ಬೆಳಗಾವಿ: ನಿಪ್ಪಾಣಿ ತಾಲೂಕು ಅಕ್ಕೋಳ ಗ್ರಾಮದ ಬಾಳೋಬಾ ಮಾಳ ಪ್ರದೇಶದಲ್ಲಿ ಇಬ್ಬರನ್ನು ಭೀಕರವಾಗಿ ಕೊಲೆಗೈಯ್ಯಲಾಗಿದೆ.

ಬುಧವಾರ ರಾತ್ರಿ ಈ ಘಟನೆ ನಡೆದಿದೆ. ಮಂಗಲ್ ಅವರ ಮಗಳು ಪ್ರಾಜಕ್ತಾ ಅವರನ್ನು ರವಿ ಪ್ರೀತಿಸುತ್ತಿದ್ದ. ಈ ಕಾರಣಕ್ಕೆ ತಾಯಿ ಮಂಗಲ್ ನಮ್ಮ ಮನೆಗೆ ಬರಬೇಡ ಎಂದು ತಮ್ಮ ಸಂಬಂಧಿಯಾಗಿರುವ ರವಿ ಖಾನಪ್ಪ ಗೋಳಗೆ ಹೇಳಿದ್ದರು. ಇದರಿಂದ ಸಿಟ್ಟಿಗೆದ್ದ ಆತ ತನ್ನ ಸ್ನೇಹಿತರೊಂದಿಗೆ ಆಗಮಿಸಿ ಭೀಕರವಾಗಿ ಕೊಲೆ ಮಾಡಿದ್ದಾನೆ.

ಅದರಿಂದ ಸಿಟ್ಟಿಗೆದ್ದ ಆತ ಯುವತಿಯ ತಾಯಿ ಮಂಗಲ್ ಸುಕಾಂತ ನಾಯಕ (50) ಮತ್ತು ಯುವತಿಯ ತಮ್ಮ ಪ್ರಜ್ವಲ್ ಸುಕಾಂತ್ ನಾಯಕ (18 )ಇವರನ್ನು ಇನ್ನು ಕೆಲವರ ಜೊತೆ ಸೇರಿ ಬರ್ಬರವಾಗಿ ಕೊಲೆ ಮಾಡಿದ್ದಾನೆ. ಮಗಳು ಬಚಾವ್ ಆಗಿದ್ದು ರಕ್ಷಣೆ ಮಾಡಲಾಗಿದೆ.
ರವಿ ಲಕ್ಷ್ಮಣ ನಾಯಕ( 32) ಮತ್ತು ಇತರರು ಇವರಿಬ್ಬರನ್ನು ಕೊಲೆಗೈದಿದ್ದಾರೆ. ನನ್ನ ಮಗಳ ಜೊತೆ ಮಾತನಾಡಬೇಡ ಎಂದ ಕಾರಣ ಯುವಕ ಇವರಿಗೆ ತಕ್ಕ ಪಾಠ ಕಲಿಸಲೇಬೇಕು  ಎಂದು ಸಂಚು ರೂಪಿಸಿ ಕೊಲೆಗೈದಿದ್ದು ನಿಪ್ಪಾಣಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.