ಬೆಳಗಾವಿ : ಪಂಜಾಬ್ ರಾಜ್ಯದ ಅಮಸ್ಟರ್ ಗುರು ನಾನಕ ವಿಶ್ವವಿದ್ಯಾಲಯದಲ್ಲಿ ನವಂಬರ 6 ರಿಂದ 15ರ ವರೆಗೆ ಜರುಗಿದ ಭಾರತೀಯ ಅಖಿಲ್ ಭಾರತ್ ವಿಶ್ವ ವಿದ್ಯಾಲಯ ಟೆ ಕಾಂಡೋ ಕ್ರೀಡಾ ಸ್ಪರ್ಧೆಯಲ್ಲಿ ರಾಜಾ ಲಖಮಗೌಡ ವಿಜ್ಞಾನ ಮಹಾವಿದ್ಯಾಲಯ ಬೆಳಗಾವಿಯ ಬಿಸಿಎ ವಿಭಾಗ ವಿದ್ಯಾರ್ಥಿ ಕರಣಸೇನ ದೇಸಾಯಿ ಕಂಚಿನ ಪದಕ ಪಡೆದಿದ್ದಾನೆ.
ಅಖಿಲ ಭಾರತೀಯ ಮುಕ್ತ ರಾಷ್ಟ್ರೀಯ
ಟೆಕ್ವಾಂಡೊ ಪುರುಷರ ಕ್ರೀಡಾಕೂಟದ ಆಯ್ಕೆ ಪ್ರಕ್ರಿಯು ದಿನಾಂಕ 16 ಮತ್ತು 13 ಡಿಸೆಂಬರ್ 2024. ರಂದು ಆಯೋಜಿಸಲಾಗಿತ್ತು. ಗೋವಾ ರಾಜ್ಯದ ಮಾಪಸಾ ನಗರದಲ್ಲಿ ಜರುಗಿತು. ಪುರುಷರ ವಿಭಾಗದಲ್ಲಿ ಕಾಲೇಜಿನ ಕ್ರೀಡಾಪಟುವಾದ ಕರಣಸೇನ ದೇಸಾಯಿ ಸ್ವರ್ಣ ಪದಕ ಪಡೆದುಕೊಂಡಿದ್ದಕ್ಕೆ
ಕೆಎಲ್ಇ ಸಂಸ್ಥೆಯ ಕಾರ್ಯಧ್ಯಕ್ಷರಾದ
ಡಾ. ಪ್ರಭಾಕರ ಕೋರೆ ಹಾಗೂ ಆಡಳಿತ ಮಂಡಳಿಯವರು ಮಹಾವಿದ್ಯಾಲಯದ ಪ್ರಾಚಾರ್ಯರು ಸಿಬ್ಬಂದಿ ವರ್ಗದವರು, ಕಾಲೇಜಿನ ದೈಹಿಕ ನಿರ್ದೇಶಕ ಡಾ. ಶಿವಾನಂದ ಬುಲಬುಲಿ ಅಭಿನಂದಿಸಿದ್ದಾರೆ.