂಚೆ ಅಧೀಕ್ಷಕರ ಕಾರ್ಯಾಲಯ, ಪೊಸ್ಟಮ್ಯಾನ್ ವೃತ್ತದ ಹತ್ತಿರ, ಪ್ರಧಾನ ಅಂಚೆ ಕಚೇರಿ ಕಟ್ಟಡ, ಬೆಳಗಾವಿ-590001 ಇಲ್ಲಿ ಡಿ.11 2023 ರ ಒಳಗಾಗಿ ಅಹವಾಲುಗಳನ್ನು ಲಿಖಿತ ರೂಪದಲ್ಲಿ ಕಳುಹಿಸಬೇಕು ಎಂದು ಅಂಚೆ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ